ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹಾದ ಜೋಡಿ ಖಾರ ಕಡ್ಲೆಪುರಿ ಇರಲಿ!

Last Updated 24 ಮಾರ್ಚ್ 2017, 17:22 IST
ಅಕ್ಷರ ಗಾತ್ರ
ADVERTISEMENT

ಸಂಜೆ ಚಹಾ ಕುಡಿಯುತ್ತ ಬಾಯಾಡಿಸಲು ಏನಾದರೂ ಕುರುಕಲು ತಿನಿಸು ಇದ್ದರೆ ಎಷ್ಟು ಚೆನ್ನ ಅಲ್ಲವೇ! ಅದರಲ್ಲೂ ಖಾರ ಕಡ್ಲೆಪುರಿ ಇದ್ದರಂತೂ ಸಂಜೆ ಮತ್ತಷ್ಟು ರಂಗೇರುತ್ತದೆ. ಈ ವಾರ ’ಪ್ರಜಾವಾಣಿ’ ಕೂಡ ಖಾರ ಕಡ್ಲೆಪುರಿ ಮಾಡುವ ರೆಸಿಪಿಯನ್ನು ತಂದಿದೆ.  ಐದು ನಿಮಿಷದಲ್ಲಿ ಖಾರ ಕಡ್ಲೆ ಪುರಿ ಮಾಡಿ ಚಹಾದ ಜೊತೆ ಸವಿಯಬಹುದು.

ಸಾಮಗ್ರಿಗಳು:
1. ಮಂಡಕ್ಕಿ -                   ಒಂದು ಲೀಟರ್
2. ಎಣ್ಣೆ -                        2 ಸ್ಪೂನ್
3. ಅರಿಶಿನ -                    1/2  ಸ್ಪೂನ್
4. ಒಣಮೆಣಸಿನ ಕಾಯಿ -    1/2 ಸ್ಪೂನ್
5. ಕರಿಬೇವು -                  ಸ್ವಲ್ಪ
6. ಬೆಳ್ಳುಳ್ಳಿ -                     6
7. ಕಡಲೆಕಾಯಿ ಬೀಜ -        2 ಸ್ಪೂನ್
8. ಹುರಿಗಡಲೆ -                 2 ಸ್ಪೂನ್
9. ಒಣಮೆಣಸಿನ ಕಾಯಿ -     2
10. ಒಣಕೊಬ್ಬರಿ ಹೆಚ್ಚಿದ್ದು -   2 ಸ್ಪೂನ್
11. ಉಪ್ಪು -                     ರುಚಿಗೆ
ಮಾಡುವ ವಿಧಾನ: ಬಾಂಡ್ಲಿಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಕಾಯಿ ಬೀಜ, ಹುರಿಗಡಲೆ, ಬೆಳ್ಳುಳ್ಳಿ, ಒಣಮೆಣಸಿನ ಕಾಯಿ, ಕರಿಬೇವು, ಅರಿಶಿನ, ಖಾರದ ಪುಡಿ, ಒಣ ಕೊಬ್ಬರಿ, ಸೇರಿಸಿ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಕಡಲೆಪುರಿ ಸೇರಿಸಿ ಚೆನ್ನಾಗಿ ಕಲಸಿ. ರೂಮ್ ಟೆಂಪರೇಚರ್ ಗೆ ಬಂದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT