ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ಗೆ ಒಂದು ವರ್ಷ ನಿಷೇಧ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಷೇರು ಗುತ್ತಿಗೆ ವಹಿವಾಟಿಗೆ ಸಂಬಂಧಿಸಿದಂತೆ ರಿಲಯನ್ಸ್  ಇಂಡಸ್ಟ್ರೀಸ್‌ಗೆ (ಆರ್‌ಐಎಲ್‌) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ಒಂದು ವರ್ಷದ ನಿಷೇಧ ವಿಧಿಸಿದೆ.

ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಹತ್ತು ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಮುಕೇಶ್‌ ಅಂಬಾನಿ ನೇತೃತ್ವದ ಸಂಸ್ಥೆಯು ಅಂದಾಜು ₹ 500 ಕೋಟಿಗೂ ಹೆಚ್ಚು ಮೊತ್ತದ ದಂಡ ಪಾವತಿಸಬೇಕಾಗಿದೆ.

ವಾರ್ಷಿಕ ಶೇ 12ರ ಬಡ್ಡಿ ದರದಲ್ಲಿ ₹ 447 ಕೋಟಿಗಳಷ್ಟು  ದಂಡ ವಿಧಿಸಲಾಗಿದೆ. ಇದನ್ನು 2007ರ ನವೆಂಬರ್‌ 29ರಿಂದ ಪಾವತಿಸಬೇಕಾಗಿದೆ.  45 ದಿನಗಳಲ್ಲಿ ಪಾವತಿಸಬೇಕು ಎಂದೂ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಆರ್‌ಐಎಲ್‌ ಕಾನೂನು ಬಾಹಿರವಾಗಿ ₹  513 ಕೋಟಿ  ಲಾಭ ಮಾಡಿಕೊಂಡಿದೆ ಎಂದು ‘ಸೆಬಿ’ ಆರೋಪಿಸಿದೆ.

ರಿಲಯನ್ಸ್‌ನ ಈ ಮೊದಲಿನ ಅಂಗಸಂಸ್ಥೆ ರಿಲಯನ್ಸ್‌ ಪೆಟ್ರೋಲಿಯಂನ ಷೇರುಗಳ ಫ್ಯೂಚರ್‌ ಆ್ಯಂಡ್‌ ಆಪ್ಶನ್‌  ವಂಚನೆಯ ವಹಿವಾಟಿಗೆ ಈ ಪ್ರಕರಣ ಸಂಬಂಧಿಸಿದೆ. ಒಳಗಿನವರೇ ಕೈವಾಡ ನಡೆಸಿ ವಂಚನೆ ಎಸಗಿದ ಪ್ರಕರಣ ಇದಾಗಿದೆ. ಆರ್‌ಐಎಲ್‌  ಮತ್ತು ಇತರ 12 ಸಂಸ್ಥೆಗಳು ಒಂದು ವರ್ಷದವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಹಿವಾಟು ನಡೆಸುವಂತಿಲ್ಲ ಎಂದು ಸೆಬಿ ಆದೇಶಿಸಿದೆ.  ಈ ನಿಷೇಧ  ತಕ್ಷಣದಿಂದಲೇ ಜಾರಿಗೆ ಬರಲಿದೆ.

‘ಸೆಬಿ’ಯ ನಿಷೇಧವನ್ನು   ಷೇರುಗಳ ಮೇಲ್ಮನವಿ ನ್ಯಾಯಮಂಡಳಿಯಲ್ಲಿ  ಪ್ರಶ್ನಿಸಲಾಗುವುದು ಎಂದು  ಆರ್‌ಐಎಲ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT