ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ

ಧಾರ್ಮಿಕ ಸಭೆಯಲ್ಲಿ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಅಭಿಮತ
Last Updated 24 ಮಾರ್ಚ್ 2017, 9:09 IST
ಅಕ್ಷರ ಗಾತ್ರ

ಜೇವರ್ಗಿ: ‘ಸಮಾಜದ ಸರ್ವಾಂಗೀಣ ಅಭಿವೃದ್ಧಿಯೇ ವೀರಶೈವ ಮಠಗಳ ಗುರಿ ಯಾಗಿದೆ. ನಾಡಿನ ವೀರಶೈವ ಮಠಗಳು ಅನ್ನ ದಾಸೋಹ, ಜ್ಞಾನ ದಾಸೋಹ ಹಾಗೂ ಶಿಕ್ಷಣ ದಾಸೋಹ ನಡೆಸುವ ಮೂಲಕ ಸಮಾಜವನ್ನು ಸಮೃದ್ಧಗೊ ಳಿಸುವ ಕಾರ್ಯದಲ್ಲಿ ತೊಡಗಿವೆ’ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವ ತ್ಪಾದರು ಹೇಳಿದರು. 

ಬುಧವಾರ ತಾಲ್ಲೂಕಿನ ಶಕಾಪುರ (ಎಸ್.ಎ) ಗ್ರಾಮದ ಸದ್ಗುರು ವಿಶ್ವಾರಾಧ್ಯ ಹಾಗೂ ಮಾತೋಶ್ರೀ ಬಸ ವಾಂಬೆ ತಾಯಿಯವರ 66ನೇ ಜಾತ್ರಾ ಮಹೋತ್ಸವ ಹಾಗೂ ಜೋಡು ರಥೋತ್ಸವ ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

ನಾಡಿನ ವೀರಶೈವ ಮಠಗಳು ಜಾತಿ, ವರ್ಣ, ವರ್ಗಗಳ ಭೇದವನ್ನು ಎಣಿಸದೆ ತಮ್ಮ ಶಕ್ತಿ ಅನುಸಾರ ಬಡ ಮಕ್ಕಳನ್ನು ಮಠದಲ್ಲಿ ಇರಿಸಿಕೊಂಡು ಅವರ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಿವೆ.

ಈ ಪರಂಪರೆಯಲ್ಲಿ ಶಕಾಪುರ ತಪೋವ ನಮಠದ ಸಿದ್ಧರಾಮ ಶಿವಾಚಾರ್ಯರು ನೂರಾರು ಬಡ ಮಕ್ಕಳನ್ನು ಮಠದಲ್ಲಿರಿ ಸಿಕೊಂಡು ಅವರಿಗೆ ಅನ್ನ, ಆಶ್ರಯ, ವಿದ್ಯೆ, ಧಾರ್ಮಿಕ ಸಂಸ್ಕಾರಗಳನ್ನು ನೀಡುತ್ತಿದ್ದಾರೆ. ಶಕಾಪುರ ಶ್ರೀಗಳ ಸಮಾಜಮುಖಿ ಸೇವೆ ಶ್ಲಾಘನೀಯ ಎಂದು ಶ್ರೀಶೈಲ ಜಗದ್ಗುರು ತಿಳಿಸಿದರು.  

ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು. ಪ್ರಭಾವತಿ ಧರ್ಮಸಿಂಗ್ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದರು.

ಹಾರಕೂಡ ಸಂಸ್ಥಾನ ಮಠದ ಡಾ.ಚನ್ನವೀರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಶಕಾಪುರ ತಪೋವನಮಠದ ಸಿದ್ಧರಾಮ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಬೋರಗಿ–ಪುರದಾಳ ವಿಶ್ವಾರಾಧ್ಯರ ಮಠದ ಮಹಾಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು.

ಸಂಜೆ 6ಗಂಟೆಗೆ ಸಹಸ್ರಾರು ಭಕ್ತಾದಿಗಳ ಜಯಘೋಷಗಳ ಮಧ್ಯೆ ಸದ್ಗುರು ವಿಶ್ವಾರಾಧ್ಯರು ಹಾಗೂ ಮಾತೋಶ್ರೀ ಬಸವಾಂಬೆ ತಾಯಿಯವರ ಜೋಡು ರಥೋತ್ಸವ ಸಂಭ್ರಮದಿಂದ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 51 ಜನ ಸಾಧಕರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವಕ್ಕೆಮ್ಮ ಚನಮಲ್ಲಯ್ಯ ಹಿರೇಮಠ, ಶಿವರಾಜ ಪಾಟೀಲ್ ರದ್ದೇವಾಡಗಿ, ದಂಡಪ್ಪ ಸಾಹು ಕುರಳಗೇರಾ, ರೇವಣಸಿದ್ದಪ್ಪ ಸಂಕಾಲಿ, ಪ್ರಮುಖರಾದ ಶಿವಶರಣಪ್ಪ ಸೀರಿ, ಶಂಕರಗೌಡ ಹಾಲಗಡ್ಲಾ,  ರಾಜಶೇಖರ ಸೀರಿ, ರಮೇಶಬಾಬು ವಕೀಲ, ಮಲ್ಲಿನಾಥಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT