ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮಂಡಳಿಯಲ್ಲಿ ದಾಖಲಾತಿ ಸಲ್ಲಿಕೆ

ಶಾಸಕಿ ಶಶಿಕಲಾ ಜೊಲ್ಲೆ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಪಾಟೀಲ ಉತ್ತರ
Last Updated 23 ಮಾರ್ಚ್ 2017, 9:33 IST
ಅಕ್ಷರ ಗಾತ್ರ

ನಿಪ್ಪಾಣಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ನೀರಿನ ಪ್ರಮಾಣದ ಬೇಡಿಕೆಯ ವಿವರಗಳನ್ನು, ಯೋಜನೆಗಳ ದಾಖಲಾತಿಗಳನ್ನು ಉತ್ತರ/ಪ್ರತ್ಯುತ್ತರಗಳನ್ನು ನ್ಯಾಯಮಂಡಳಿಗೆ ಸಲ್ಲಿಸಿವೆ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಸದನದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

‘2013–14ನೇ ಸಾಲಿನ ದರ ಪಟ್ಟಿಯ ದರಗಳನ್ವಯ ಕಳಸಾ ನಾಲಾ ಯೋಜನೆಗೆ ರೂ.475.93 ಕೋಟಿ ಹಾಗೂ ಬಂಡೂರಿ ಯೋಜನೆಗೆ ₹365 ಕೋಟಿ ಆಗುವುದೆಂದು ಅಂದಾಜಿಸಲಾಗಿದೆ. 16.12.2010ರ ಕೇಂದ್ರ ಅಧಿಸೂಚನೆಯಲ್ಲಿ ರಚಿಸಲಾಗಿರುವ ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣವು 6.9.2012ರಿಂದ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ತಿಳಿಸಿದರು.

‘ಕಳಸಾ ನಾಲಾ ಯೋಜನೆಯ ಕೂಡು ಕಾಲುವೆ ಕಾಮಗಾರಿಯನ್ನು ಅಕ್ಟೋಬರ್ 2006ರಲ್ಲಿ ಅರಣ್ಯೇತರ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. ಕಳಸಾ ಯೋಜನೆಯ ಪ್ರಮುಖ ಭಾಗವಾದ ಕಳಸಾ ಕೂಡು ಕಾಲುವೆಯ 5.15 ಕಿ.ಮೀ. ನಿರ್ಮಾಣ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಹೆಡ್‌ ರೆಗ್ಯೂಲೇಟರ್‌ ಟ್ರಫ್‌ ಹಾಗೂ ಇನ್‌ಲೆಟ್‌ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕಳಸಾ ನಾಲಾ ಹಾಗೂ ಬಂಡೂರಿ ನಾಲಾ ಯೋಜನೆಗಳ ಅರಣ್ಯ ಪ್ರದೇಶದಲ್ಲಿನ ಕಾಮಗಾರಿಗಳನ್ನು ನ್ಯಾಯಾಧೀಕರಣದಿಂದ ನೀರಿನ ಹಂಚಿಕೆಯಾದ ನಂತರ ಸಕ್ಷಮ ಪ್ರಾಧಿಕಾರಗಳ ತೀರುವಳಿ/ಅನುಮತಿ ಪಡೆದ ನಂತರ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’

‘ಕಳಸಾ–ಬಂಡೂರಿ ಯೋಜನೆಗೆ ಅಗತ್ಯವಿರುವ 7.56 ಟಿ.ಎಂ.ಸಿ. ನೀರಿನ ಪ್ರಮಾಣವೂ ಸೇರಿದಂತೆ ನೀರಾವರಿ, ಕುಡಿಯುವ ನೀರು ಹಾಗೂ ಜಲ ವಿದ್ಯುತ್‌ ಯೋಜನೆಗಳ ಅಗತ್ಯತೆಗಾಗಿ ಒಟ್ಟು 36.558 ಟಿ.ಎಂ.ಸಿ. ನೀರಿನ ಹಂಚಿಕೆಗಾಗಿ ರಾಜ್ಯವು ನ್ಯಾಯಾಧೀಕರಣದ ಮುಂದೆ ಸ್ಟೇಟ್‌ಮೆಂಟ್‌ ಆಫ್‌ ಕ್ಲೇಮ್ಸ್‌ಗಳನ್ನು ಮತ್ತು ಅಗತ್ಯ ದಾಖಲಾತಿಗಳನ್ನು/ಯೋಜನಾ ವರದಿಗಳನ್ನು ದಾಖಲಿಸಿದೆ.

ನ್ಯಾಯಾಧೀಕರಣವು ಇದೆ ಮಾರ್ಚ್‌ 21ರಿಂದ 31ರ ವರೆಗೆ ಮುಂದಿನ ಕಲಾಪ ನಿಗದಿಪಡಿಸಿದ್ದು ಜಲವಿಜ್ಞಾನಕ್ಕೆ ಸಂಬಂಧಿಸಿದಂತೆ ಕಣಿವೆ ರಾಜ್ಯಗಳು ಪ್ರಸ್ತುತಪಡಿಸಿರುವ ಪರಿಣಿತ ಸಾಕ್ಷಿದಾರರುಗಳ ಪಾಟೀ ಸವಾಲು ನಡೆಯಲಿದೆ.

ಪ್ರಕರಣದ ಕುರಿತು ಗೋವಾ ರಾಜ್ಯದ ಹಾಗೂ ಕೇಂದ್ರ ಸಚಿವರೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆನ್ಯಾಯಾಧೀಕರಣದ ಹೊರಗೆ ಮೂರೂ ರಾಜ್ಯಗಳ ನಡುವೆ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT