ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಸ್‌ಇ ಕನ್ನಡ ಪತ್ರಿಕೆಯಲ್ಲಿ ಎಲ್ಲವೂ ತಪ್ಪೇ!

Last Updated 23 ಮಾರ್ಚ್ 2017, 19:50 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಎಸ್‌ಇ (ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್) ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ವ್ಯಾಕರಣ ಮತ್ತು ಮುದ್ರಣ ದೋಷಗಳು ಕಂಡುಬಂದಿವೆ.

ಐಸಿಎಸ್‌ಇ 10ನೇ ತರಗತಿಯ ದ್ವಿತೀಯ ಭಾಷೆ ಪರೀಕ್ಷೆ ಗುರುವಾರ ನಡೆಯಿತು. ಕನ್ನಡ ಭಾಷೆ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆಪತ್ರಿಕೆಯಲ್ಲಿ ಅಕ್ಷರ ದೋಷಗಳು ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಸರಿಯಾಗಿ ಅರ್ಥವಾಗದೆ ಗೊಂದಲಕ್ಕೆ ಒಳಗಾದರು.

ಕೆಲವು ಉದಾಹರಣೆ ಹೀಗಿವೆ. ‘ಪ್ರತಿಯೊ ದು’, ‘ಶಕ್ತಿ ಸ ವಧ ಕ’, ‘ಬ ಡವಾಳ’, ತೇನ್‌ ಸಿ ಗ್’, ‘ಶಾ ತಿ’ ಹೀಗೆ ಎಲ್ಲೆಲ್ಲಿ ಯೋಗವಾಹಕಗಳು ಬರುತ್ತವೋ ಅವೆಲ್ಲವೂ ಮಾಯವಾಗಿವೆ.

ಕೆಲವೊಂದು ಪದಗಳಲ್ಲಿ ಯೋಗವಾಹಕದ ಜತೆಯಲ್ಲಿನ ಪದವೂ ಕಾಣೆಯಾಗಿದೆ. ಪ್ರತಿಯೊಂದು ವಾಕ್ಯದಲ್ಲೂ ಅನೇಕ ತಪ್ಪುಗಳಿದ್ದು, ಪೂರ್ತಿ ಪ್ರಶ್ನೆ ಪತ್ರಿಕೆಯೇ ಗೊಂದಲಕ್ಕೆ ಆಸ್ಪದ ನೀಡುವಂತಿದೆ. ‘ಐಸಿಎಸ್‌ಇ ಶಾಲೆ ಗಳಲ್ಲಿ ಕನ್ನಡ ಕಲಿಕೆಯೇ ಅಷ್ಟಕಷ್ಟೆ ಇರುತ್ತದೆ.

ಪ್ರಶ್ನೆಪತ್ರಿಕೆಯನ್ನು ಈ ರೀತಿ ಮುದ್ರಿಸಿದರೆ ವಿದ್ಯಾರ್ಥಿಗಳು ಹೇಗೆ ಓದಿ, ಅರ್ಥ ಮಾಡಿಕೊಂಡು ಪರೀಕ್ಷೆ ಬರೆಯುತ್ತಾರೆ? ಎಂದು ಶಿಕ್ಷಕ ಗುರುಪ್ರಸಾದ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT