ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಮಾನಯಾನ ದರ ಅತ್ಯಂತ ಅಗ್ಗ’

Last Updated 23 ಮಾರ್ಚ್ 2017, 19:43 IST
ಅಕ್ಷರ ಗಾತ್ರ

ನವದೆಹಲಿ: ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ವಿಮಾನಯಾನ ದರಗಳು ಅತ್ಯಂತ ಕಡಿಮೆ ಹಾಗೂ ಸ್ಪರ್ಧಾತ್ಮಕವಾಗಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್‌ ಸಿನ್ಹಾ ಅವರು ಅಭಿಪ್ರಾಯಪಟ್ಟಿದ್ದಾರೆ.

ದುಬಾರಿ ಇಂಧನ, ವಿಮಾನ ಖರೀದಿ ಮತ್ತು ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ ಹಾಗೂ ತೆರಿಗೆ ಹೊರೆ ಹೊರತಾಗಿಯೂ ವಿಮಾನ ಪ್ರಯಾಣ ದರ ಅತ್ಯಂತ ಕಡಿಮೆ ಇದೆ ಎಂದು ಅವರು ತಿಳಿಸಿದರು.

ವಿಶ್ವದ ಇನ್ನುಳಿದ ವಿಮಾನಯಾನ ಸಂಸ್ಥೆಗಳಿಗೆ ಹೋಲಿಸಿದರೆ ಇಂಡಿಯನ್‌ ಏರ್‌ಲೈನ್ಸ್‌ ಟಿಕೆಟ್‌ ದರ ವಿಶ್ವದಲ್ಲಿಯೇ ಅತ್ಯಂತ ಅಗ್ಗವಾಗಿವೆ ಎಂದು
ಸಿನ್ಹಾ ಹೇಳಿದರು.  

ಎಲ್ಲ ವರ್ಗದ ಜನರಿಗೂ ವಿಮಾನಯಾನ ಲಭ್ಯವಾಗುವ ಉದ್ದೇಶದಿಂದ ವಿಮಾನ ಟಿಕೆಟ್‌ಗಳಿಗೆ ಕೈಗೆಟುವ ದರಗಳನ್ನು ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

18 ಹೊಸ ವಿಮಾನ ನಿಲ್ದಾಣಗಳಿಗೆ ಸಮ್ಮತಿ
₹30ಸಾವಿರ ಕೋಟಿ 
ಸರ್ಕಾರ ತಾತ್ವಿಕವಾಗಿ ಅನುಮತಿ ನೀಡಿರುವ 18 ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಗಲಿರುವ ಅಂದಾಜು ವೆಚ್ಚ
ಕಲಬುರ್ಗಿ, ವಿಜಯಪುರ, ಹಾಸನ ಮತ್ತು ಶಿವಮೊಗ್ಗ, ಶಿರಡಿ – ಹೊಸ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಇವೆ
ನಾಗರಿಕ ವಿಮಾನಯಾನ ಸಚಿವ ಜಯಂತ್‌ ಸಿನ್ಹಾ, ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT