ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪವರ್‌ ಸ್ಟಾರ್‌’ಗಳ ಸಿನಿಮಾ ಕದನ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಇಬ್ಬರು ಪವರ್‌ ಸ್ಟಾರ್‌ಗಳ ಚಿತ್ರ ಒಂದೇ ದಿನ ಬಿಡುಗಡೆಯಾಗಿ ಚಿತ್ರ ರಸಿಕರಿಗೆ ಹಬ್ಬ ಉಂಟುಮಾಡಿದೆ.

ಕನ್ನಡದ ‘ಪವರ್‌ಸ್ಟಾರ್‌’ ಪುನೀತ್‌ ರಾಜ್‌ಕುಮಾರ್ ಅವರ ‘ರಾಜಕುಮಾರ’ ಮತ್ತು ತೆಲುಗಿನ ಪವರ್‌ ಸ್ಟಾರ್ ಬಿರುದಾಂಕಿತ ಪವನ್‌ಕಲ್ಯಾಣ್ ಅವರ ‘ಕಾಟಮರಾಯುಡು’ ಶುಕ್ರವಾರ ತೆರೆಕಂಡಿವೆ.

‘ರಾಜಕುಮಾರ’ ಚಿತ್ರ ರಾಜ್ಯದಲ್ಲಿ ಸಹಜವಾಗಿಯೇ ಹಾಟ್‌ಫೇವ್‌ರಿಟ್‌. ಆದರೆ ಪವನ್‌ ಕಲ್ಯಾಣ್‌ ಸಹ ಕರ್ನಾಟಕದಲ್ಲಿ ಅಭಿಮಾನಿಗಳನ್ನು ಹೊಂದಿದ್ದು ‘ಕಾಟಮರಾಯುಡು’ ಚಿತ್ರ ಉತ್ತಮ ಗಳಿಕೆಯನ್ನೇ ಕಾಣುವ ನಿರೀಕ್ಷೆ ಇದೆ. ತನ್ನ ಸಹಜ ಆ್ಯಕ್ಷನ್‌ನಿಂದಾಗಿ ದಕ್ಷಿಣ ಭಾರತದಾದ್ಯಂತ ಅಭಿಮಾನಿಗಳನ್ನು ಸೆಳೆದಿರುವ ಪುನೀತ್‌ ಅವರ ‘ರಾಜಕುಮಾರ’ ಆಂಧ್ರದಲ್ಲಿಯೂ ‘ಕಾಟಮರಾಯುಡು’ಗೆ ಪೈಪೋಟಿ ನೀಡುವ ಸ್ಪಷ್ಟ ಸೂಚನೆ ಸಿಕ್ಕಿದೆ.

ಹೀಗೆ, ಇಬ್ಬರು ಘಟಾನುಘಟಿ ನಟರು ತಮ್ಮ ಚಿತ್ರಗಳ ಮೂಲಕ ಒಂದು ರೀತಿಯ ಜಿದ್ದಾಜಿದ್ದಿ ನಡೆಸಲಿದ್ದಾರೆ ಎಂದೇ ಚಿತ್ರರಂಗ ವಿಶ್ಲೇಷಿಸುತ್ತಿದೆ.
ಬಹು ತಾರಾಗಣದ ‘ರಾಜಕುಮಾರ’ ಚಿತ್ರ ಹಾಡುಗಳಿಂದ ಹಾಗೂ ಪುನೀತ್‌ ಅವರ ಪವರ್‌ಫುಲ್‌ ಡಾನ್ಸ್‌ನಿಂದ ಯೂಟ್ಯೂಬ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.

ಹಬ್ಬ ಸೃಷ್ಟಿಸಿದ ‘ರಾಜಕುಮಾರ’

ಪುನೀತ್‌ ಅವರ ಸಿನಿಮಾ ಬಿಡುಗಡೆ ಅಭಿಮಾನಿಗಳ ಪಾಲಿಗೆ ಹಬ್ಬ. ಬಹುನಿರೀಕ್ಷಿತ ಚಿತ್ರ ‘ರಾಜಕುಮಾರ’ವನ್ನು ಪುನೀತ್‌ ಅಭಿಮಾನಿಗಳು  ಸಹಜವಾಗಿಯೇ ಅದ್ದೂರಿಯಾಗಿಯೇ ಸ್ವಾಗತಿಸಿದ್ದಾರೆ.

ಒಂದೊಂದು ಟ್ರೇಲರ್‌ ಬಿಡುಗಡೆಯಾದಾಗಲೂ ಭಾರಿ ಸುದ್ದಿ ಮಾಡುತ್ತಿದ್ದ ಚಿತ್ರವಿದು. ಇದೀಗ ಆ ನಿರೀಕ್ಷೆಗೆ ತಕ್ಕ ಉತ್ತರ ಸಿಕ್ಕದೆ.

ಚಿತ್ರಮಂದಿರಗಳ ಮುಂದೆ ಹಾರಗಳಿಂದ ತುಂಬಿಹೋಗಿರುವ ಪುನೀತ್‌ ಕಟೌಟ್‌ಗಳು, ಪೋಸ್ಟರ್‌ಗಳು ‘ರಾಜಕುಮಾರ’ನ ಅಬ್ಬರ ಸಾರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ‘ರಾಜಕುಮಾರ’ನ ಅಬ್ಬರ ಜೋರಾಗಿದೆ. ‘ವಾಚಿಂಗ್ ರಾಜಕುಮಾರ’ ಹ್ಯಾಷ್‌ಟಾಗ್‌ನಲ್ಲಿ ಅಪ್‌ಲೋಡ್‌ ಆಗುತ್ತಿರುವ ಫೋಟೊಗಳು ಪುನೀತ್‌ ಅವರು ಚಿತ್ರರಸಿಕರ ಮೇಲೆ ಮಾಡಿರುವ ಮೋಡಿಗೆ ಸಾಕ್ಷಿ.

ನಗರದ ಕೆಲವು ಚಿತ್ರಮಂದಿರಗಳಲ್ಲಿ ಗುರುವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತು ಮೊದಲ ಶೋ ನೋಡಿದ ಅಭಿಮಾನಿಗಳ ದಂಡೂ ದೊಡ್ಡದೇ. ಡಾ.ರಾಜ್‌ಕುಮಾರ್‌ ಅವರ ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ವೇಳೆ ಕಾಣಬರುತ್ತಿದ್ದ ಸ್ಪಂದನವೇ ‘ರಾಜಕುಮಾರ’ಕ್ಕೂ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT