ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಸ್‌ಇ 10ನೇ ತರಗತಿಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲೇ ಸಿಕ್ಕಾಪಟ್ಟೆ ತಪ್ಪು!

Last Updated 24 ಮಾರ್ಚ್ 2017, 15:45 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ನಡೆದ ಐಸಿಎಸ್‍ಇ (ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್) 10ನೇ ತರಗತಿಯ ದ್ವಿತೀಯ ಭಾಷೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದಾಗ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೇ ಗೊಂದಲ!

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ವ್ಯಾಕರಣ ಮತ್ತು ಅಕ್ಷರ ದೋಷಗಳಿಂದ ಕೂಡಿದ್ದು ವಿದ್ಯಾರ್ಥಿಗಳಿಗೆ ಪ್ರಶ್ನೆಯೇ ಅರ್ಥವಾಗಲಿಲ್ಲ.

ಪ್ರಶ್ನೆ ಪತ್ರಿಕೆಯಲ್ಲಿ ಯೋಗವಾಹಗಳು ಮಾಯ

ಸಾಹಿತ್ಯ ಸಂಗಮ- ಕವನಗಳು ವಿಭಾಗದಲ್ಲಿರುವ ಎಂಟನೇ ಪ್ರಶ್ನೆಯಲ್ಲಿ 'ಮಿಥಿಲೆ' ಎಂಬ ಕವನದ ನಾಲ್ಕು ಸಾಲುಗಳನ್ನು ನೀಡಲಾಗಿದೆ. ಆದರೆ ಪ್ರಶ್ನೆಯಲ್ಲಿ  ಪದ್ಯಭಾಗ ಎಂಬುದರ ಬದಲು ಗದ್ಯಭಾಗವನ್ನು ಓದಿ ಅನಂತರ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲ ಎಲ್ಲೆಲ್ಲಿ ಯೋಗವಾಹಗಳು ಬರುತ್ತವೋ ಅವೆಲ್ಲವೂ ಮಾಯವಾಗಿದೆ. ಉದಾಹರಣೆಗೆ ನೆಂಟ ಎಂಬುದು ‘ನೆ ಟ’ ಎಂದಾಗಿದೆ. ಸೌಂದರ್ಯ ಎಂಬ ಪದ ‘ಸೌ ದಯ’ ಎಂದೂ, ವರ್ಣಿಸಿದ್ದಾರೆ ಎಂಬುದು ‘ವಣಿ ಸಿದ್ದಾರೆ’ ಎಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT