ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲಿನ ಅನಧಿಕೃತ ಪಂಪು ತೆರವಿಗೆ ಆಗ್ರಹ

ಉಪ್ಪಿನಂಗಡಿ ಗ್ರಾ.ಪಂ. ಸಭೆ: ಕುಡಿಯುವ ನೀರಿನ ಸಮಸ್ಯೆ
Last Updated 24 ಮಾರ್ಚ್ 2017, 5:20 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಪಂಚಾಯಿತಿ ವ್ಯಾಪ್ತಿ ಯಲ್ಲಿ 2 ನದಿ ಹರಿಯುತ್ತಿದ್ದರೂ ಕುಡಿ ಯುವ ನೀರಿಗೆ ಸಮಸ್ಯೆ ಆಗುವ ಎಲ್ಲ ಸೂಚನೆಗಳು ಕಂಡು ಬರುತ್ತಿವೆ. ಈ ಸಮ ಸ್ಯೆಯಿಂದ ಪಾರಾಗಲು ನದಿಯಲ್ಲಿ ಅನ ಧಿಕೃತವಾಗಿ ಕಾರ್ಯಾಚರಿಸುತ್ತಿರುವ ಪಂ ಪುಗಳನ್ನು ತಕ್ಷಣದಿಂದಲೇ ತೆರವು ಮಾಡಬೇಕು ಎಂದು ಜಿಲ್ಲಾಧಿಕಾರಿ ಯನ್ನು ಕೋರಿ ನಿರ್ಣಯ ಅಂಗೀಕರಿ ಸಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅಧ್ಯ ಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು ಜನರಿಗೆ ಕುಡಿಯಲು ನೀರು ಇಲ್ಲದಂತಾಗಿದೆ, ಆದರೆ ನದಿಯಲ್ಲಿ ನೀರು ಇದ್ದೂ ಪ್ರಯೋ ಜನಕ್ಕೆ ದೊರಕದಂತಾಗಿದೆ.

ಅಲ್ಲಲ್ಲಿ ಕೆಲ ವರು ನದಿಯಲ್ಲಿ ಸಂಪು ನಿರ್ಮಿಸಿ ಕೊಂಡು ಹರಿಯುವ ನದಿಯನ್ನು ತಡೆ ದು ಪಂಪು ಹಾಕಿ ತೋಟಗಳಿಗೆ ಬಿಡು ತ್ತಿದ್ದಾರೆ. ಇದನ್ನು ತಕ್ಷಣದಿಂದಲೇ ತೆರವು ಮಾಡಬೇಕು ಎಂಬ ಸಲಹೆ ವ್ಯಕ್ತವಾಯಿತು.

ಅಧ್ಯಕ್ಷರು ಪ್ರತಿಕ್ರಿಯಿಸಿ, ‘ಮೊದಲು ಕುಡಿಯಲು ನೀರು ಬೇಕಾಗಿದ್ದು, ಆ ಬಳಿಕ ಕೃಷಿಗೆ ಆದ್ಯತೆ. ಹರಿಯುವ ನದಿ ಯನ್ನು ತಡೆಗಟ್ಟುವ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು, ಕಳೆದ ವರ್ಷ ಜಿಲ್ಲಾಧಿಕಾರಿ ನದಿಯಲ್ಲಿರುವ ಪಂಪು ತೆಗೆಯಲು ಆದೇಶ ನೀಡಿದ್ದರು. ಆದರೆ ಆದೇಶವನ್ನೇ ಕಾಯುವುದು ಸರಿ ಅಲ್ಲ, ಜನರು ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ತಾವಾಗಿಯೇ ತೆಗೆಯುವುದು ಒಳಿತು’ ಎಂದರು.

ಕೆರೆ, ಬಾವಿ ಅಭಿವೃದ್ಧಿಗೆ ಅನುದಾನ: ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆ, ಬಾವಿಗಳನ್ನು ಅಭಿವೃದ್ಧಿ ಪಡಿಸಬೇಕು, ಇದಕ್ಕಾಗಿ ಅಗತ್ಯ ಅನುದಾನ ಮೀಸಲು ಇಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಂಪಿಮಜಲು, ನಾಲಾಯಿದ ಗುಂಡಿ, ಅಲಗುರಿಮಜಲು, ನೂಜಿ ಮೊದಲಾದ ಕಡೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಬಗ್ಗೆ ಜಿಲ್ಲಾಡಳಿತವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.

ಪೇಟೆಯಲ್ಲಿ ಹಲವೆಡೆ ಅಂಗಡಿಯ ವರು ವಿಸ್ತರಿಸಿದ ಅಕ್ರಮಗಳನ್ನು ತೆರವು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಇದರಲ್ಲಿ ತಾರತಮ್ಯ ಆಗಬಾರದು ಎಂದ ಸದಸ್ಯರು, ಕಾರ್ಪೊರೇಶನ್ ಬ್ಯಾಂಕ್‌ ಬಳಿಯಲ್ಲಿ ಚರಂಡಿಯ ಮೇಲೆ ಅಂಗಡಿ ನಿರ್ಮಾಣ ಆಗಿದೆ. ಅದೇ ರೀತಿಯಲ್ಲಿ ದೇವಸ್ಥಾನದ ಬಳಿಯಲ್ಲಿ ಬೈಕ್ ಶೋ ರೂಂ ಚರಂಡಿಯ ಮೇಲೆ ನಿರ್ಮಿಸಲಾಗಿದೆ.

ಹಾಗೂ ಪೊಲೀಸ್ ಠಾಣೆ ರಸ್ತೆ ಬದಿಯಲ್ಲಿ ಚರಂಡಿಯ ಮೇಲೆ ಇರುವ ಅತಿಕ್ರಮಣ ಮತ್ತು ಎಂ.ಆರ್. ಶೆಣೈ ಆಸ್ಪತ್ರೆಗೆ ಎದುರಿನಲ್ಲಿ 3 ರಸ್ತೆ ಕೂಡುವಲ್ಲಿ ತರಕಾರಿ ಅಂಗಡಿ ಮತ್ತು ಹಣ್ಣಿನ ಅಂ ಗಡಿ, ಆಸ್ಪತ್ರೆ ಎದುರಿನಲ್ಲಿ ಅನಧಿಕೃತ ಅಂಗಡಿಗಳು ಸಾರ್ವಜನಿಕರಿಗೆ ತೊಂ ದರೆ ಆಗುವ ರೀತಿಯಲ್ಲಿ ಇದ್ದು, ತೆರವು ಮಾಡಲು ಕ್ರಮಕೈಗೊಳ್ಳಬೇಕು ಎಂದರು.

ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ ‘ಇಲ್ಲಿ ಯಾವುದೇ ರೀತಿಯ ತಾರತಮ್ಯ ಇಲ್ಲ, ಯಾರಿಗೂ ವಿನಾಯಿತಿ ಇಲ್ಲ, ಎಲ್ಲಾ ಅಕ್ರಮ, ಅನಧಿಕೃತಗಳನ್ನು ತೆರವು ಮಾಡಲಾಗುವುದು. ಹಂತ ಹಂತವಾಗಿ ತೆಗೆಯುತ್ತಾ ಬರಲಾಗುತ್ತಿದೆ, ಚರಂಡಿ ಮೇಲೆ ಅಂಗಡಿ ನಿರ್ಮಿಸಿರುವವರಿಗೆ ತಕ್ಷಣ ನೋಟಿಸ್‌ ಜಾರಿ ಮಾಡಿ 7 ದಿನ ಗಳ ಕಾಲಾವಕಾಶ ಕೊಡಬೇಕು, ತೆಗೆಯ ದಿದ್ದಲ್ಲಿ ಪಂಚಾಯಿತಿ ವತಿಯಿಂದ ತೆರವು ಮಾಡಿ ಸೊತ್ತುಗಳನ್ನು ಪಂಚಾಯಿತಿ ವಶಕ್ಕೆ ತೆಗೆದುಕೊಳ್ಳಲಾಗುವುದು. ಇದರ ಖರ್ಚು ವೆಚ್ಚವನ್ನು ಅಂಗಡಿಗಳವರೇ ಭರಿಸ ತಕ್ಕದ್ದು, ಈ ಬಗ್ಗೆ ತಿಳಿಸಬೇಕು ಎಂದು ಪಿಡಿಓ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸದಸ್ಯರಾದ ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿ ವಾಳ, ಯು.ಟಿ. ತೌಶೀಫ್, ರಮೇಶ್ ಬಂಡಾರಿ, ಗೋಪಾಲ ಹೆಗ್ಡೆ, ಯು.ಕೆ. ಇಬ್ರಾಹಿಂ ಮಾತನಾಡಿದರು.

ಸದಸ್ಯರಾದ ಉಮೇಶ್ ಗೌಡ, ವಿನಾಯಕ ಪೈ, ಝರೀನ, ಚಂದ್ರಾವತಿ ಹೆಗ್ಡೆ, ಕವಿತಾ, ಸುಂದರಿ, ಭಾರತಿ, ಚಂದ್ರಾವತಿ, ಯೋಗಿನಿ, ಜಮೀಳ, ಸುಶೀಲ ಇದ್ದರು. ಪಿಡಿಒ ಅಬ್ದುಲ್ಲ ಅಸಫ್ ಸ್ವಾಗತಿಸಿ, ಕಾರ್ಯದರ್ಶಿ ರೋಹಿತಾಕ್ಷ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT