ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗಕ್ಕೆ ನೀರು ಪೂರೈಸಿ: ಆಗ್ರಹ

ಬರ ಕಾಮಗಾರಿ: ಗೋಶಾಲೆ, ಮೇವು ನೀಡಲು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
Last Updated 23 ಮಾರ್ಚ್ 2017, 9:10 IST
ಅಕ್ಷರ ಗಾತ್ರ

ವಿಜಯಪುರ: ಭೀಕರ ಬರಗಾಲ, ಬೇಸಿಗೆ ಪ್ರಖರದಿಂದ ಬಳಲಿ ಬೆಂಡಾಗಿ ರುವ ವಿಜಯಪುರ ನಗರ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅವಶ್ಯಕವಾಗಿರುವ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಬುಧವಾರ ಪ್ರತಿಭಟನಾ ಮನವಿ ಸಲ್ಲಿಸಲಾಯಿತು.

ವಿಜಯಪುರ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಾತ್ಯತೀತ ಜನತಾ ದಳದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪಡೇಕನೂರ ಮಾತನಾಡಿ ಪಂಚ ನದಿಗಳ ಬೀಡು, ಕರ್ನಾಟಕದ ಪಂಜಾಬ್‌ ಎಂದು ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಜನ ಜಾನು ವಾರುಗಳಿಗೆ ಕುಡಿಯುವ ನೀರಿಗಾಗಿ ತತ್ವಾರ ಅನುಭವಿಸುವಂತಾಗಿದೆ.

ಮುಂಬರುವ ದಿನಗಳಲ್ಲಿ ಬೇಸಿಗೆ ಪ್ರಖರವಾಗಲಿದೆ. ಯಾವುದೇ ಗ್ರಾಮಕ್ಕೆ ಹೋದರೂ ಕೊಳವೆ ಬಾವಿ, ತೆರೆದ ಬಾವಿಗಳ ಎದುರಿನಲ್ಲಿ ಸಾಲು ಸಾಲು ಕೊಡಗಳ ದೃಶ್ಯ ಸಾಮಾನ್ಯವಾಗಿದೆ. ಇನ್ನೂ ಮಹಾ ನಗರವಾದ ವಿಜಯಪುರದಲ್ಲೂ ಸ್ಥಿತಿ ಭಿನ್ನವಾಗಿಲ್ಲ.

ಹಲವು ವಾರ್ಡ್‌ಗಳಲ್ಲಿ 10ರಿಂದ 15ದಿನಕ್ಕೊಮ್ಮೆ ಕುಡಿಯುವ ನೀರಿನ ಸರಬರಾಜು ಆಗುತ್ತಿದೆ. ಅನೇಕ ಕೊಳವೆ ಬಾವಿಗಳು ಅಂತರ್ಜಲ ಇಲ್ಲದೆ ಬತ್ತಿ ಹೋಗಿವೆ. ಇನ್ನಾದರೂ ಜಿಲ್ಲಾಡಳಿತ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ ಮಾತನಾಡಿ ಮಹಾನಗರ ಪಾಲಿಕೆಯು ಸಮಸ್ಯೆಗಳ ಆಗರವಾಗಿದೆ. ಆದ್ದರಿಂದ ಜಿಲ್ಲಾಡಳಿತವೇ ಮುಂದೆ ಬಂದು ಪೈಲಟ್ ಯೋಜನೆ ಮೂಲಕ ನೀರಿನ ಬವಣೆ ತಪ್ಪಿಸಬೇಕು. ಗೋಶಾಲೆಗಳಿಗೆ ಸಾಕಷ್ಟು ಮೇವುಗಳನ್ನು ಒದಗಿಸಬೇಕು ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ ಸತತ ಬರಗಾಲದ ಹಣೆಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆಯು ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಮಸ್ಯೆಯಿಂದ ಬಳಲುತ್ತಿದೆ. ನಗರದ ಹಲವು ಕಡೆ ಕುಡಿವ ನೀರಿನ ತತ್ವಾರ ಉಂಟಾಗಿದೆ. ಕೂಡಲೇ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು ಹಾಗೂ ಕೊಳವೆಬಾವಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆರ್.ಎ.ನಿಕ್ಕಂ, ಎಸ್.ಎಸ್.ಖಾದ್ರಿ ಇನಾಮದಾರ, ಶಹಾಜಾನ ಖಾದ್ರಿ, ಪಾಲಿಕೆ ಸದಸ್ಯ ಪೀರಾ ಅಗಸಬಾಳ, ಅನ್ನಪೂರ್ಣ ಬಡಿಗೇರ, ರಜಾಕಬಿ ಬಾಗವಾನ, ಜಯಶ್ರೀ ಚಿಗರಿ, ರಮೀಜಾ ನದಾಫ, ಬೀಬಿ ಹಾಜರಾ ಗಂಗೂರ, ಖಾಜಾ ಪುಂಗಿವಾಲೆ, ಯಾಕೂಬ ಸಿಕ್ಲೋಡಿ, ಮುರ್ತುಜ ಕಾಂಕಲ, ಮೆಹಬೂಬ ಹೆಬ್ಬಾಳ, ಸಿಕಂದರ ಹಂಚನಾಳ, ಹೈದ್ರಾಲಿ ಹುಲ್ಲೂರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT