ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಗಲಕೋಟೆ ಆದರ್ಶ ರೈಲು ನಿಲ್ದಾಣವಾಗಲಿ’

Last Updated 24 ಮಾರ್ಚ್ 2017, 6:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಬಾಗಲಕೋಟೆ ರೈಲು ನಿಲ್ದಾಣವನ್ನು ಆದರ್ಶ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ವಿಭಾಗೀಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯರು ಒತ್ತಾಯಿಸಿದರು.

ಇಲ್ಲಿನ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ವಿಭಾಗೀಯ ರೈಲ್ವೆ ಬಳಕೆದಾರರ ಸಭೆಯಲ್ಲಿ ಮಾತನಾಡಿದ ಸದಸ್ಯರು, ‘ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಾಗಲಕೋಟೆ ಜಿಲ್ಲೆಗೆ ಮೊದಲಿಂದಲೂ ಉತ್ತಮ ರೈಲ್ವೆ ಸಂಪರ್ಕವಿದೆ. ಅಲ್ಲಿನ ನಿಲ್ದಾಣ ವಿಸ್ತಾರವಾಗಿದ್ದು, ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಕ್ಯಾಸಲ್‌ರಾಕ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಸುಧಾರಿಸಬೇಕು. ಸ್ವಯಂ ಚಾಲಿತ ಲಗೇಜ್‌ ಟ್ರಾಲಿಗಳ ಸೌಕರ್ಯ ಕಲ್ಪಿಸಬೇಕು. ಮೈಸೂರು– ಸೊಲ್ಲಾಪುರ ಗೋಲಗುಂಬಜ್‌ ರೈಲು (16536) ಹಾಗೂ ಹುಬ್ಬಳ್ಳಿ–ವಿಜಯವಾಡ (17225) ರೈಲುಗಳ ಕೆಲ ಬೋಗಿಗಳನ್ನು ನಿರ್ದಿಷ್ಟ ನಿಲ್ದಾಣಗಳ ಮಧ್ಯೆ ಮುಂಗಡ ಬುಕಿಂಗ್‌ ಮಾಡುವುದನ್ನು ಕೈಬಿಟ್ಟು, ಸಾಮಾನ್ಯ ಟಿಕೆಟ್‌ಗಳನ್ನು ಪಡೆದ ಪ್ರಯಾಣಿಕರು ಸಂಚರಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರುಣಕುಮಾರ್‌ ಜೈನ್‌ ಅವರು ಹುಬ್ಬಳ್ಳಿ ನಿಲ್ದಾಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಿಸಿದರು. ಬಳಕೆದಾರರ ಸಮಿತಿ ಸದಸ್ಯರು ಇದ್ದರು. ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಓ. ರಾಜಪ್ಪ ಇತರರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT