ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ ಸಮಸ್ಯೆ: ಶೀಘ್ರ ಹರಿಹಾರಕ್ಕೆ ಆಗ್ರಹ

Last Updated 24 ಮಾರ್ಚ್ 2017, 6:14 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಸರ್ವರೂ ಪ್ರಯತ್ನ ಮಾಡುತ್ತಿಲ್ಲ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಮೇಲೆ ವಿಶ್ವಾಸ ಇಲ್ಲ ದಂತಾಗಿದೆ, ಈಗಾಗೇ ನ್ಯಾಯಮಂಡಳಿ  ಕಲಾಪ, ವಿಚಾರಣೆ ಹಲವಾರು ಸಲ ನಡೆದಿದೆ. ಇದಕ್ಕೆ ಕೋಟ್ಯಂತರ ಹಣ ವಿನಿಯೋಗವಾಗಿದೆ.

ಆದರೂ ಸಮಸ್ಯೆ ಬಗೆ ಹರಿದಿಲ್ಲ. ಈಗ ನ್ಯಾಯಮಂಡಳಿ ಕಲಾಪ ಆರಂಭವಾಗಿದೆ. ಆದ್ದರಿಂದ ಪದೇ ಪದೇ ಕಲಾಪ ಮುಂದೂಡದೇ ನ್ಯಾಯಮಂಡಳಿ ಮಹಾದಾಯಿಗೆ ಸಮ ಸ್ಯೆಗೆ  ಅಂತಿಮ ಪರಿಹಾರ  ಕಂಡುಕೊಳ್ಳ ಬೇಕು ಎಂದು ಮಹಾದಾಯಿ ಹೋರಾಟ ಸಮಿತಿ ಸದಸ್ಯ ಪ್ರಕಾಶ ರಾಮದುರ್ಗ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 617ನೇ ದಿನವಾದ ಗುರುವಾರ ಮಾತನಾಡಿದರು. ನ್ಯಾಯ ಮಂಡಳಿಯ ಮುಖ್ಯಸ್ಥರು ಮೂರು ರಾಜ್ಯದ ಸಮಸ್ಯೆ ಆಲಿಸಿ, ವಿಶೇಷವಾಗಿ ಕರ್ನಾಟಕದ ಬೇಡಿಕೆ ಪರಿ ಶೀಲಿಸಿ ಮಹಾದಾಯಿ ನೀರು ಮಲ ಪ್ರಭೆಗೆ ಕೂಡುವ ಹಾಗೆ ಮಾಡಬೇಕೆಂದು ಒತ್ತಾಯಿಸಿದರು.

ಹೋರಾಟ ಸಮಿತಿ ಸದಸ್ಯ ಭೀಮಪ್ಪ ದಿವಟಗಿ ಮಾತನಾಡಿ ಎರಡು ವರ್ಷ ದತ್ತ ಹೋರಾಟ  ಮುನ್ನುಗ್ಗುತ್ತಿದೆ ಎಂದರೆ ಇದಕ್ಕೆ ಈ ಭಾಗದ ಶಾಸಕರು, ಸಂಸದರು ಸರಿಯಾಗಿ ಇದಕ್ಕೆ ಬೆಲೆ ನೀಡುತ್ತಿಲ್ಲ ಎನ್ನುವುದು ಸಾಬೀತಾಗಿದೆ.

ಹಲವಾರು ವರ್ಷಗಳ ಹೋರಾಟವನ್ನು ತಾರ್ಕಿಕ ಅಂತ್ಯಕಾಣಿಸಲೆಂದು ಮುನ್ನ ಡೆಸಲಾಗುತ್ತಿದೆ. ಆದರೆ ಇದಕ್ಕೆ ಅಗತ್ಯ ಇರುವ ಜನಪ್ರತಿನಿಧಿಗಳು ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಇದರ ಬಗ್ಗೆ ಬಹಳ ಸಂದರ್ಭದಲ್ಲಿ ಬಹಳಷ್ಟು ವೇದಿಕೆಗಳಲ್ಲಿ ಒತ್ತಾಯಿಸಿದ್ದೇವೆ.

ಆದರೂ ಬೆಲೆ ನೀಡದಿರುವುದು ಅವರ ನಿರ್ಲಕ್ಷ್ಯಕ್ಕೆ  ಸಾಕ್ಷಿಯಾಗಿದೆ. ಇದು ಸಲ್ಲದು. ಕೂಡಲೇ ಇದರ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ರಾಜ್ಯ  ಸರ್ಕಾರ ಹೆಚ್ಚಿನ ಆಸಕ್ತಿ ತೋರಬೇಕು. ಇಲ್ಲವಾದರೆ ಇದಕ್ಕೆ ಬಾರಿ ದಂಡ ತೆರಬೇಕಾದೀತು ಎಂದು ಎಚ್ಚರಿಸಿದರು.

ಹನಮಂತ ಪಡೆಸೂರು ಮಾತನಾಡಿ  ನಮ್ಮ ಪಾಲಿನ ನೀರಿನ  ಹಕ್ಕನ್ನು ನಾವು ಕೇಳುತ್ತಿದ್ದೇವೆ. ಅದನ್ನು ಒದಗಿಸಬೇಕಾ ದುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ. ನಾವು ಭಿಕ್ಷೆ  ಬೇಡುತ್ತಿಲ್ಲ.

ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಆದ್ದರಿಂದ ವಾಸ್ತವ ಪರಿಸ್ಥತಿ ಗಮನಿಸಿ, ನಮ್ಮ ಹೋರಾಟ ಪರಿಗಣಿಸಿ ಗೋವಾ, ಮಹಾ ರಾಷ್ಟ್ರ  ಹಾಗೂ ಕೇಂದ್ರ ಸರ್ಕಾರ  ನ್ಯಾಯ ಮಂಡಳಿಗೆ ಸಹಕರಿಸಬೇಕು.  ಯೋಜನೆ ಅನುಷ್ಠಾನಗೊಳಿಸಲು ಮುಂದಾಗಬೇಕು   ಎಂದರು.

ಧರಣಿಯಲ್ಲಿ ಎಸ್‌.ಬಿ.ಜೋಗಣ್ಣ ವರ, ಚಂದ್ರಗೌಡ ಪಾಟೀಲ,  ವೀರಣ್ಣ ಸೊಪ್ಪಿನ, ವಾಸು ಚವ್ಹಾಣ  ಯಲ್ಲಪ್ಪ ಗುಡದರಿ, ವೆಂಕಪ್ಪ ಹುಜರತ್ತಿ, ಯಲ್ಲಪ್ಪ ಚಲುವನ್ನವರ, ಪುಂಡಲೀಕ ಯಾದವ, ಚನ್ನವ್ವ ಕರಜಗಿ, ಶ್ರೀಮತಿ ನಾಯ್ಕರ, ವಿರುಪಾಕ್ಷಿ ಪಾರನ್ನವರ, ಎಚ್‌.ಎನ್‌. ಕೋರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT