ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018ರ ಡಕಾರ್ ರ್‍ಯಾಲಿಗೆ ಸಿದ್ಧತೆ

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಾಸ್ಕೊ (ಐಎಎನ್‌ಎಸ್‌):  2018ರ ಬಹುನಿರೀಕ್ಷಿತ ಎಫ್‌ಐಎ ಡಕಾರ್‌ ಮೋಟಾರು ರ್‍ಯಾಲಿಗೆ ದಕ್ಷಿಣ ಅಮೆರಿಕದ ಪ್ರಾಂತ್ಯಗಳಾದ ಪೆರು, ಬೊಲಿವಿಯಾ ಮತ್ತು ಅರ್ಜೆಂಟೀನಾ ದಲ್ಲಿ ಟ್ರ್ಯಾಕ್‌ ಸಿದ್ಧಗೊಳ್ಳಲಿದೆ.

‘40ನೇ ಆವೃತ್ತಿಯ ರ್‍ಯಾಲಿಗಾಗಿ ಇಲ್ಲಿ ಅತ್ಯಂತ ಸವಾಲಿನಿಂದ ಕೂಡಿದ ಟ್ರ್ಯಾಕ್‌  ಸಿದ್ಧಗೊಳ್ಳಲಿದೆ.  ಪೆರು ಮತ್ತೊಮ್ಮೆ ಅಂತರರಾಷ್ಟ್ರೀಯ ರ್‍ಯಾಲಿಗೆ ಆತಿಥ್ಯ  ವಹಿಸಿದ್ದಕ್ಕೆ ಧನ್ಯ ವಾದ ಹೇಳುತ್ತೇವೆ’ ಎಂದು ಆಯೋಜಕರು ಹೇಳಿದ್ದಾರೆ.

2018ರ ಜನವರಿ 4 ರಂದು ಆರಂಭವಾಗುವ ರ್‍ಯಾಲಿ 20ರಂದು ಮುಕ್ತಾಯಗೊಳ್ಳಲಿದೆ. ಎರಡು ತಿಂಗಳ ಹಿಂದೆ ನಡೆದಿದ್ದ 39ನೇ ಡಕಾರ್‌ ರ್‍ಯಾಲಿಯ ಸ್ಪರ್ಧಿ ಗಳೇ ಇಲ್ಲಿಯೂ ಕಣಕ್ಕಿಳಿಯ ಲಿದ್ದಾರೆ.

ಪೆರು ಈ ಮೊದಲು 2012 ಹಾಗೂ 2013ರಲ್ಲಿ ಡಕಾರ್‌ ರ್‍ಯಾಲಿಗೆ ಆತಿಥ್ಯ ವಹಿಸಿತ್ತು.  2017ರಲ್ಲಿಯೂ   ಬಿಡ್‌ ಸಲ್ಲಿಸಿತ್ತು. ಆದರೆ ಅಲ್ಲಿ ನಡೆದಿದ್ದ ಪ್ರಾಕೃತಿಕ ವಿಕೋಪದ ಕಾರಣ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT