ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಂಜನ್ ಚೆಸ್: ಡ್ರಾ ಪಂದ್ಯದಲ್ಲಿ ಹರಿಕೃಷ್ಣ

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಶೆಂಜೆನ್, ಚೀನಾ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್ ಪಿ.ಹರಿಕೃಷ್ಣ ಗುರು ವಾರ ಇಲ್ಲಿ ಆರಂಭವಾದ ಶೆಂಜನ್ ಗ್ರ್ಯಾಂಡ್‌ಮಾಸ್ಟರ್ ಚೆಸ್ ಟೂರ್ನಿಯಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಹರಿಕೃಷ್ಣ ರಷ್ಯಾದ ಪೀಟರ್ ಸ್ವೀಡ್ಲರ್ ವಿರುದ್ಧ ಪಾಯಿಂಟ್ಸ್ ಹಂಚಿಕೊಂಡರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 2758 ರೇಂಟಿಂಗ್‌ ಪಾಯಿಂಟ್ಸ್‌ಗಳೊಂದಿಗೆ 14ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಬಿಳಿ ಕಾಯಿಗಳೊಂದಿಗೆ ಆಡಿದರು.  ಆಕ್ರಮಣಕಾರಿಯಾಗಿ ಆಡಿದ ಹರಿಕೃಷ್ಣ ಇನ್ನೇನು ಪಂದ್ಯ ಗೆದ್ದುಕೊಳ್ಳುವ ಹಂತದಲ್ಲಿದ್ದಾಗ ಸ್ವೀಡ್ಲರ್‌ ತಮ್ಮ ಚಾಣಾಕ್ಷ ನಡೆಗಳ ಮೂಲಕ ಪಂದ್ಯವನ್ನು ಡ್ರಾಗೆ ಪರಿವರ್ತಿಸಿದರು.

ಇಬ್ಬರು ಆಟಗಾರರು ಪಂದ್ಯದ ಅಂತಿಮ ಹಂತದಲ್ಲಿ ಒತ್ತಡಕ್ಕೆ ಒಳಗಾದರು. ಇದರಿಂದಾಗಿ 30ನೇ ನಡೆಯಲ್ಲಿ ಡ್ರಾಗೆ ಸಮ್ಮತಿಸಿದರು.
ಈ ಟೂರ್ನಿಯಲ್ಲಿ ಆರು ಗ್ರ್ಯಾಂಡ್‌ಮಾಸ್ಟರ್‌ಗಳು ಪರಸ್ಪರರ ನಡುವೆ ಎರಡು ಪಂದ್ಯಗಳನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT