ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿನಕ್ಕೊಂದು ಕಥೆ’

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮೊಬೈಲ್‌ ಓದುಗರ ಸಂಖ್ಯೆ ಹೆಚ್ಚಾದಂತೆ ಅವರ ಅಗತ್ಯಕ್ಕೆ ತಕ್ಕಂತೆ ಓದು ಒದಗಿಸುವ ಆ್ಯಪ್‌ಗಳು, ವೆಬ್‌ಸೈಟ್‌ಗಳು ಹೆಚ್ಚಾಗುತ್ತಿವೆ. ‘ದಿನಕ್ಕೊಂದು ಕಥೆ’ ಆ್ಯಪ್‌ ಈ ರೀತಿಯ ಆ್ಯಪ್‌ಗಳಲ್ಲೊಂದು.

ಗೂಗಲ್ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಸಿಗುವ ‘ದಿನಕ್ಕೊಂದು ಕಥೆ’ (Dinakkondu kathe) ಕನ್ನಡ ಆ್ಯಪ್‌ ಓದುಗರಿಗೆ ಸರಳ, ಚುಟುಕು ಕನ್ನಡ ಕತೆಗಳನ್ನು ಒದಗಿಸುತ್ತಿದೆ.

ಸರಳ ಭಾಷೆಯಲ್ಲಿ ಬರೆದ ಆಧುನಿಕ ಶೈಲಿಯ ಕಥೆಗಳು ಸುಲಭವಾಗಿ ಓದುಗರಿಗೆ ಅರ್ಥವಾಗುವಂತಿವೆ ಮತ್ತು ಕತೆಗಳು ಹೊಸತನದಿಂದ ಕೂಡಿವೆ. ಸಣ್ಣ ಕಥೆಗಳು ಬಹಳ ಬೇಗ ಓದಿಸಿಕೊಳ್ಳುತ್ತವೆ.

ಆ್ಯಪ್‌ ಅನ್ನು ಒಮ್ಮೆ ಡೌನ್‌ಲೋಡ್‌ ಮಾಡಿದರೆ ಇಂಟರ್‌ನೆಟ್‌ ಬಳಸದೆ ಆಫ್‌ಲೈನ್‌ನಲ್ಲೇ ಕಥೆಗಳನ್ನು ಓದಬಹುದು. ಹೊಸ ಕಥೆ ಅಪ್‌ಡೇಟ್‌ ಆಗಲು ಇಂಟರ್‌ನೆಟ್ ಅವಶ್ಯಕ. ಇಷ್ಟವಾದ ಕಥೆಗಳನ್ನು ಗುರುತು ಮಾಡಿಟ್ಟುಕೊಂಡು ಮತ್ತೆ ಓದುವ ಅವಕಾಶ ಆ್ಯಪ್‌ನಲ್ಲಿದೆ. ಬಳಕೆದಾರರು ಈಗಾಗಲೇ ಓದಿದ ಕಥೆಗಳನ್ನು ಆ್ಯಪ್‌ ನೆನಪಿಟ್ಟುಕೊಂಡು ತೋರಿಸುತ್ತದೆ.

ಆ್ಯಪ್‌ಕುರಿತು ಅಭಿಪ್ರಾಯ ತಿಳಿಸಲು, ಸಲಹೆ ಸೂಚನೆಗಳನ್ನು ನೀಡಲು ಆ್ಯಪ್‌ನಲ್ಲಿ ಸೌಲಭ್ಯವಿದೆ. ಫೀಡ್‌ಬ್ಯಾಕ್‌, ಐಡಿಯಾ ಆಯ್ಕೆಗಳನ್ನು ಬಳಸಿ ಆ್ಯಪ್‌ ಅಭಿವೃದ್ಧಿ ತಂಡವನ್ನು ಬಳಕೆದಾರರು ಸಂಪರ್ಕಿಸಬಹುದು.

ಆ್ಯಪ್‌ನ ಮುಖಪುಟದಲ್ಲಿ ಬರುವ ಜಾಹೀರಾತು ವಿಡಿಯೊಗಳು ಓದುಗರಿಗೆ ಕಿರಕಿರಿ ಉಂಟುಮಾಡುತ್ತವೆ. ಈ ವಿಡಿಯೋಗಳನ್ನು ಕ್ಲೋಸ್‌ ಮಾಡಲು ಅವಕಾಶವಿಲ್ಲದ ಕಾರಣ ವಿಡಿಯೊ ತಂತಾನೆ ಮುಗಿಯುವವರೆಗೆ ಬಳಕೆದಾರರು ಕಾಯಬೇಕಾದುದು ಆ್ಯಪ್‌ನ ಪ್ರಮುಖ ನ್ಯೂನತೆ.

ಆ್ಯಪ್‌ನಲ್ಲಿನ ಕಥೆಗಳನ್ನು ಶೇರ್‌ ಮಾಡುವ ಆಯ್ಕೆಯ ಬದಲಿಗೆ ಆ್ಯಪ್‌ಅನ್ನೇ ಶೇರ್‌ ಮಾಡುವ ಆಯ್ಕೆ ನೀಡಲಾಗಿದೆ. ಕಥೆಗಳನ್ನು ಕಾಪಿ ಮಾಡುವ ಸೌಲಭ್ಯವೂ ಆ್ಯಪ್‌ನಲ್ಲಿಲ್ಲ. ಇದು ಸಹ ಆ್ಯಪ್‌ನ ನ್ಯೂನತೆಗಳಲ್ಲೊಂದು.

ಆ್ಯಪ್‌ ಕ್ರಾಸ್‌ ತಂಡ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ 50 ಸಾವಿರಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ. ಆ್ಯಪ್‌ಬಗ್ಗೆ ಸಾಕಷ್ಟು ಮಂದಿ ಉತ್ತಮ ಅಭಿಪ್ರಾಯಗಳನ್ನೇ ಕಮೆಂಟ್‌ ಮಾಡಿದ್ದಾರೆ.

ಹಿಂದೆ ಅಜ್ಜಿ ಹೇಳುತ್ತಿದ್ದ ಕಥೆಗಳು ಈ ಆ್ಯಪ್‌ನಲ್ಲಿ ನಿರೀಕ್ಷಿಸುವಂತಿಲ್ಲ. ಇದರಲ್ಲಿರುವುದು ಎಲ್ಲಾ ಹೊಸ ಕಥೆಗಳು. ಇಲ್ಲಿಯವರೆಗೂ ಈ ಆ್ಯಪ್‌ನಲ್ಲಿ ಎಪ್ಪತ್ತೈದು ಕಥೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT