ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕೃತಿಯಲ್ಲಿ ನಗರ ಚಿತ್ರಣ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಲಾವಿದ ಜಯಂತ್‌ ಬಿ. ಹುಬ್ಳಿ ಅವರ ಚಿತ್ರಕಲಾ ಪ್ರದರ್ಶನ ‘ರೇನ್‌ಬೋಸ್‌ ಇನ್‌ ಫ್ಲೈಟ್‌’ ಮಾ. 25ರಿಂದ 30ರವರೆಗೆ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ನಡೆಯಲಿದೆ. ಶನಿವಾರ ಬೆಳಿಗ್ಗೆ 11.30ರಿಂದ ಪ್ರದರ್ಶನ ಪ್ರಾರಂಭಗೊಳ್ಳಲಿದೆ.

ನಿವ್ರಿತಿ ಈ ಪ್ರದರ್ಶನವನ್ನು ಪ್ರಸ್ತುತಪಡಿಸಿದೆ. ಚಾರ್‌ಕೋಲ್‌, ಆಕ್ರಿಲಿಕ್‌, ವುಡ್‌ ವಿನೀರ್‌ ಎಂಬ ಮೂರು ಮಾಧ್ಯಮದಲ್ಲಿ ರಚಿಸಿದ 50ಕ್ಕೂ ಹೆಚ್ಚು ಕಲಾಕೃತಿಗಳನ್ನು  ಕಲಾವಿದರು ಕಣ್ತುಂಬಿಕೊಳ್ಳಬಹುದಾಗಿದೆ.

ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಚಿತ್ರ ವೀಕ್ಷಣೆಗೆ ಅವಕಾಶವಿದೆ.

ನಗರ ಜೀವನದ ಸೊಗಸನ್ನು ತಮ್ಮ ಕುಂಚದಲ್ಲಿ ಸೆರೆಹಿಡಿದಿರುವ  ಅಶೋಕ್ ಯು. ಅವರ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಮಾ.24ರಿಂದ ಆರಂಭವಾಗಿರುವ ಈ ಪ್ರದರ್ಶನ 30 ರವರೆಗೆ ನಡೆಯಲಿದೆ. 
ಅಶೋಕ್‌ ಅವರ ಸುಮಾರು 25 ಕಲಾಕೃತಿಗಳು  ಪ್ರದರ್ಶಿಸಲಾಗುತ್ತಿದೆ.
ಸಮಯ: ಬೆಳಿಗ್ಗೆ 10ರಿಂದ 7. ಉಚಿತ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT