ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು ಉಕ್ಕಿಸಿದ ಸಚಿವ ಜಿಗಜಿಣಗಿ ಹಿಂದಿ ಮಾತು

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವ, ಕರ್ನಾಟಕದ ರಮೇಶ್ ಜಿಗಜಿಣಗಿ ಅವರು ಲೋಕಸಭೆಯಲ್ಲಿ ಹಿಂದಿಯಲ್ಲಿ  ಮಾತ ನಾಡಿದಾಗ ಸಭೆ ನಗೆಗಡಲಲ್ಲಿ ಮುಳುಗಿತು.
 
ಪಶ್ಚಿಮ ಬಂಗಾಳದ ಚಹಾ ತೋಟದ ಕಾರ್ಮಿಕರ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಸಚಿವರು ಉತ್ತರಿಸುತ್ತ , ‘ಸಮಸ್ಯಾಕೊ ನಿಪ್ಟದೆಂಗೆ’ (ಸಮಸ್ಯೆಯನ್ನು ಮುಗಿಸಲಾಗುತ್ತದೆ) ಎಂದು ಹೇಳಿದಾಗ ಸಭೆಯು ನಗೆಗಡಲಲ್ಲಿ ಮುಳುಗಿತು.
 
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹಿಂದಿ ಕಮ್ ಆತಿ ಹೈ, ಕ್ಷಮಾ ಕರ್ನಾ’ (ನನಗೆ ಹಿಂದಿ ಸರಿಯಾಗಿ ಬರಲ್ಲ, ಕ್ಷಮಿಸಿ) ಎಂದಾಗ ಸದಸ್ಯರು ಅವರ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT