ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆಂಟ್‌ ಇದ್ರಷ್ಟೇ ನೀರು!

ಜೀವಜಲಕ್ಕಾಗಿ ಪುಟಗಾಂವ್ ಬಡ್ನಿ ಗ್ರಾಮಸ್ಥರ ಪರದಾಟ
Last Updated 23 ಮಾರ್ಚ್ 2017, 9:14 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ನಮ್ಮೂರಾಗ ಕರೆಂಟ್‌ ಇದ್ರ ನೀರು ಬರತೈತ್ರಿ. ಇಲ್ಲಾಂದ್ರ ನೀರಿನ ಸಲುವಾಗಿ ನಾವು ಭಾಳ ಕಷ್ಟ ಪಡ ಬೇಕಾಗತೈತ್ರಿ’ ಎಂದು ಇಲ್ಲಿಗೆ ಸಮೀಪದ ಪುಟಗಾಂವ್ ಬಡ್ನಿಯ ನಿವಾಸಿಗಳಾದ ಶರಣಪ್ಪ ಕುಂಬಾರ, ರಮೇಶಪ್ಪ ಹಳ್ಳಿ ಕೇರಿ, ಶಂಕ್ರಪ್ಪ ಕಟ್ಟೆಣ್ಣವರ, ದೇವಪ್ಪ ಕಟ್ಟೆ ಣ್ಣವರ, ಶಾಂತವ್ವ ಬಡಿಗೇರ, ವಿಜಯ ಲಕ್ಷ್ಮೀ ಕಟ್ಟೆಣ್ಣವರ, ಭರಮಣ್ಣ ಹಳ್ಳಿಕೇರಿ ತಮ್ಮ ನೋವು ತೋಡಿಕೊಂಡರು.

ಈ ಗ್ರಾಮದಲ್ಲಿ ವಿದ್ಯುತ್‌ ಇದ್ದರೆ ಮಾತ್ರ ಬೋರ್‌ವೆಲ್‌ಗಳ ಮೂಲಕ ಗ್ರಾಮಸ್ಥರಿಗೆ ಕುಡಿಯಲು ಮತ್ತು ಬಳಕೆಗೆ ನೀರು ದೊರೆಯುತ್ತದೆ. ಆದರೆ ವಿದ್ಯುತ್ ಕೈ ಕೊಟ್ಟರೆ ಗ್ರಾಮಸ್ಥರಿಗೆ ನೀರು ದೊರೆ ಯುವುದು ಬಹಳ ಕಷ್ಟ.

ಈಗ ದಿನಕ್ಕೆ ಕೇವಲ 5–6 ತಾಸು ತ್ರೀಫೇಸ್ ವಿದ್ಯುತ್ ಲಭ್ಯ ಆಗುತ್ತಿದೆ. ಈ ಸಮಯದಲ್ಲಷ್ಟೆ ಬೋರ್‌ವೆಲ್‌ಗಳು ಚಾಲೂ ಆಗಿ ಗ್ರಾಮಸ್ಥರಿಗೆ ನೀರು ಸಿಗು ತ್ತದೆ. ನೀರು ಬಂದಾಗ ಗ್ರಾಮದ ಓಣಿಯ ನಿವಾಸಿಗಳು ಜಗಳ ಗದ್ದಲ ಮಾಡುತ್ತ ನೀರು ತುಂಬಿಸಿಕೊಳ್ಳುವುದು ಇಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದ ಗ್ರಾಮಸ್ಥರು ಜನತೆ ನೀರಿನ ತತ್ವಾರ ಎದುರಿಸುತ್ತಿದ್ದಾರೆ.

9 ಸದಸ್ಯ ಬಲ ಹೊಂದಿರುವ ಪುಟ ಗಾಂವ್ ಬಡ್ನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಹಿರೇಮಲ್ಲಾಪುರ ಒಳಪಡು ತ್ತದೆ. ಪುಟಗಾಂವ್‌ ಬಡ್ನಿ ದೊಡ್ಡ ಹಳ್ಳಿ ಆಗಿದ್ದು ಅಂದಾಜು 4,500 ಜನಸಂಖ್ಯೆ ಇದೆ.

ಸದ್ಯ ಬಡ್ನಿಯಲ್ಲಿ 6 ಮತ್ತು ಹಿರೇ ಮಲ್ಲಾಪುರದಲ್ಲಿ 2 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ ಆದ್ರಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿನ ‘ತುಂಬ’ ಹಳ್ಳದಲ್ಲಿನ ಬಾವಿಯಿಂದ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮ ಪಂಚಾಯ್ತಿ ಅಭಿ ವೃದ್ಧಿ ಅಧಿಕಾರಿ ಉಮೇಶ ಬಾರಕೇರ ಹೇಳುತ್ತಾರೆ.

ಅಲ್ಲದೆ ಬಡ್ನಿಯಲ್ಲಿ 4 ಮತ್ತು ಹಿರೇಮಲ್ಲಾಪುರದಲ್ಲಿನ ಎರಡು ಬೋರ್‌ವೆಲ್‌ಗಳಿಗೆ  ಕೈ ಪಂಪು ಅಳವಡಿ ಸುವ ಮೂಲಕ ಗ್ರಾಮಸ್ಥರು ನೀರಿನ ಸಮಸ್ಯೆ ಎದುರಿಸದಂತೆ ಕ್ರಮಕೈಗೊಳ್ಳುತ್ತಿ ದ್ದೇವೆ ಎಂದು ತಿಳಿಸಿದರು. ಎರಡು ವರ್ಷಗಳ ಮಳೆ ಕೊರತೆ ಯಿಂದ ಬಡ್ನಿ ಹಳ್ಳ ಖಾಲಿ ಆಗಿದೆ. ಹೀಗಾಗಿ ಗ್ರಾಮಸ್ಥರು, ಜಾನುವಾರುಗಳು ನೀರಿಗಾಗಿ ಪರಿತಪಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT