ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಅಥ್ಲೆಟಿಕ್ಸ್: ರಾಜ್ಯದ ಗಿರೀಶ್‌ಗೆ ಕಂಚು

Last Updated 24 ಮಾರ್ಚ್ 2017, 19:46 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಕರ್ನಾಟಕದ ಎಚ್‌.ಎನ್‌. ಗಿರೀಶ್ ಶುಕ್ರವಾರ ಇಲ್ಲಿ ಮುಕ್ತಾಯವಾದ ಫಜಾ ಅಂತರರಾಷ್ಟ್ರೀಯ ಐಪಿಸಿ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಹೈಜಂಪ್ ವಿಭಾಗದಲ್ಲಿ ಭಾರತದ ಶರದ್ ಕುಮಾರ್ ಬೆಳ್ಳಿ ಜಯಿಸಿದರೆ, ಗಿರೀಶ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇವರು ಕ್ರಮವಾಗಿ 1.66 ಮೀಟರ್ಸ್‌ ಮತ್ತು 1.63 ಮೀಟರ್ಸ್‌ ಜಿಗಿದು ಈ ಸಾಧನೆ ಮಾಡಿದ್ದಾರೆ. ಕೂಟದಲ್ಲಿ ಭಾರತ ತಂಡ ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದೆ.

ಭಾರತ ಗೆದ್ದುಕೊಂಡಿರುವ ಐದು ಚಿನ್ನದ ಪದಕ ಗಳಲ್ಲಿ ಮೂರು ಪದಕಗಳನ್ನು ಸುಂದರ್ ಸಿಂಗ್‌ ಗುರ್ಜರ್  ಜಯಿಸಿದ್ದಾರೆ. ಶುಕ್ರವಾರ ನಡೆದ ಶಾಟ್‌ಪಟ್ ಸ್ಪರ್ಧೆಯಲ್ಲಿ ಗುರ್ಜರ್ ತಮ್ಮ ಮೂರನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 13.36 ಮೀಟರ್ಸ್‌ ಶಾಟ್‌ಪಟ್ ಎಸೆಯುವ ಮೂಲಕ ಅವರು ಮೊದಲಿಗರಾದರು.

ಮಹಿಳೆಯರ ವೀಲ್ ಚೇರ್ ಶಾಟ್‌ಪಟ್ ವಿಭಾಗದಲ್ಲಿ ಅಂತಿಮ ದಿನ ಭಾರತ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿತು. 5.76ಮೀಟರ್ಸ್‌ ಎಸೆದ ಕರಮಜ್ಯೋತಿ ಚಿನ್ನ ಗೆದ್ದರೆ, ಶತಬದಿ ಅವಾಸ್ತಿ 5.00 ಮೀಟರ್ಸ್‌ ದೂರ ಎಸೆದು ಬೆಳ್ಳಿಗೆ ತೃಪ್ತಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT