ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಉಲ್ಬಣ

ನಗರಸಭೆ ವಿಪಕ್ಷ ನಾಯಕ ವೇಣುಮಾಧವ ಆಕ್ರೋಶ
Last Updated 24 ಮಾರ್ಚ್ 2017, 9:12 IST
ಅಕ್ಷರ ಗಾತ್ರ

ಸುರಪುರ: ‘ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು ನಾಗರಿಕರು ಪರಿತಪಿಸು ವಂತಾಗಿದೆ. ಈ ಸಮಸ್ಯೆ ನಿರ್ವಹಿಸಲು ನಗರಸಭೆ ವಿಫಲವಾಗಿದೆ’ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ ದೂರಿದರು.

‘ನೀರು ಪೂರೈಕೆ ವ್ಯವಸ್ಥೆ ಸಮರ್ಪಕ ವಾಗಿಲ್ಲ. 15-20 ದಿನಗಳಿಗೊಮ್ಮೆ ನೀರು ಸರಬರಾಜು ನಡೆಯುತ್ತದೆ. ಈಗಾಗಲೇ ಅನೇಕ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿದೆ. ನಾಗರಿಕರು ಕೊಳವೆಬಾವಿಗಳ ಅವಲಂಬಿಸಿದ್ದು, ಅದರಲ್ಲೂ ನೀರು ಬರುತ್ತಿಲ್ಲ. ಹಗಲು-ರಾತ್ರಿ ನೀರು ತರುವುದೇ ಕೆಲಸವಾಗಿದೆ. ಇದರಿಂದ ಜನರ ಗೋಳು ಹೇಳ ತೀರದಾಗಿದೆ’ ಎಂದು ತಿಳಿಸಿದ್ದಾರೆ.

‘ವಾರ್ಡ್‌ ನಂ.9,11 ಮತ್ತಿತರ ಕಡೆಗಳಲ್ಲಿ ಕೊಳವೆ ಬಾವಿಗಳು ದುರಸ್ತಿಗೆ ಬಂದಿ ದ್ದರೂ ನಗರ ಸಭೆ ಅಧಿಕಾ ರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ. ನೀರು ಸರಬರಾಜು ಕುರಿತು ವಿಚಾರಿಸಿದರೆ ಪೈಪ್ ಸೋರಿಕೆ ಮತ್ತು ವಿದ್ಯುತ್ ಸಮಸ್ಯೆ ನೆಪ ತಿಳಿಸಿ ಜಾರಿಕೊ ಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನೀರು ಸರಬರಾಜು ಮಾಡುವ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಇವರು ಒಂದೊಂದು ವಾರ್ಡ್‌ಗೆ ನೀರು ಸರಬರಾಜು ಮಾಡಲು 3-4 ದಿನ ತೆಗೆದು ಕೊಂಡು ಮುಂದಿನ ವಾರ್ಡ್‌ ಗಳಲ್ಲಿ ನೀರು ಪೂರೈಕೆಗೆ ಸಮಸ್ಯೆ ಮಾಡುತ್ತಿ ದ್ದಾರೆ’ ಎಂದರು.

‘ಈಗ ತಿಂಗಳಿಗೊಮ್ಮೆ ನೀರು ಬರುತ್ತಿದೆ. ಇಂಥ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ₹120 ನೀರಿನ ಕರ ತುಂಬಿ ಎಂದು ಜನರಿಗೆ ಸೂಚಿಸುತ್ತಿರು ವುದು ಸರಿಯಲ್ಲ. ಹೆಚ್ಚಿನ ಕರ ವಸೂಲಿ ತಡೆಯಬೇಕು ಎಂದು ಸಾಮಾನ್ಯ ಸಭೆಯಲ್ಲಿ ನಾವು ವಿರೋಧಿಸಿರುತ್ತೇವೆ. ಕೇವಲ ₹50 ಕರ ಪಡೆಯಬೇಕು’ ಎಂದು ಹೇಳಿದ್ದಾರೆ.

‘ವಾರದೊಳಗೆ ನೀರು ಪೂರೈಕೆ ವ್ಯವಸ್ಥೆ ಸರಿಪಡಿಸಬೇಕು. ಕೊಳವೆಬಾವಿ ದುರಸ್ತಿ ಆಗಬೇಕು. ಇಲ್ಲವಾದರೆ ನಗರಸಭೆ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ’ ಎಂದು ವಿರೋಧ ಪಕ್ಷದ ನಾಯಕ ವೇಣು ಮಾಧವ ನಾಯಕ, ಸದಸ್ಯರಾದ ರಾಜಾ ಜೈರಾಮ ನಾಯಕ, ರಾಜೇಶ್ವರಿ ವಿಷ್ಣು ಗುತ್ತೇದಾರ, ಗುರುಬಾಯಿ ವಾಲಿ, ಭೀಮಾಶಂಕರ ಬಿಲ್ಲವ್, ಪಾರಪ್ಪ ಗುತ್ತೇದಾರ, ಮಾನಪ್ಪ ಚೆಳ್ಳಿಗಿಡ, ವೆಂಕಟೇಶ ಅಲ್ಟಿ, ಎಕ್ಬಾಲ್ ವರ್ತಿ, ಕಲಿಂ ಜಹಗೀರದಾರ್ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT