ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಗಳಿಂದ ಭಗತ್‌ಸಿಂಗ್‌ ಹುತಾತ್ಮ ದಿನಾಚರಣೆ

Last Updated 24 ಮಾರ್ಚ್ 2017, 5:49 IST
ಅಕ್ಷರ ಗಾತ್ರ

ದಾವಣಗೆರೆ:  ನಗರದಲ್ಲಿ ಗುರುವಾರ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌, ರಾಜಗುರು ಮತ್ತು ಸುಖದೇವ್‌ ಹುತಾತ್ಮ ದಿನಾಚರಣೆಯನ್ನು ವಿವಿಧ ಸಂಘಟನೆಗಳು ಆಚರಿಸಿದವು.

ನಗರಪಾಲಿಕೆ ಎದುರಿನ ಭಗತ್‌ ಸಿಂಗ್ ಪುತ್ಥಳಿಯನ್ನು ಯುವ ಬ್ರಿಗೇಡ್‌ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಸ್ವಚ್ಛಗೊಳಿಸಿದರು. ಸಂಜೆ ಭಗತ್‌ಸಿಂಗ್‌ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಭಗತ್‌ಸಿಂಗ್‌, ರಾಜಗುರು ಮತ್ತು ಸುಖದೇವ್‌ ಅವರನ್ನು ಸ್ಮರಿಸಿದರು. ಯುವ ಬ್ರಿಗೇಡ್‌ ಕಾರ್ಯಕರ್ತರಾದ ರಂಗನಾಥ್‌, ಮಾದೇಶ, ಪವನ್, ನಿಖಿಲ್‌, ರಾಕೇಶ್‌, ಮಂಜುನಾಥ್‌ ಹಾಜರಿದ್ದರು.

ಎಸ್‌ಯುಸಿಐ ಸಂಘಟನೆಯಿಂದ ಆಚರಣೆ:  ಎಸ್‌ಯುಸಿಐ ಕಾರ್ಯ ಕರ್ತರು ಪಾಲಿಕೆ ಕಚೇರಿ ಎದುರಿನ ಭಗತ್‌ಸಿಂಗ್‌ ಪುತ್ಥಳಿಗೆ ಗೌರವ ಸಲ್ಲಿಸುವ ಮೂಲಕ ಹುತಾತ್ಮರ ದಿನಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಯುಸಿಐ ನಗರ ಘಟಕದ ಸಂಘಟನಾ ಸಮಿತಿ ಸದಸ್ಯ ಡಾ. ವಸುಧೇಂದ್ರ ಮಾತನಾಡಿ, ಭಗತ್‌ಸಿಂಗ್‌ ರಾಜಿರಹಿತ ಹೋರಾಟಗಾರ. ಅವರ ಹೋರಾಟ ದಲ್ಲಿ ಸ್ಪಷ್ಟತೆಯಿತ್ತು ಎಂದು ಸ್ಮರಿಸಿದರು.

ಭಗತ್‌ಸಿಂಗ್‌ರದ್ದು ಧರ್ಮನಿರಪೇಕ್ಷ ಮತ್ತು ಪ್ರಜಾತಂತ್ರ ಮನೋಭಾವವಾ ಗಿತ್ತು. ಭಗತ್‌ಸಿಂಗ್‌ರ ‘ನಾನೇಕೆ ನಾಸ್ತಿಕ’ ಪುಸ್ತಕ ಅಧ್ಯಯನ ಮಾಡಿದರೆ, ಆತ ಧರ್ಮನಿರಪೇಕ್ಷಿಯಾಗಿದ್ದ ಎಂದು ತಿಳಿ ಯುತ್ತದೆ. ಪಟಭದ್ರ ಹಿತಾಸಕ್ತಿಗಳು ಆತ ನನ್ನು ಹಿಂದೂ ಮೂಲಭೂತ ವಾದಕ್ಕೆ ಬಳಸಿಕೊಳ್ಳುತ್ತಿವೆ ಎಂದು ದೂರಿದರು. ಸಂಜೆ ನಗರದ ಗುಂಡಿ ವೃತ್ತದಿಂದ ಭಗತ್‌ಸಿಂಗ್‌ ವೃತ್ತದವರೆಗೆ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಎಐಡಿವೈಒನ ಉಪಾಧ್ಯಕ್ಷ ಮಧು ತೊಗಲೇರಿ, ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ಭವಾನಿ ರಾವ್, ಎಐಎಂಎಸ್‌ಎಸ್‌ನ ಜಿಲ್ಲಾ ಸಂಚಾಲಕಿ ಎಂ.ಜ್ಯೋತಿ, ರಾಘವೇಂದ್ರ ನಾಯ್ಕ, ಮಂಜುನಾಥ್‌ ಕೈದಾಳೆ, ಮಂಜುನಾಥ್‌ ಕುಕ್ಕವಾಡ, ಭಾರತಿ, ಸೌಮ್ಯಾ, ಪರಶು ರಾಮ್, ನಾಗಭೂಷಣ್‌ ತೌಡೂರು, ಪೂಜಾ, ಬನಶ್ರೀ, ನಾಗಸ್ಮಿತಾ, ತಿಪ್ಪೇಸ್ವಾಮಿ, ರುದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT