ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿದ್ದರೆ ಮಾತ್ರ ಸಂಘಗಳ ಏಳ್ಗೆ ಸಾಧ್ಯ

Last Updated 24 ಮಾರ್ಚ್ 2017, 4:44 IST
ಅಕ್ಷರ ಗಾತ್ರ

ತಿಪಟೂರು: ಯಾವುದೆ ಸಂಘಗಳಾಗಲಿ ಒಗ್ಗಟ್ಟಿದ್ದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಾಲ್ಲೂಕು ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಕಿಬ್ಬನಹಳ್ಳಿ ಕೆ.ಲಿಂಗಯ್ಯ ತಿಳಿಸಿದರು.

ನಗರದ ಸಗರ ಭಗೀರಥ ಸಂಘದ ಕಚೇರಿ ಆವರಣದಲ್ಲಿ ಕಾರ್ಯಕಾರಣಿ ಮಂಡಳಿ ರಚಿಸಲು ನಡೆದ ಉಪ್ಪಾರ ಸಮಾಜದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘ ಕಟ್ಟುವುದು ಕಷ್ಟಕರವಾದ ಕೆಲಸವೇನಲ್ಲ. ಆದರೆ ಸಂಘವನ್ನು ಸದೃಢಗೊಳಿಸಿ ಅಭಿವೃದ್ಧಿಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸವಾಗಬೇಕು. ಇದಕ್ಕೆ ಸಂಘದ ಸರ್ವಸದಸ್ಯರ ಹಾಗೂ ಸಮಾಜದ ಸಹಕಾರ ಅಗತ್ಯ.

ಪ್ರತಿಯೊಬ್ಬರು ಸಂಘದ ಏಳ್ಗೆಗೆ ಶ್ರಮಿಸಿದಾಗ ಮಾತ್ರ ಸಮಾಜದಲ್ಲಿ ಸಂಘದ ಗೌರವ ಹೆಚ್ಚಾಗುತ್ತದೆ ಎಂದರು. ಸಂಘದ ಅಧ್ಯಕ್ಷ ಕೆ.ಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಭಗೀರಥ ಉಪ್ಪಾರ ಸಮಾಜದ ಕಾರ್ಯಕಾರಿ ಮಂಡಳಿ ಸಮಿತಿಯನ್ನು ರಚಿಸಲಾಯಿತು.

ಆಯ್ಕೆ: ದೊಡ್ಡೇಗೌಡ (ಗೌರವಾಧ್ಯಕ್ಷ), ಬಸವನಹಳ್ಳಿ ಮಲ್ಲಿಕಾರ್ಜುನಯ್ಯ, ಸಿದ್ದಪ್ಪ (ಉಪಾಧ್ಯಕ್ಷರು), ನಿವೃತ್ತ ಉಪತಹಶೀಲ್ದಾರ್ ನಂಜುಂಡಪ್ಪ (ಗೌರವಕಾರ್ಯದರ್ಶಿ), ಹೊಸಪಟ್ಟಣ ರಂಗಸ್ವಾಮಿ (ಕಾರ್ಯದರ್ಶಿ), ರಘು(ಸಹಕಾರ್ಯದರ್ಶಿ), ಮೈಲಾರಪ್ಪ (ಸಂಘಟನಾ ಕಾರ್ಯದರ್ಶಿ), ಶಂಕರಪ್ಪ ಲಕ್ಷ್ಮೀಪುರ (ಖಜಾಂಚಿ), ಎನ್.ಡಿ. ರಘು(ಸಂಚಾಲಕ), ನೇತ್ರಾವತಿ, ಮಹಾದೇವಯ್ಯ, ಮಂಜುನಾಥ್, ಜಗನ್ನಾಥ್, ಶೇಖರಯ್ಯ, ಶಿವಶಂಕರ್, ವಜ್ರಮುನಿ(ನಿರ್ದೇಶಕರು) ಅವಿರೋಧವಾಗಿ ಆಯ್ಕೆಯಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್ ಮಂಡನೆಯಲ್ಲಿ ಉಪ್ಪಾರ ಅಭಿವೃದ್ದಿ ನಿಗಮದ ಸ್ಥಾಪನೆಗೆ ಅನುಮತಿ ನೀಡಿರುವುದಕ್ಕೆ ಸಭೆಯಲ್ಲಿ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಸಗರ ಭಗೀರಥ ಸಂಘದ ಅಧ್ಯಕ್ಷ ಚನ್ನಬಸಪ್ಪ, ಉಪಾಧ್ಯಕ್ಷ ಬಸವರಾಜು, ಪುಟ್ಟಸ್ವಾಮಿ, ಹನುಮಪ್ಪ, ಶಂಕರಪ್ಪ, ಮುನಿಯಪ್ಪ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT