ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಲ್‌ ಕಾರ್ಡಿಗೆ ಅಕ್ಕಿ

Last Updated 24 ಮಾರ್ಚ್ 2017, 19:17 IST
ಅಕ್ಷರ ಗಾತ್ರ

ಬಿಪಿಎಲ್‌ ಪಡಿತರಚೀಟಿ ಹೊಂದಿರುವವರಿಗೆ ಇನ್ನು ಮುಂದೆ ಯೂನಿಟ್‌ಗೆ 7 ಕೆ.ಜಿ. ಅಕ್ಕಿ ಕೊಡಲಾಗುತ್ತದೆ ಎಂದು ವರದಿಯಾಗಿದೆ. ಬಿಪಿಎಲ್‌ ಚೀಟಿ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ನೀಡಲಿ. ಅದರ ಜತೆಗೆ ಎಪಿಎಲ್‌ ಚೀಟಿ ಹೊಂದಿರುವವರಿಗೂ ರಿಯಾಯಿತಿ ದರದಲ್ಲಿ  ಕುಟುಂಬಕ್ಕೆ ಹತ್ತು ಕೆ.ಜಿ. ಅಕ್ಕಿ ಕೊಟ್ಟರೆ ಒಳಿತು.  ಬೇರೆ  ಪದಾರ್ಥಗಳು  ಬೇಡ. ಅಕ್ಕಿ ಮಾತ್ರ ನೀಡಲಿ. ಎಪಿಎಲ್‌ ಕಾರ್ಡು ಹೊಂದಿರುವವರಲ್ಲಿ  ಕೆಳಮಧ್ಯಮ, ಮೇಲುಮಧ್ಯಮ ವರ್ಗದ ಕುಟುಂಬಗಳಿವೆ. ಕೆಳಮಧ್ಯಮ ವರ್ಗದವರ ಅರ್ಥಿಕ ಸ್ಥಿತಿಗತಿಗೂ ಬಿಪಿಎಲ್‌ ಕುಟುಂಬಗಳ ಸ್ಥಿತಿಗತಿಗೂ ಹೆಚ್ಚು ವ್ಯತ್ಯಾಸ ಇರಲಾರದು. ಪಿಂಚಣಿ ಬರುವುದರಿಂದ ಅಥವಾ ಸಣ್ಣ ಹಿಡುವಳಿ ಇರುವುದರಿಂದ ಎಪಿಎಲ್‌ಗೆ ಸೇರಿರಬಹುದು. ಅವರಿಗೂ ಸರ್ಕಾರದಿಂದ ಸ್ವಲ್ಪ ಸಹಾಯ ದೊರೆಯಲಿ. 
ಸರಸ್ವತಮ್ಮ,
ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT