ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಸಿ ಆಸ್ಪತ್ರೆಯ ಸಾಧನೆ

ಕರಾವಳಿಯಲ್ಲಿ ಪ್ರಥಮ ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸೆ
Last Updated 24 ಮಾರ್ಚ್ 2017, 5:16 IST
ಅಕ್ಷರ ಗಾತ್ರ

ಮಂಗಳೂರು: 39 ವರ್ಷ ವಯಸ್ಸಿನ ರೋಗಿಗೆ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ನಗರದ ಕೆಎಂಸಿ ಆಸ್ಪತ್ರೆ ಯಶಸ್ವಿಯಾಗಿ ನಡೆಸಿದೆ.

ರೋಗಿಗೆ ಅಂತಿಮ ಹಂತದ ಪಿತ್ತ ಜನಕಾಂಗ ರೋಗ ಇರುವುದನ್ನು ಪತ್ತೆ ಮಾಡಲಾಗಿತ್ತು. ವೈದ್ಯಕೀಯ ಚಿಕಿತ್ಸೆ ಯಿಂದ ಪ್ರಯೋಜನ ಆಗುವಂತಿರಲಿಲ್ಲ. ಅವರ ಪಿತ್ತಜನಕಾಂಗ ದೀರ್ಘಕಾಲದ ಸಂಕೀರ್ಣ ತೊಂದರೆಗಳಿಗೀಡಾಗಿದ್ದು, ರೋಗಿಯನ್ನು ವಾರಕ್ಕೆ ಎರಡು ಬಾರಿ ಆಸ್ಪತ್ರೆಗೆ ಸೇರಿಸಬೇಕಾಗಿ ಬರುತ್ತಿತ್ತು.

ಬದಲಿ ಪಿತ್ತಜನಕಾಂಗ ಜೋಡಣೆ ಯೊಂದೇ ಆತನ ಜೀವವನ್ನು ಉಳಿಸಲಿ ರುವ ಆಯ್ಕೆಯಾಗಿತ್ತು. 34 ವರ್ಷದ ರೋಗಿಯ ಪತ್ನಿಯೇ ಅಂಗದಾನಿ ಯಾಗಿದ್ದು, 12 ಗಂಟೆಗಳ ಶಸ್ತ್ರಕ್ರಿಯೆ ಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಶಸ್ತ್ರಕ್ರಿಯಾ ತಂಡದ ನೇತೃತ್ವವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಪಿತ್ತಜನಕಾಂಗ ರೋಗತಜ್ಞ ಮತ್ತು ಅಧ್ಯಕ್ಷ ಡಾ. ಒಲಿತ್‌ಸೆಲ್ವನ್, ಮುಖ್ಯ ಪಿತ್ತ ಜನಕಾಂಗ ಕಸಿ ತಜ್ಞ ಡಾ. ರವಿಚಂದ್, ಡಾ. ಮ್ಯಾಗ್ನಸ್, ಡಾ. ಆನಂದ್, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಮಿಶ್ ಪದ್ಮನ್, ಡಾ. ಗೌತಮ್ ಮತ್ತು ಡಾ. ನವನೀತನ್ ಹಾಗೂ ಡಾ. ರಾಮಮೂರ್ತಿ ವಹಿಸಿದ್ದರು. ಪರಿಣಿತ ವೈದ್ಯರ ತಂಡ ಈ ಮೈಲುಗಲ್ಲು ಸಾಧಿಸು ವಲ್ಲಿ ಎಲ್ಲ ಪ್ರಯತ್ನಗಳನ್ನು ಕೈಗೊಂಡಿತ್ತು.

ರೋಗಿಯ ಪಿತ್ತಜನಕಾಂಗವನ್ನು ತೆಗೆದುಹಾಕಿ, ಅದರ ಬದಲಿಗೆ ದಾನಿ ಯೊಬ್ಬರಿಂದ ಆರೋಗ್ಯಕರ ಪಿತ್ತಜನ ಕಾಂಗವನ್ನು ಪಡೆದು ಜೋಡಿಸುವ ಶಸ್ತ್ರಕ್ರಿಯಾ ಕ್ರಮವೇ ಪಿತ್ತಜನಕಾಂಗ ಕಸಿಯಾಗಿದೆ. ಹೃದಯರೋಗ, ಪಾರ್ಶ್ವವಾಯು, ಎದೆಯ ಸೋಂಕುಗಳು ಮತ್ತು ಕ್ಯಾನ್ಸರ್‌ಗಳ ನಂತರ ಅತ್ಯಂತ ಸಾಮಾನ್ಯವಾದ ಸಾವಿನ ಕಾರಣ ಈ ಪಿತ್ತಜನಕಾಂಗದ ರೋಗವಾಗಿದೆ.

ಪಿತ್ತಜನಕಾಂಗ ಕಸಿಯಲ್ಲಿ ರೋಗಿಯ ರೋಗಿಷ್ಠ ಪಿತ್ತಜನಕಾಂಗವನ್ನು ತೆಗೆದು, ಮೆದುಳಿನ ಸಾವು ಉಂಟಾಗಿರುವ ಆದರೆ ಹೃದಯ ಮಿಡಿಯುತ್ತಿರುವಂತಹ ರೋಗಿಯಿಂದ ನೂತನ ಪಿತ್ತಜನಕಾಂಗ ವನ್ನು ಪಡೆದು ಜೋಡಿಸಲಾಗುವುದು (ಇದಕ್ಕೆ  ಕ್ಯಾಡಯವರ್ ಅಥವಾ ಡಿಸೀಸ್ಡ್ ಡೋನರ್ ಲಿವರ್  ಟ್ರ್ಯಾನ್ಸ್‌ಪ್ಲಾಂಟ್ ಅಥವಾ ಡಿಡಿಎಲ್‌ಟಿ ಎನ್ನುತ್ತಾರೆ.) ಅಥ ವಾ ಜೀವಂತ ದಾನಿಯಿಂದ (ಲಿವಿಂಗ್ ಡೋನರ್ ಲಿವರ್ ಟ್ರಾನ್ಸ್‌ಪ್ಲಾಂಟ್ ಅಥವಾ ಎಲ್‌ಡಿಎಲ್‌ಟಿ) ಪಿತ್ತಜನ ಕಾಂಗದ ಭಾಗವನ್ನು ಪಡೆದು ರೋಗಿಗೆ ಜೋಡಿಸಲಾಗುತ್ತದೆ.

‘ಮಾನವ ದೇಹದಲ್ಲಿ ಪಿತ್ತಜನ ಕಾಂಗ ಅನನ್ಯ ಅಂಗವಾಗಿದ್ದು, ಹಾನಿ ಗೊಳಗಾದರೂ ಮತ್ತೆ ಬೆಳೆಯುವಂತಹ ವಿಶೇಷ ಸಾಮರ್ಥ್ಯ ಹೊಂದಿದೆ. ಈ ಕಾರಣದಿಂದ ಒಬ್ಬ ಜೀವಂತ ದಾನಿ ಯಿಂದ ಶೇ 70ರಷ್ಟು ಪಿತ್ತಜನಕಾಂಗ ವನ್ನು ಯಾವುದೇ ದುಷ್ಪರಿಣಾಮ ಉಂಟಾಗದಂತೆ ತೆಗೆಯಬಹುದಾಗಿದೆ.

ಇದಕ್ಕೆ ಕಾರಣ ಈ ಅಂಗದ ಪುನರು ಜ್ಜೀವನ ಶಕ್ತಿ’ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಪಿತ್ತಜನಕಾಂಗ ರೋಗತಜ್ಞ ಮತ್ತು ಚೇರ್ಮನ್ ಡಾ. ಒಲಿತ್‌ಸೆಲ್ವನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT