ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ- ಬಾಬರಿ ಮಸೀದಿ ವಿವಾದದ ಬಗ್ಗೆ ಉತ್ತರ ಪ್ರದೇಶ ಸರ್ಕಾರದ 'ನಕಲಿ' ಪೋರ್ಟಲ್‍ನಲ್ಲಿ ಜನಾಭಿಪ್ರಾಯ ಸಂಗ್ರಹ!

Last Updated 24 ಮಾರ್ಚ್ 2017, 15:07 IST
ಅಕ್ಷರ ಗಾತ್ರ

ಲಖನೌ: ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿರುವ ಬೆನ್ನಲ್ಲೇ ಉತ್ತರಪ್ರದೇಶದ ಸರ್ಕಾರಿ ನಕಲಿ ಪೋರ್ಟಲ್‍ನಲ್ಲಿ ಈ ವಿವಾದದ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮಾಡಲಾಗಿದೆ.

ಉತ್ತರಪ್ರದೇಶದ ಸರ್ಕಾರಿ ವೆಬ್‍ಸೈಟ್‍ ವಿನ್ಯಾಸವನ್ನೇ ಹೋಲುವ ಈ ವೆಬ್‍ಸೈಟ್‍ನಲ್ಲಿ ಈ ರೀತಿಯ ಜನಾಭಿಪ್ರಾಯ ಸಂಗ್ರಹ  ಮಾಡಲಾಗಿದೆ. ಪ್ರಸ್ತುತ ವೆಬ್‍ಸೈಟ್‌ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಫೋಟೋ ಕೂಡಾ ಇರುವುದರಿಂದ ಮೇಲ್ನೋಟಕ್ಕೆ ಇದು ನಕಲಿ ಎಂಬುದು ಗೊತ್ತಾಗುವುದಿಲ್ಲ. ಆದರೆ  ಈ ವೆಬ್‍ಸೈಟ್‌ನ URL (www.ayodhya-issue.gov-up.in) ನೋಡಿದರೆ ಮಾತ್ರ ಇದು ನಕಲಿ ಎಂಬುದು ಗೊತ್ತಾಗುತ್ತದೆ.

ಉತ್ತರಪ್ರದೇಶ ಸರ್ಕಾರದ ಉದ್ದೇಶಿತ ಕಾರ್ಯಗಳೊಂದಿಗೆ ರಾಮಮಂದಿರದ ಬಗ್ಗೆ ಅಭಿಪ್ರಾಯ ಕೇಳುವ ವಾಟ್ಸ್ಆ್ಯಪ್‌ ಸಂದೇಶವೊಂದು ಗುರುವಾರ ವೈರಲ್ ಆಗಿದ್ದು ಆ ಸಂದೇಶದಲ್ಲಿ ಈ ವೆಬ್‌‍ಸೈಟ್ ಲಿಂಕ್ ನೀಡಿ ಅಭಿಪ್ರಾಯ ದಾಖಲಿಸುವಂತೆ ಹೇಳಲಾಗಿತ್ತು.

[related]

ವಾಟ್ಸ್ಆ್ಯಪ್‌ ಸಂದೇಶದಲ್ಲಿ ಏನಿದೆ?
ವಿವಾದಿತ ಭೂಮಿ ಅಯೋಧ್ಯೆಯಲ್ಲಿ ನಿಮಗೆ ರಾಮ ಮಂದಿರ ಬೇಕೇ? ಅಥವಾ ಬಾಬರಿ ಮಸೀದಿ ಬೇಕೆ? ಅಯೋಧ್ಯೆ ವಿವಾದಕ್ಕೆ ಸಂಬಂಧಿತ ಆನ್‍ಲೈನ್ ಅಭಿಪ್ರಾಯ ಸಂಗ್ರಹದಲ್ಲಿ ನಾನು ಭಾಗಿಯಾಗಿದ್ದೇನೆ. ನೀವು ಈ ಲಿಂಕ್ ಕ್ಲಿಕ್ಕಿಸಿ ವೋಟ್ ಮಾಡಿ. ನಿಮ್ಮ ನಿಲುವುಗಳನ್ನು ಸರ್ಕಾರಕ್ಕೆ ತಿಳಿಸುವುದು ಅತ್ಯಗತ್ಯ ಎಂದು ಈ  ಸಂದೇಶದಲ್ಲಿ ಹೇಳಲಾಗಿದೆ

ಈ ನಕಲಿ ವೆಬ್‍ಸೈಟ್‍ನ ಹೋಮ್ ಪೇಜ್‍ನಲ್ಲಿ ಆದಿತ್ಯನಾಥ್ ಅವರ ಫೋಟೊ ಇದ್ದು.  ಪೇಜ್ ಕೆಳಗಡೆ ಉತ್ತರಪ್ರದೇಶ ಸರ್ಕಾರದ ಅಧಿಕೃತ ವೆಬ್‍ಸೈಟ್ ಲಿಂಕ್ ಕೊಡಲಾಗಿದೆ. ಅಷ್ಟೇ ಅಲ್ಲದೆ ಈ ವೆಬ್‍ಸೈಟ್  ಉತ್ತರಪ್ರದೇಶ ಸರ್ಕಾರದ ಮಾನ್ಯತೆ ಪಡೆದಿರುವುದಿಲ್ಲ ಎಂಬ ಪ್ರಕಟಣೆಯನ್ನೂ ಇಲ್ಲಿ ನೀಡಲಾಗಿದೆ.

ಏತನ್ಮಧ್ಯೆ, ಈ ನಕಲಿ ವೆಬ್‍ಸೈಟ್‍ನ ಬಗ್ಗೆ https://www.whois.com ನಲ್ಲಿ ಹುಡುಕಿದಾಗ ವೆಬ್‍ಸೈಟ್ ದೆಹಲಿ ನಿವಾಸಿ ತರುಣ್ ಚೌಧರಿ ಎಂಬವರ ಹೆಸರಿನಲ್ಲಿ ನೋಂದಣಿಯಾಗಿದೆ. ಅಲ್ಲಿ ನೀಡಿರುವ ಮೊಬೈಲ್ ಸಂಖ್ಯೆಯ ವಿವರಗಳನ್ನು ಕಲೆ ಹಾಕಿದಾಗ ದೆಹಲಿಯ ಬಳಕೆದಾರರ ಮೊಬೈಲ್ ಸಂಖ್ಯೆ ಎಂಬ ಮಾಹಿತಿ ಲಭ್ಯವಾಗಿದೆ.

 .

ಈ ವೆಬ್‍ಸೈಟ್‍ನಲ್ಲಿ ನೀಡಲಾಗಿರುವ  ಅಭಿಪ್ರಾಯ ಸಂಗ್ರಹದಲ್ಲಿ ಶುಕ್ರವಾರ ಸಂಜೆಯವರೆಗೆ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದವರ ಮತಗಳು ಶೇ.80ಕ್ಕಿಂತಲೂ ಅಧಿಕ ಇದೆ. ವಿಶೇಷ ಏನೆಂದರೆ, ಈ ಜನಮತ ಸಂಗ್ರಹದಲ್ಲಿ ಒಬ್ಬ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ವೋಟ್ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT