ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ವ್ಯವಸ್ಥಾಪಕನ ಸೋಗಿನಲ್ಲಿ ಮೋಸ

Last Updated 23 ಮಾರ್ಚ್ 2017, 9:47 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಎಸ್‌ಬಿಎಂ ಬ್ಯಾಂಕ್‌ನ ವ್ಯವಸ್ಥಾಪಕ ಎಂದು ಕರೆ­ಮಾಡಿ ಎಟಿಎಂ ಪಾಸ್‌ವರ್ಡ್ ಪಡೆದು ಗ್ರಾಹಕರೊಬ್ಬರಿಗೆ ₹15ಸಾವಿರ ಪಂಗನಾಮ ಹಾಕಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಪಟ್ಟಣದ ಖಾಸಗಿ ಶಾಲೆಯೊಂದರ ಶಿಕ್ಷಕ ವಿಜಯಕುಮಾರ್ ಎನ್ನುವವರು ಹಣ ಕಳೆದುಕೊಂಡಿದ್ದಾರೆ. ಬಿಹಾರ ಮೂಲದ ವ್ಯಕ್ತಿಯೊಬ್ಬ ಬ್ಯಾಂಕ್ ವ್ಯವ­ಸ್ಥಾಪಕ ಎಂದು ಅರೆಬರೆ ಕನ್ನಡದಲ್ಲಿ ಮಾತ­ನಾಡಿ ಶಿಕ್ಷಕನನ್ನು ನಂಬಿಸಿದ್ದಾನೆ. ನಿಮ್ಮ ಖಾತೆಯಲ್ಲಿ ₹ 125 ಕಡಿತ­ಗೊಂಡಿದ್ದು ನಿಮ್ಮ ಖಾತೆಗೆ ಪುನಃ ಜಮೆ ಮಾಡಬೇಕಿದೆ. ಎಟಿಎಂ ಕಾರ್ಡ್ ಮೇಲಿನ ಸಂಖ್ಯೆ ತಿಳಿಸಿ ಎಂದು ಕರೆಯಲ್ಲಿ ಕೇಳಿದ್ದಾರೆ.

ಶಿಕ್ಷಕ ನಂಬಿ ಇತ್ತ ಎಟಿಎಂ ಪೇಸ್ ಸಂಖ್ಯೆ ತಿಳಿಸುತ್ತಿದ್ದಂತೆ ಮೊಬೈಲ್‌ಗೆ ಮೆಸೇಜ್‌ ಬಂದಿದೆ, ಈ ನಂಬರ್‌ಗೆ ಪಾಸ್‌ವರ್ಡ್‌ ಕಳಿಸುವಂತೆ ಮೊಬೈಲ್‌ ನಂಬರ್‌ ನೀಡಿದ್ದಾರೆ. ಇದನ್ನೆಲ್ಲ ನಂಬಿ ಪಾಸ್‌ವರ್ಡ್‌ ಕಳುಹಿ­ಸಿದ ಕೂಡಲೇ ಖಾತೆಯಿಂದ ಮೊದಲು ₹ 10 ಸಾವಿರ ಡ್ರಾ ಮಾಡಿಕೊಂಡ ವಂಚಕ ಐದು ನಿಮಿಷದ ನಂತರ ಮತ್ತೇ ₹ 5ಸಾವಿರ ಪಡೆದಿದ್ದಾರೆ.

ಈ ಕುರಿತಂತೆ ಅನುಮಾನಗೊಂಡ ಶಿಕ್ಷಕ ಖಾತೆಯಲ್ಲಿದ್ದ ಬಾಕಿ ₹ 7 ಸಾವಿರ ಹಣವನ್ನು ಡ್ರಾ ಮಾಡಿ­ಕೊಂಡಿದ್ದಾರೆ.  ಈ ಕುರಿತಂತೆ ಪಟ್ಟಣದ ಠಾಣೆಯಲ್ಲಿ ಶಿಕ್ಷಕ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT