ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿಗಳು ತಿನಿಸುಗಳು

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅಕ್ಕಿ ಮಣ್ಣಿ

ಬೇಕಾಗುವ ಸಾಮಗ್ರಿಗಳು

ಅಕ್ಕಿ – 1 ಲೋಟ, ಜೋನಿಬೆಲ್ಲ – 2 ಲೋಟ, ಅವಲಕ್ಕಿ – 11/2 ಕಪ್‌, ಹಾಲು– 2 ಲೋಟ, ಏಲಕ್ಕಿ ಪುಡಿ – 2 ಚಮಚ 
ತುಪ್ಪ– 5 ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ

ಅವಲಕ್ಕಿಯನ್ನು ಅರ್ಧ ಗ೦ಟೆ ಹಾಗೂ ಅಕ್ಕಿಯನ್ನು 3-4 ಗ೦ಟೆ ನೆನೆಸಿಡಿ.  ನಂತರ ಎರಡನ್ನೂ ಚೆನ್ನಾಗಿ ರುಬ್ಬಿ. ಇದಕ್ಕೆ ಬೆಲ್ಲ , ಏಲಕ್ಕಿ ಪುಡಿ ಮತ್ತು ಉಪ್ಪು ಸೇರಿಸಿ. ಒಂದು ಲೋಟ ನೀರು, 2 ಲೋಟ ಹಾಲು ಹಾಕಿ.

ಒಂದು ಪ್ಯಾನ್‌ನಲ್ಲಿ ಈ ಮಿಶ್ರಣ ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬಿಸಿ ಮಾಡಿ. ಸೌಟು ಬಿಡುವಷ್ಟು ಗಟ್ಟಿಯಾಗುವವರೆಗೂ ತಿರುವುತ್ತಿರಿ. ಗಟ್ಟಿಯಾದ ಮೇಲೆ ಉರಿ ಆರಿಸಿ ಒಂದು ಚಮಚ ತುಪ್ಪ ಹಾಕಿ. ಈಗ ಪ್ಲೇಟ್‌ಗೆ ತುಪ್ಪ ಸವರಿಕೊ೦ಡು ಈ ಮಿಶ್ರಣವನ್ನು ಹಾಕಿ ಹರವಿರಿ. ಬಿಸಿ ಆರಿದ ಮೇಲೆ ಹಲ್ವದ ಥರ ಕತ್ತರಿಸಿ.

***

ರಾಗಿ ಕೀಲ್ಸ

ಬೇಕಾಗುವ ಸಾಮಗ್ರಿಗಳು

ರಾಗಿ ಎರಡು ಕಪ್‌, ಒಂದು ಕಪ್‌ ಸಕ್ಕರೆ ಅಥವಾ ಬೆಲ್ಲ, ಒಂದು ಚಮಚ ಏಲಕ್ಕಿ ಪುಡಿ, 4-5 ಗೋಡಂಬಿ ಸ್ವಲ್ಪ

ತಯಾರಿಸುವ ವಿಧಾನ
ರಾಗಿಯನ್ನು ತೊಳೆದು ರಾತ್ರಿ ನೆನೆಸಿ ಇಡಿ. ಮರುದಿನ ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸಿ ಮಾಡಿ. ಚೆನ್ನಾಗಿ ಮಿಕ್ಸ್‌ ಆದ ಮೇಲೆ ಅದನ್ನು ಸೋಸಿ. ಸೋಸದೇ ಹಾಗೆ ಉಳಿದುಕೊಂಡಿರುವ ಪುಡಿಗೆ ಪುನಃ ನೀರು ಸೇರಿಸಿ ಅದನ್ನು ಪುನಃ ಮಿಕ್ಸಿಯಲ್ಲಿ ರುಬ್ಬಿ ಪುನಃ ಸೋಸಿ. ಹೀಗೆ 2-3 ಬಾರಿ ಮಾಡಿ.

ಒಂದು ಪ್ಯಾನ್‌ನಲ್ಲಿ ಸೋಸಿರುವ ಹಾಲು, ಬೆಲ್ಲ ಅಥವಾ ಸಕ್ಕರೆ ಮತ್ತು ಹಾಕಿ ಕುದಿಯಲು ಇಡಿ. ಇದಕ್ಕೆ ಕೈಯಾಡಿಸುತ್ತಿರಿ. ಚೆನ್ನಾಗಿ ಬೇಯುವವರೆಗೆ ಕೈಯಾಡಿಸುತ್ತಲೇ ಇರಿ, ಏಕೆಂದರೆ ಇದು ಬೇಗನೆ ತಳ ಹಿಡಿಯುತ್ತದೆ. ಇದಕ್ಕೆ ಏಲಕ್ಕಿಪುಡಿ ಮತ್ತು ತುಪ್ಪ ಸೇರಿಸಿ. ಒಂದು ತಟ್ಟೆಗೆ ತುಪ್ಪ ಸವರಿ, ಈ ಮಿಶ್ರಣವನ್ನು ಹಾಕಿ.

***

ಪನೀರ್‌ ಗುಲಾಬ್‌ ಜಾಮೂನು

ಬೇಕಾಗುವ ಸಾಮಗ್ರಿಗಳು

ಪನೀರ್‌ – 2 ಕಪ್‌, ಸಕ್ಕರೆ – 2 ಕಪ್‌, ಚಿರೋಟಿ ರವೆ – 3 ಚಮಚ, ಹಾಲಿನ ಪುಡಿ – 3 ಕಪ್‌, ಮೊಟ್ಟೆ – 2, ಹಾಲುಪುಡಿ – 2 ಚಮಚ, ಅಡುಗೆ ಸೋಡಾ– 1/2 ಚಮಚ, ಕರಿಯಲು ಎಣ್ಣೆ

ತಯಾರಿಸುವ ವಿಧಾನ

ಒಂದು ಪ್ಯಾನ್‌ನಲ್ಲಿ ನೀರು ಹಾಕಿ ಅದಕ್ಕೆ ಸಕ್ಕರೆ ಸೇರಿಸಿ. ಕುದಿ ಬಂದ ಮೇಲೆ ಕೈಯಾಡಿಸುತ್ತಾ ಪಾಕದಷ್ಟು ಗಟ್ಟಿಯಾಗಿಸಿ. ಪನೀರ್, ರವೆ, ಹಾಲುಪುಡಿ, ಅಡುಗೆಸೋಡಾ ಮತ್ತು ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ.

ಪ್ಯಾನ್‌ನಲ್ಲಿ ಎಣ್ಣೆ ಬಿಸಿಯಾದ ಬಳಿಕ ಉಂಡೆ ಹಾಕಿ ಫ್ರೈ ಮಾಡಿ. 2-3 ಉಂಡೆ ಮಾತ್ರ ಒಮ್ಮೆಲೆ ಹಾಕಿ. ಹೆಚ್ಚಿಗೆ ಬೇಡ. ಕಂದು ಬಣ್ಣ ಬರುವವರೆಗೂ ಹುರಿದು ತಕ್ಷಣ ಸಕ್ಕರೆ ಪಾಕದೊಳಕ್ಕೆ ಹಾಕಿ ಮುಚ್ಚಳ ಮುಚ್ಚಿ. ಎಲ್ಲಾ ಜಾಮೂನುಗಳನ್ನು ಹುರಿದಾದ ಬಳಿಕ ಅರ್ಧ ಗಂಟೆ ಹಾಗೇ ಬಿಟ್ಟರೆ ಬಾಯಲ್ಲಿ ನೀರೂರಿಸುವ ಪನೀರ್‌ ಜಾಮೂನು ರೆಡಿ.

***

ಶ್ರೀಖಂಡ

ಬೇಕಾಗುವ ಸಾಮಗ್ರಿಗಳು
ಗಟ್ಟಿ ಮೊಸರು– 1 1/2 ಲೀಟರ್‌, ಸಕ್ಕರೆ– 1/4 ಕೇಜಿ, ನಿಂಬೆಹಣ್ಣು – ಅರ್ಧ, ಕೇಸರಿ – ಸ್ವಲ್ಪ

ತಯಾರಿಸುವ ವಿಧಾನ

ಗಟ್ಟಿ ಮೊಸರನ್ನು ಬಟ್ಟೆಯಲ್ಲಿ ಶೋಧಿಸಿ. ಇದನ್ನು ಬಸಿದು ನೀರಿನ ಅಂಶ ತೆಗೆಯಿರಿ. ಈ ಮೊಸರಿಗೆ ನಿಂಬೆರಸ ಹಾಗೂ ಕೇಸರಿ ಸೇರಿಸಿ ಬೆರೆಸಿ. ನಂತರ ಸಕ್ಕರೆ ಬೆರೆಸಿ. ಅದು ಕರಗುವವರೆಗೂ ಸೌಟಿನಿಂದ ಕೈಯಾಡಿಸಿ. ಇದಕ್ಕಾಗಿ ಮಿಕ್ಸಿಯನ್ನೂ ಉಪಯೋಗಿಸಬಹುದು. ಫ್ರಿಜ್‌ನಲ್ಲಿಟ್ಟು ತಣ್ಣಗಾದ ಬಳಿಕ ತಿನ್ನಲು ನೀಡಿ.

***

ಎಳ್ಳು ಹೋಳಿಗೆ 

ಬೇಕಾಗುವ ಸಾಮಗ್ರಿಗಳು

ಎಳ್ಳು – 1/2 ಕೇಜಿ, ಕಡಲೆ– 1/2 ಕೇಜಿ, ಮೈದಾ ಹಿಟ್ಟು– 1/2 ಕೇಜಿ, ಬೆಲ್ಲ –1 ಕೇಜಿ, ಏಲಕ್ಕಿ –5-6, ಕರಿಯಲು ಎಣ್ಣೆ

ತಯಾರಿಸುವ ವಿಧಾನ

ಎಳ್ಳನ್ನು ಹುರಿದು ಪುಡಿಮಾಡಿ. ಕಡಲೆಯನ್ನು ಪ್ರತ್ಯೇಕವಾಗಿ ಪುಡಿಮಾಡಿ. ಹದವಾದ ಬಿಸಿಯಲ್ಲಿ ಬೆಲ್ಲದ ಪಾಕ ಮಾಡಿಡಿ. ಎಳ್ಳು ಪುಡಿ ಹಾಗೂ ಕಡಲೆ ಪುಡಿಯನ್ನು ಮಿಶ್ರಣ ಮಾಡಿ ಬೆಲ್ಲದ ಪಾಕಕ್ಕೆ ಹಾಕಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ.

ಈ ಮಿಶ್ರಣದಿಂದ ಹೂರಣ ತಯಾರಿಸಿ. ಇದಕ್ಕೂ ಮೊದಲೇ ಮೈದಾಹಿಟ್ಟಿಗೆ ನೀರು ಬೆರೆಸಿ ಉಂಡೆಗಳನ್ನು ಮಾಡಿ. ಉಂಡೆಗಳನ್ನು ಚಪ್ಪಟೆಯಾಗಿಸಿ ಅದರಲ್ಲಿ ನಿಂಬೆ ಗಾತ್ರದ ಹೂರಣವಿಟ್ಟು ಅದನ್ನು ಕವರ್ ಮಾಡಿ. ನಂತರ ಹೋಳಿಗೆಯ ಆಕಾರದಲ್ಲಿ ಲಟ್ಟಿಸಿ ಕಾದ ಕಾವಲಿಯಲ್ಲಿ ಬೇಯಿಸಿದರೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT