ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಟೀಚರ್‌ ಶಿಲ್ಪಾ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಲವತ್ತೊಂದರ ಪ್ರಾಯದ ಶಿಲ್ಪಾ ಶೆಟ್ಟಿ ತಮ್ಮ ಫಿಟ್‌ನೆಸ್‌ ಗುಟ್ಟನ್ನು ಜಗತ್ತಿನಾದ್ಯಂತ ಸಾರಲು ಹೊರಟಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಫಿಟ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಪರ್ಯಟನೆ ಮಾಡಲಿದ್ದಾರೆ. ಆ ಮೂಲಕ ಇಂಗ್ಲೆಂಡ್, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಾಗಾರ ಆಯೋಜಿಸಿ ಫಿಟ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಬಿಗ್ ಬ್ರದರ್‌ ಶೋ ಮೂಲಕ ಭಾರಿ ಸಂಖ್ಯೆಯಲ್ಲಿ ವಿದೇಶಿ ಅಭಿಮಾನಿಗಳನ್ನು ಪಡೆದಿರುವ ಶಿಲ್ಪಾ ಅವರ ಯೋಗ ವಿಡಿಯೊಗಳೂ ಸಹ ವಿದೇಶದಲ್ಲಿ ಜನಪ್ರಿಯತೆ ಗಳಿಸಿದ್ದವು. ಹೀಗಾಗಿ ಶಿಲ್ಪಾರ ಫಿಟ್‌ನೆಸ್‌ ವಿಶ್ವ ಪ್ರವಾಸ ಯಶಸ್ಸು ಗಳಿಸಲಿದೆ ಎಂಬುದು ಬಾಲಿವುಡ್ ಪರಿಣಿತರ ಲೆಕ್ಕಾಚಾರ.

ಈ ಮುಂಚೆ ಶಿಲ್ಪಾ ಶೆಟ್ಟಿ ಇದೇ ರೀತಿಯ ಕಾರ್ಯಾಗಾರಗಳನ್ನು ಕ್ಯಾಲಿಫೋರ್ನಿಯಾದ ಗೂಗಲ್ ಮುಖ್ಯ ಕಚೇರಿಯಲ್ಲಿ, ಸ್ಪೇನ್ ಮತ್ತು ದುಬೈಗಳಲ್ಲಿಯೂ ನಡೆಸಿದ್ದರು. ‘ಕಳೆದ ವರ್ಷ ಅಮೆರಿಕ, ದುಬೈಗಳಲ್ಲಿ ನನ್ನ ಫಿಟ್‌ನೆಸ್ ಕಾರ್ಯಾಗಾರ ಯಶಸ್ವಿಯಾಗಿರುವುದನ್ನು ಗಮನಿಸಿದ ಆಯೋಜಕರು, ವರ್ಲ್ಡ್‌ಟೂರ್‌ ಆಯೋಜಿಸಿದ್ದಾರೆ. ನಾನು ಅದರ ಭಾಗವಷ್ಟೆ’ ಎಂದಿದ್ದಾರೆ ಮಂಗಳೂರು ಚೆಲುವೆ ಶಿಲ್ಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT