ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಲೋಕ ತೆರೆದಿಟ್ಟ ‘ಡಿಸೈನ್‌ ಡ್ಯಾಪಲ್‌’

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಕ್ಷಣಾ ಇಲಾಖೆ ನಡೆಸುವ ಫ್ಯಾಷನ್‌ ಡಿಸೈನಿಂಗ್‌ ಸಂಸ್ಥೆಯ ವಿನ್ಯಾಸಗಳು ಹೇಗಿರಬಹುದು? ಆ ಹಸಿರು ಬಣ್ಣದ ಯೂನಿಫಾರಂನ ಪರಿಕಲ್ಪನೆಯಲ್ಲಿ  ಏನೇನು ಫ್ಯಾಷನ್‌ ತರಬಹುದು? ಎಂಬ ಕುತೂಹಲ ಇದ್ದೇ ಇರುತ್ತದೆ.

ಆದರೆ, ‘ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಅಂಡ್ ಡಿಸೈನ್’ ವಿದ್ಯಾರ್ಥಿಗಳು ವಿನ್ಯಾಸ ಮಾಡಿದ ವಸ್ತ್ರಗಳ ಪ್ರದರ್ಶನ ‘ಡಿಸೈನ್‌ ಡ್ಯಾಪಲ್ 2017’ ಈ ಪ್ರಶ್ನೆಗಳಿಗೆ ಉತ್ತರ ನೀಡಿದೆ.

ಬುಧವಾರ ನಡೆದ ಸಂಸ್ಥೆಯ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಉಡುಗೆಗಳು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಸಂಗ್ರಹಕ್ಕಿಂತ ಕಡಿಮೆಯೇನೂ ಇರಲಿಲ್ಲ. ಯೂನಿಫಾರಂ ಥೀಮ್‌ ಅಲ್ಲದೇ ಕೆಂಪು, ಕಪ್ಪು, ಬಿಳಿಬಣ್ಣದ ಹೆಣ್ಣುಮಕ್ಕಳ ಆಧುನಿಕ ಉಡುಪುಗಳು ಗಮನಸೆಳೆದವು.

ಸ್ವಾತಿ ಅವರು ಅತ್ಯುತ್ತಮ ಅನುಶೋಧನಾತ್ಮಕ ಪ್ರಶಸ್ತಿ, ಮಿಲಿಂದ್ ಮೌರ್ಯ ಅವರು ಅತ್ಯುತ್ತಮ ಸೃಜನಶೀಲ ವಿನ್ಯಾಸಕಾರ ಪ್ರಶಸ್ತಿ ಹಾಗೂ ಶಬಾಜ್ ಅಹ್ಮದ್ ಅವರು ಅತ್ಯುತ್ತಮ ವಿನ್ಯಾಸಕಾರ ಪ್ರಶಸ್ತಿ ಪಡೆದರು.

ಬೆಂಗಳೂರು  ವಿಶ್ವವಿದ್ಯಾಲಯದ 2015-16ನೇ ಸಾಲಿನ ಪರೀಕ್ಷೆಗಳಲ್ಲಿ ರ‍್ಯಾಂಕ್  ಪಡೆದಿದ್ದ ಈ ಸಂಸ್ಥೆಯ ವಿದ್ಯಾರ್ಥಿನಿಗಳಾದ ವಾರ್ನಿಕಾ ವರ್ಮ (1ನೇ ರ‍್ಯಾಂಕ್), ಪ್ರಬೋಧ್ ಕೌರ್ ಮುಶಿಯಾನ (4ನೇ ರ‍್ಯಾಂಕ್), ರಜಪೂತ್ ರೋಹಿತ್ ಮಹೇಂದ್ರ (5ನೇ ರ‍್ಯಾಂಕ್), ನೇಕಿತಾ ಸುಪ್ಯಾಲ್ (7ನೇ ರ‍್ಯಾಂಕ್) ಹಾಗೂ ದರ್ಶನಾ ಕೆ. (10ನೇ ರ‍್ಯಾಂಕ್) ಅವರಿಗೆ ಪದಕ ಹಾಗೂ ನಗದು ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT