ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡದ ಕೊಹ್ಲಿ

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಧರ್ಮಶಾಲಾ (ಪಿಟಿಐ):  ಬಲಭುಜದ ನೋವು ಅನುಭವಿಸುತ್ತಿರುವ  ನಾಯಕ ವಿರಾಟ್ ಕೊಹ್ಲಿ ಅವರು ಗುರುವಾರ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ಆದರೆ, ನೆಟ್ಸ್‌ನ್ನಲ್ಲಿ ಬ್ಯಾಟಿಂಗ್ ಮಾಡಲಿಲ್ಲ.ಗಾಯಕ್ಕೆ ಬ್ಯಾಂಡೇಜ್ ಹಾಕಿಕೊಂಡಿದ್ದ ಅವರು ವಾರ್ಮ್‌ ಅಪ್ ವ್ಯಾಯಾಮ ಮತ್ತು ಅಂಡರ್‌ ಆರ್ಮ್ ಥ್ರೋ ಅಭ್ಯಾಸ ಮಾಡಿದರು.

ಅವರು ರಾಂಚಿ ಟೆಸ್ಟ್‌ನಲ್ಲಿ ಬೌಂಡರಿ ಲೈನ್‌ ಬಳಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಭುಜದ ಸ್ನಾಯು ಸೆಳೆತ ಅನುಭವಿಸಿದ್ದರು.  ಮೊದಲ ಮತ್ತು ಎರಡನೇ  ದಿನದ ಬಹುತೇಕ ಅವಧಿಯಲ್ಲಿ ಅವರು ಫೀಲ್ಡಿಂಗ್ ಮಾಡಿರಲಿಲ್ಲ.  ಆದರೆ, ಬ್ಯಾಟಿಂಗ್ ಮಾಡಿದ್ದರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್‌ ಕೂಡ ಮಾಡಿದ್ದರು.

ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾಟ್ ಅವರು ಕೊಹ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಶುಕ್ರವಾರದ ನೆಟ್ಸ್‌ನಲ್ಲಿ ವಿರಾಟ್ ಬ್ಯಾಟಿಂಗ್ ಅಭ್ಯಾಸ ನಡೆಸಲಿದ್ದಾರೆ. ಆ ನಂತರವಷ್ಟೇ ಅವರು ಮುಂದಿನ ಪಂದ್ಯದಲ್ಲಿ ಆಡುವ ಬಗ್ಗೆ ಖಚಿತವಾಗಲಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಶಮಿ ಇಲ್ಲ:  ತಂಡಕ್ಕೆ ಮರಳಿರುವ ಬೌಲರ್ ಮಹಮ್ಮದ್ ಶಮಿ ಅವರನ್ನು ಅಂತಿಮ ಹನ್ನೊಂದರ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ತಂಡದ ಉನ್ನತ ಮೂಲಗಳು ಖಚಿತಪಡಿಸಿವೆ. ‘ಶಮಿ ಗಾಯದಿಂದ ಚೇತರಿಸಿ ಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ಅಪಾಯಕ್ಕೆ ಅವರನ್ನು ಒಡ್ಡುವುದು ಸರಿಯಲ್ಲ.  ಆದ್ದರಿಂದ ಅವರು ವಿಶ್ರಾಂತಿ ಪಡೆಯಲಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT