ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಪೀಳಿಗೆಗಾಗಿ ಜಲ ಸಂರಕ್ಷಣೆ ಅಗತ್ಯ

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ. ನಂಜುಂಡಯ್ಯ ಸಲಹೆ
Last Updated 24 ಮಾರ್ಚ್ 2017, 9:06 IST
ಅಕ್ಷರ ಗಾತ್ರ

ಬೀದರ್‌: ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಜಲ ಸಂರಕ್ಷಣೆ ಕಾರ್ಯವನ್ನು ತೀವ್ರಗೊಳಿಸುವ ಅಗತ್ಯ ವಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ. ನಂಜುಂಡಯ್ಯ ಹೇಳಿದರು.

ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ ವಿಶ್ವ ಜಲ ದಿನಾ ಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ಶೇ 72.75 ರಷ್ಟು ನೀರಿದೆ. 0.2 ರಷ್ಟು ಜಲ ಮಾತ್ರ ಬಳಕೆಗೆ ಯೋಗ್ಯ ವಾಗಿದೆ. ರಾಜಸ್ತಾನ ಬಿಟ್ಟರೆ ಕರ್ನಾಟಕದ ಭೂಗರ್ಭದಲ್ಲಿ ಶಿಲಾ ಪದರು ಅಧಿಕ ಇದೆ. ನಾವು ನೀರನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಮುಂದೊಂದು ದಿನ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಂಡ್ಯ ಹಾಗೂ ಮೈಸೂರು ಭಾಗದ ಜನರಿಗೆ ಕಾವೇರಿ ನದಿ ಆಧಾರವಾಗಿದೆ. ಶರಾವತಿ, ನೇತ್ರಾವತಿ ಹಾಗೂ ಕಾಳಿ ನದಿ ಸಹ ರಾಜ್ಯದ ಪ್ರಮುಖ ಜಲ ಮೂಲಗಳಾಗಿವೆ. ಇವು ಬತ್ತಿ ಹೋದರೆ ಕಷ್ಟವಾಗಲಿದೆ. ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯವ ನೀರಿನ ತೀವ್ರ ಸಮಸ್ಯೆ ಇದೆ. ಅಂತಹ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಜರ ಸಂರಕ್ಷಣೆಗೆ ಪ್ರತಿಯೊಬ್ಬರು ಪಣ ತೊಡಬೇಕು. ಕೆರೆ, ಇಂಗು ಗುಂಡಿಗಳಲ್ಲಿ ನೀರು ನಿಲ್ಲಿಸಿ ನೆಲದಲ್ಲಿ ಇಂಗುವಂತೆ ಮಾಡಬೇಕಿದೆ. ಈ ಮೂಲಕ ಅಂತರ್ಜಲಮಟ್ಟವನ್ನು ಕಾಯ್ದುಕೊಳ್ಳಬೇಕಿದೆ ಎಂದು ತಿಳಿಸಿದರು.

ಜಲ ರಕ್ಷಣೆಗೆ ವಿಸ್ತೃತ ಕಾನೂನು ಇಲ್ಲ: ದೇಶದಲ್ಲಿ ಜಲ ರಕ್ಷಣೆಗೆ ವಿಸ್ತೃತ ಕಾನೂನು ಇಲ್ಲ. ಆದರೆ ನೀರಿನ ದುರ್ಬಳಕೆ ತಡೆಯಲು ಅನೇಕ ಕಾನೂನುಗಳಿವೆ. ಅವುಗಳ ಪರಿ ಣಾಮಕಾರಿ ಅನುಷ್ಠಾನ ಆಗಬೇಕಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್. ನಿರ್ಮಲಾದೇವಿ ಹೇಳಿದರು.

ಈ ವರ್ಷ ‘ನೀರು ಏಕೆ ವ್ಯರ್ಥ ಮಾಡಬೇಕು’ ಎನ್ನುವ ಘೋಷ ವಾಕ್ಯದೊಂದಿಗೆ ವಿಶ್ವಜಲ ದಿನ ಆಚರಿಸಲಾಗುತ್ತಿದೆ. ಆದ್ದರಿಂದ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದು ತಿಳಿಸಿದರು.

ಐಪಿಸಿ ಸೆಕ್ಷನ್ 277 ಪ್ರಕಾರ ಜಲಾಶಯ ಅಥವಾ ಟ್ಯಾಂಕ್‌ಗೆ ಹಾನಿ ಉಂಟು ಮಾಡಿದರೆ ಮೂರು ತಿಂಗಳು ಶಿಕ್ಷೆ ವಿಧಿಸಬಹುದು.  10644 ಕರ್ನಾಟಕ ಕಾಯ್ದೆ 234ರ ಪ್ರಕಾರ ನೀರು ಕಲುಷಿತಗೊಳಿಸಿದರೆ ಶಿಕ್ಷೆ ಹಾಗೂ ದಂಡ ಇದೆ.

1974 ಜಲ ರಕ್ಷಣೆ ಕಾಯ್ದೆ ಸೆಕ್ಷನ್ 24ರ ಪ್ರಕಾರ ನೀರು ಕಲುಷಿತಗೊಳಿಸಿದ ವ್ಯಕ್ತಿಗೆ  ಒಂದೂವರೆ  ವರ್ಷದ ವರೆಗೆ ಶಿಕ್ಷೆ ವಿಧಿಸಬಹುದು. ಕಾರ್ಖಾನೆಗಳು ನೀರನ್ನು ಕಲುಷಿತಗೊಳಿಸಿದರೆ ಆರು ವರ್ಷಗಳಿಗೆ ಶಿಕ್ಷೆ ವಿಧಿಸುವ ಆಧಿಕಾರ ಕಾನೂನಿನಲ್ಲಿ ಇದೆ ಎಂದು ಹೇಳಿದರು.

ಗುರುನಾನಕ ದೇವ ಎಂಜಿ ನಿಯರಿಂಗ್ ಕಾಲೇಜಿನ ಆಡಳಿತ ಅಧಿ ಕಾರಿ ಜಗತಾರಸಿಂಗ್, ಪ್ರಾಚಾರ್ಯ ಡಾ. ಅಶೋಕ ಎಚ್. ಬಿರಾದಾರ, ಕಾಲೇಜಿನ ಆಟೊಮೊಬೈಲ್ ಎಂಜಿ ನಿಯರಿಂಗ್ ವಿಭಾಗದ ಮುಖ್ಯಸ್ಥ ಬಿ.ಕೆ. ಪುರೋಹಿತ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅನಿಲಕುಮಾರ ಕರಂಜಿ, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಪಾಟೀಲ, ಶಿವರಾಜ ಪಾಟೀಲ ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಆಟೊಮೊಬೈಲ್ ಎಂಜಿನಿಯರಿಂಗ್ ವಿಭಾಗ, ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಹಾಗೂ ದಿ ಟೀಮ್ ಪ್ರವಾಹ ಸಂಸ್ಥೆಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

*
ಪ್ರತಿಯೊಂದು ಮನೆ ಹಾಗೂ ಕಚೇರಿಯಲ್ಲಿ ಮಳೆ ನೀರು ಸಂಗ್ರಹ ಮಾಡಬೇಕು. ಈ ಮೂಲಕ ಅಂತರ್ಜಲ ಹೆಚ್ಚಿಸಲು ಪ್ರಯತ್ನಿಸಬೇಕು.
-ಅನಿಲಕುಮಾರ ಕರಂಜಿ,
ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT