ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕಕಲ್ಯಾಣಕ್ಕಾಗಿ ಬ್ರಾಹ್ಮಣರ ಪ್ರಾರ್ಥನೆ’

Last Updated 24 ಮಾರ್ಚ್ 2017, 6:07 IST
ಅಕ್ಷರ ಗಾತ್ರ

ತಾಳಿಕೋಟೆ: ಬ್ರಾಹ್ಮಣ ಸಮಾಜದವರು  ತಮಗಾಗಿ ಪ್ರಾರ್ಥಿಸುವುದಿಲ್ಲ, ಲೋಕ ಕಲ್ಯಾಣಕ್ಕಾಗಿ ನಮ್ಮ ಪ್ರಾರ್ಥನೆ ಇರುತ್ತದೆ ಆದರೆ ನಮ್ಮನ್ನು ಸ್ವಾರ್ಥಿಗಳೆಂದು ತಪ್ಪಾಗಿ ಬಿಂಬಿಸುವುದು ನೋವು ತಂದಿದೆ ಎಂದು ಮಹಾ ಸಂಸ್ಥಾನ ಕಣ್ವ ಮಠ ಹುಣಶಿಹೊಳೆಯ  ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ ವಿಷಾದಿಸಿದರು.

ಅವರು ಪಟ್ಟಣದ ವಿಠ್ಠಲ ಮಂದಿರ ದಲ್ಲಿ ವಿಪ್ರ ಸಮಾಜ ಹಮ್ಮಿಕೊಂಡಿದ್ದ ಪುರಪ್ರವೇಶ, ಇತರೆ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ  ವಿಠ್ಠಲ ಮಂದಿರದ ಟ್ರಸ್ಟ್‌ ಕಮಿಟಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹೇ ಭಗವಂತ ಕಾಲಕಾಲಕ್ಕೆ ಮಳೆ ಸುರಿಸು, ನದಿಗಳು ಯಾವತ್ತು ಹರಿಯುತ್ತಿ ರಲಿ, ಈ ಭೂಮಿ ಫಲವತ್ತಾಗಿರಲಿ, ದೇಹಕ್ಕೆ ಪುಷ್ಠಿ, ಆರೋಗ್ಯ ಶಕ್ತಿ ಕೊಡುವ ವನಸ್ಪತಿ ಸಸ್ಯ,  ಧಾನ್ಯ, ಸಮೃದ್ಧಿಯಾಗಲಿ,  ಅನ್ನದ ಕ್ಷಾಮ ಬರದಿರಲಿ, ಸಜ್ಜನರು ನಿರ್ಭಯದಿಂದ ಬಾಳುವಂತಾಗಲಿ ಎನ್ನುವ ಪ್ರಾರ್ಥನೆ ನಮ್ಮದು. ಇದನ್ನು ಅರಿಯದೇ ನಮ್ಮನ್ನು ತುಚ್ಛವಾಗಿ ಕಾಣು ವವರಿಗೆ ನಮ್ಮ ಅಂತರಾತ್ಮದ ಅರಿವಾಗಲಿ  ಎಂದರು.

ದೇಶವನ್ನಾಳುವವರು ಯಾವ ಪಕ್ಷ–ಜನಾಂಗದವರೆ ಆಗಿರಲಿ, ನ್ಯಾಯ ಮಾರ್ಗದಿಂದ ಎಲ್ಲ ಜನರಿಗೆ ಒಳಿತಾಗು ವಂತಹ, ಸರ್ವ ಸಮಾನತೆಯ ಆಡಳಿತ ನೀಡಲಿ ಎಂಬುದು ನಮ್ಮ ಅನುಸಂಧಾನ ವಾಗಿದೆ ಎಂದರು.

ದೇಶದಲ್ಲಿ ಅಲ್ಪಸಂಖ್ಯಾತರಿಗೆ ಅಗತ್ಯ ಸೌಲಭ್ಯ, ರಕ್ಷಣೆ, ನೆರವು ನೀಡುವುದು ಪ್ರತಿ ಸರ್ಕಾರಗಳ ಆದ್ಯ ಕರ್ತವ್ಯ. ಅದನ್ನು ಬ್ರಾಹ್ಮಣ ಸಮಾಜ ಸ್ವಾಗತಿಸುತ್ತದೆ. ಆದರೆ ದೇಶದಲ್ಲಿ ಶೇ.2–3ರಷ್ಟಿರುವ ಬ್ರಾಹ್ಮಣರು ಬಹುಸಂಖ್ಯಾತರು ಹೇಗಾಗುತ್ತಾರೆ. 

ಎಲ್ಲ ಜಾತೀಯ ಕಡುಬಡವ ರಿಗೆ ಸಹಾಯ–ಸೌಲಭ್ಯ ನೀಡಬೇಕು. ಧರ್ಮದಲ್ಲಿ ರಾಜಕೀಯವಿರಬಾರದು, ರಾಜಕೀಯದಲ್ಲಿ ಧರ್ಮವಿರಬೇಕು. ಕೆಲವರನ್ನೇ ಓಲೈಸುವ ನೀತಿ ನಿಲ್ಲಬೇಕು. ಸರ್ವರಿಗೂ ಸಮಾನತೆ ನೀಡಿದಾಗಲೇ ಅದು ಜಾತ್ಯತೀತ, ಧರ್ಮನಿರಪೇಕ್ಷ ರಾಷ್ಟ್ರವಾಗುತ್ತದೆ ಎಂಬುದನ್ನು ರಾಜ್ಯವಾಳುವವರು ಮರೆಯಬಾರದು.  ಎಂದು ಕಿವಿ ಹಿಂಡಿದರು.

ಶಮಂತ ನಾಡಗೌಡ ಹಾಗೂ ವಿಭಾ ಯಲಗೂರೇಶ ಕುಲಕರ್ಣಿ  ಭರತನಾಟ್ಯ ಪ್ರದರ್ಶನ, ರಾಘವೇಂದ್ರ ಜೋಶಿ ಮುರಾಳರಿಂದ ದಾಸವಾಣಿ, ಚಿತ್ರಾ ದೋಟಿಹಾಳ, ಭವಾನಿ ಕುಲಕರ್ಣಿ, ಪದ್ಮಿನಿ ಯಾದವಾಡ ಅವರಿಂದ ಸಂಗೀತ ಸೇವೆ ನಡೆಯಿತು.

ಸಮಾಜದ ಅಧ್ಯಕ್ಷ ಗುರುದತ್ತ ಕುಲ ಕರ್ಣಿ, ಉಪಾಧ್ಯಕ್ಷ ಶ್ಯಾಮರಾವ್‌ ದೇಸಾಯಿ, ಮಲ್ಹಾರಿ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ಸುನೀಲ ಕುಲಕರ್ಣಿ, ಶ್ರೀಧರ ಜೋಶಿ, ವೆಂಕ ಟೇಶಾಚಾರ್ಯ ಗ್ರಾಮ ಪುರೋಹಿತ, ದಿನಕರ ಜೋಶಿ  ಪುರುಷೋತ್ತ ಮಾಚಾರ್ಯ ಗ್ರಾಮಪುರೋಹಿತ,  ಟ್ರಸ್ಟ ಅಧ್ಯಕ್ಷ  ವಿ.ಎ.ಹಜೇರಿ, ನಾಗಣ್ಣ ದೇಶ ಪಾಂಡೆ, ಸಂಭಾಜಿ ವಾಡಕರ,  ಮಧು ಉಭಾಳೆ,  ತಮ್ಮಣ್ಣ ದೇಶಪಾಂಡೆ, ಶಶಿ ಧರ ಡಿಸಲೆ  ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT