ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ವರದೆ: ನೀರಿಗಾಗಿ ಪರದಾಟ

ನದಿಯಲ್ಲಿ ಕಡಿಮೆಯಾದ ನೀರಿನ ಹರಿವು: ನೀರು ಪೋಲು ಮಾಡದಿರಲು ಪುರಸಭೆ ಮನವಿ
Last Updated 23 ಮಾರ್ಚ್ 2017, 9:19 IST
ಅಕ್ಷರ ಗಾತ್ರ

ಸವಣೂರ: ಜೀವನದಿ ವರದೆ  ನದಿಯ ಒಡಲು ಬರಿ ದಾಗಿದ್ದು, ಇದರಿಂದ ಸವಣೂರ ಮೋತಿ ತಲಾಬ ಕೆರೆಗೆ ನೀರಲ್ಲದಂತಾಗಿದೆ. ಮಾರ್ಚ ಮೊದಲ ವಾರದಲ್ಲಿಯೇ ಕೆರೆ ಬರಿದಾಗಿರುವುದು ಬರದ ಭೀಕರತೆಗೆ ಸಾಕ್ಷಿಯಾಗಿ ಜನರ ಆತಂಕಕ್ಕೆ ಕಾರಣವಾಗಿದೆ. ವರದಾ ನದಿಯಿಂದ ಕೆರೆಗೆ ನೀರು  ಹರಿಯುವುದು ಕ್ಷೀಣಿಸಿದ್ದು, ಪಟ್ಟಣದಲ್ಲಿ ನೀರಿನ ತೊಂದರೆ ತಲೆದೋರಿದೆ.

ನದಿಯಿಂದ ಅಳವಡಿಸಿರುವ ಪಂಪ್‌ಗಳಿಂದ ನೀರು ಪಡೆಯಲಾಗು ತ್ತಿದ್ದು, ನೀರಿನ ಹರಿವು ಇಲ್ಲದಂತಾಗಿದೆ. ಮಳೆಗಾಲ  ಆರಂಭಕ್ಕೆ ಮೂರು ತಿಂಗಳು ಬಾಕಿ ಇರುವ ಹೊತ್ತಲ್ಲಿಯೇ ನದಿ ಬರಿದಾಗಿರುವುದು ಸಾರ್ವಜನಿಕರಲ್ಲಿ ದಿಗಿಲು ಮೂಡಿಸಿದೆ.

ಹಾನಗಲ್ ತಾಲ್ಲೂಕಿನ ಮೂಲಕ ತಾಲ್ಲೂಕನ್ನು ಪ್ರವೇಶಿಸುವ ವರದಾ ನದಿಯು ಹೊಸರಿತ್ತಿ ಕಡೆಗೆ ಹರಿಯುತ್ತದೆ. ಬಿಸಿಲಿನ ತಾಪ ಹಾಗೂ ಕಳೆದ ಮಳೆಗಾಲದಲ್ಲಿ ಬಿದ್ದ ಕಡಿಮೆ ಮಳೆಯಿಂದಾಗಿ ನದಿ ಸಂಪೂರ್ಣ ಬತ್ತಿ ಬರಿದಾಗಿದೆ.

ಈ ಮೊದಲು ಆರು ದಿನಗಳಿಗೊಮ್ಮೆ ಪಟ್ಟಣದಲ್ಲಿ ನೀರು ಬಿಡಲಾಗುತ್ತಿತ್ತು. ಈಗ ನೀರು ಕಡಿಮೆಯಾಗಿರುವುದರಿಂದ 10 ದಿನಗಳಿಗೊಮ್ಮೆ ನೀರು ಬಿಡಲಾಗು ತ್ತಿದೆ. ವರದಾ ನದಿ ಪಾತ್ರದಲ್ಲಿನ ಕೆರೆಗಳಿಗೆ ನೀರನ್ನು ಶೇಖರಣೆ ಮಾಡಿಕೊಂಡು ಅಲ್ಲಿಂದ ಕುಡಿಯುವ ನೀರನ್ನು ಸರಬ ರಾಜು ಮಾಡಿ ಕೊಳ್ಳಲಾಗುತ್ತಿತ್ತು. ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ಕುಡಿಯುವ ನೀರಿನ ಕುರಿತು ಜಾಗೃತಿ ವಹಿಸಬೇಕಿದೆ.

ನದಿ ಇಕ್ಕೆಲಗಳಲ್ಲಿ ನಿರೀಕ್ಷೆಗೂ ಮೀರಿ ನಿರ್ಮಾಣವಾಗಿರುವ ರೈತರ ಹೊಲ ಹಾಗೂ ತೋಟಗಳಿಗೆ ನದಿ ನೀರನ್ನು ಯಥೇಚ್ಛವಾಗಿ ಬಳಕೆ ಮಾಡಿಕೊಳ್ಳ ಲಾಗುತ್ತಿದೆ.

ಇದೂ ಸಹ ನದಿ ನೀರು ಬರಿದಾಗಲು ಒಂದು ಕಾರಣ. ನದಿಯ ದಡದ ಹೊಲ ಹಾಗೂ  ತೋಟಗಳಿಗೆ ಹಾಯಿಸಿರುವ ನೀರು ಇಂಗುವ ಮೂಲಕ ಮತ್ತೆ ಕೆರೆ ಸೇರುವ ಪ್ರಮಾಣ ಕಡಿಮೆ ಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.
-ಮಾಲತೇಶ ಹರ್ಲಾಪೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT