ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ವರ್ಷವಾದರೂ ಪೂರ್ಣಗೊಳ್ಳದ ಹೆದ್ದಾರಿ ಕಾಮಗಾರಿ: ಕಾಂಗ್ರೆಸ್‌ನಿಂದ ಪ್ರತಿಭಟನೆ

Last Updated 24 ಮಾರ್ಚ್ 2017, 5:19 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ರಸ್ತೆ ಕಾಮಗಾರಿ 8 ವರ್ಷ ಗಳಿಂದ ಕುಂಟುತ್ತಲೇ ಸಾಗಿದ್ದು, ಕಾಮ ಗಾರಿಯಲ್ಲಿ ವಿಳಂಬ ಮಾಡುತ್ತಿರುವು ದನ್ನು ಖಂಡಿಸಿ, ಗುರುವಾರ ಮಂಗ ಳೂರು ನಗರ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಗರದ ಪಂಪ್‌ವೆಲ್‌ ಬಳಿ ಪ್ರತಿಭಟನೆ ನಡೆಸಲಾಯಿತು.

2009ರಲ್ಲಿ ಪ್ರಾರಂಭವಾದ ಈ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಮಹಾವೀರ ವೃತ್ತ (ಪಂಪ್‌ವೆಲ್‌) ಬಳಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಅಪೂರ್ಣವಾಗಿದೆ. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವಂ ತಾಗಿದೆ ಎಂದು ದೂರಿದರು.

ನಗರದ ಹೃದಯಭಾಗದಲ್ಲಿರುವ ಈ ವೃತ್ತದಿಂದ ಮಂಗಳೂರಿನಿಂದ ರಾಜ ಧಾನಿ ಬೆಂಗಳೂರು, ಮೈಸೂರು ಹಾಗೂ ಕೇರಳ ರಾಜ್ಯಕ್ಕೆ  ವಾಹನಗಳು ಸಂಚರಿ ಸುತ್ತವೆ. ಇದಲ್ಲದೇ ನಗರದಲ್ಲಿ ಓಡಾ ಡುವ ವಾಹನಗಳು ಬೇರೆ. ಈ ಪ್ರದೇ ಶದಿಂದ ಹಲವಾರು ಶಾಲಾ–ಕಾಲೇಜು, ಆಸ್ಪತ್ರೆ, ಇನ್ನಿತರ ಕಚೇರಿಗಳಿಗೆ ಜನರು ಓಡಾಡುತ್ತಾರೆ. ಆದರೆ, ಸುತ್ತಲಿನ ಪ್ರದೇ ಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಜ್ಜೋಡಿ ಮಹಾಕಾಳಿ ದೇವಸ್ಥಾ ನದ ಬಳಿ ಅಂಡರ್‌ಪಾಸ್‌ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿಲ್ಲ. ಇದರಿಂದಾಗಿ ಕುಡಿ ಯುವ ನೀರಿನ ಹೊಸ ಸಂಪರ್ಕ ವ್ಯವಸ್ಥೆ ಅಳವಡಿಸಲು ಆಗುತ್ತಿಲ್ಲ. ಅಲ್ಲಿನ ನಿವಾಸಿ ಗಳು ಸಾಕಷ್ಟು ತೊಂದರೆ ಅನುಭವಿ ಸುವಂತಾಗಿದೆ. ಕಳೆದ 8 ವರ್ಷಗಳಿಂದ ಈ ರೀತಿಯ ಬವಣೆ ಅನುಭವಿಸುತ್ತಿ ದ್ದರೂ, ಸಂಬಂಧಿಸಿದವರು ಕಾಮಗಾರಿ ಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿ ಸುತ್ತಿಲ್ಲ ಎಂದು ಆರೋಪಿಸಿದರು.

ಪಂಪ್‌ವೆಲ್‌ ವೃತ್ತದ ಮೇಲ್ಸೇತುವೆ ಕಾಮಗಾರಿ ಶೀಘ್ರ ಕೈಗೆತ್ತಿಕೊಂಡು, ಮಳೆ ಗಾಲಕ್ಕೂ ಮುನ್ನ ಪೂರ್ಣಗೊಳಿಸಬೇಕು. ಬಾಕಿ ಉಳಿದಿರುವ ಎಲ್ಲ ಕಾಮಗಾರಿ ಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳ ಬೇಕು. ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಆಗ್ರಹಿಸಿದರು.

ನಗರದ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಪಾಲಿಕೆ ಸದಸ್ಯರಾದ ಜೆಸಿಂತಾ ವಿಜಯ ಅಲ್ಫೇಡ್‌, ಆಶಾ ಡಿಸಿಲ್ವ, ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಯೋಜನಾ ನಿರ್ದೇಶಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

*
ಕಾಮಗಾರಿಯ ವಿಳಂಬದಿಂದಾಗಿ ಸುತ್ತಲಿನ ಪ್ರದೇಶದ ಜನರು ಹಲವಾರು ಸಮಸ್ಯೆ ಎದುರಿಸುವಂತಾಗಿದೆ. ಈಗಲಾದರೂ ಇಲಾಖೆ ಎಚ್ಚೆತ್ತು ಕಾರ್ಯನಿರ್ವಹಿಸಬೇಕು.
-ಕೆ. ಬಾಲಕೃಷ್ಣ ಶೆಟ್ಟಿ,
ನಗರದ ದಕ್ಷಿಣ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT