ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2ಕ್ಕೆ 250 ಮಿ.ಲೀ ಶುದ್ಧ ಕುಡಿಯುವ ನೀರು

‘ವಾಹ್‌’ ಇದು ನೀರಿನ ಎಟಿಎಂ
Last Updated 24 ಮಾರ್ಚ್ 2017, 14:03 IST
ಅಕ್ಷರ ಗಾತ್ರ

ಕಾನ್ಪುರ: ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ಸ್ಟಾರ್ಟ್‌ಅಪ್‌ ಸಂಸ್ಥೆಗೆ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ₹50 ಲಕ್ಷ ಬಂಡವಾಳ ಒದಗಿಸಿದೆ.

ಲಖನೌ ಮೂಲದ ಸ್ಟಾರ್ಟ್‌ಅಪ್‌ ನೀರು ಶುದ್ಧೀಕರಿಸುವ ತಂತ್ರಜ್ಞಾನದೊಂದಿಗೆ ‘ವಾಹ್‌’ ಹೆಸರಿನಲ್ಲಿ ನೀರಿನ ಎಟಿಎಂ ಪ್ರಾರಂಭಿಸಿದೆ.

₹2 ಗೆ 250ಮಿ.ಲೀ. ಶುದ್ಧ ಕುಡಿಯುವ ನೀರನ್ನು ಎಟಿಎಂ ಯಂತ್ರದ ಮೂಲಕ ಪಡೆಯಬಹುದಾಗಿದೆ ಎಂದು ಐಐಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ನೀರಿನ ಗುಣಮಟ್ಟವನ್ನು ವಾಹ್‌ ಪಾಲಿಸುತ್ತಿದ್ದು, ಇಲ್ಲಿ ಮರುಬಳಕೆ ಮಾಡಬಹುದಾದ ಪೇಪರ್‌ ಲೋಟಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದಾಗಿ ಪ್ಲಾಸ್ಟಿಕ್‌ ಬಾಟಲಿಗಳಿಂದ ಉತ್ಪತ್ತಿಯಾಗುವ 1,500–3,500 ಕೆ.ಜಿ  ಪ್ಲಾಸ್ಟಿಕ್‌ ತ್ಯಾಜ್ಯ ನಿಯಂತ್ರಣ ಸಾಧ್ಯವಾಗಲಿದೆ.

ಪೆಟ್ರೋಲ್‌ ಪಂಪ್‌ಗಳ ಸಮೀಪದಲ್ಲಿ ಆರ್‌ಒ ಶುದ್ಧೀಕರಣ ಘಟಕ ಸ್ಥಾಪಿಸಲು ಇಂಡಿಯನ್‌ ಆಯಿಲ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಹಾಗೂ ಉದ್ಯಮ ಅಭಿವೃದ್ಧಿಗೆ ಐಐಟಿ ಮೂಲಕ ಹಣಕಾಸು ಸಹಕಾರ ನೀಡಲಾಗಿದೆ. ಸಂಸ್ಥೆಯು ನಿಗದಿತ ಸಮಯದಲ್ಲಿ ಪೂರ್ಣ ಹಣವನ್ನು ಐಐಟಿಗೆ ಹಿಂದಿರುಗಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT