ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗಸ್ನೇಹಿ ಶಿಕ್ಷಣ ಒದಗಿಸಿ’

ಕೈಗಾರಿಕಾ ಸಂಸ್ಥೆಗಳ ಜತೆ ಸಂವಾದದಲ್ಲಿ ಉದ್ಯಮಿಗಳಿಂದ ಸಲಹೆ
Last Updated 24 ಮಾರ್ಚ್ 2017, 20:36 IST
ಅಕ್ಷರ ಗಾತ್ರ

ಬೆಂಗಳೂರು: ಕಾಲೇಜುಗಳಲ್ಲಿ ನೀಡುವ ಶಿಕ್ಷಣಕ್ಕೂ ಉದ್ಯೋಗದ ಕಾರ್ಯಚಟುವಟಿಕೆಗೂ ಅಜಗಜಾಂತರ ಇದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಉದ್ಯಮ ಕ್ಷೇತ್ರದ ಬಗ್ಗೆ ಶಿಕ್ಷಣ ನೀಡಬೇಕು...

ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೈಗಾರಿಕಾ ಸಂಸ್ಥೆಗಳ ಜತೆ ಸಂವಾದದಲ್ಲಿ ಉದ್ಯಮಿಗಳಿಂದ ವ್ಯಕ್ತವಾದ  ಅಭಿಪ್ರಾಯವಿದು.

‘ಕಲಿಕಾ ಹಂತದಲ್ಲೇ ಪ್ರಾಯೋಗಿಕ ತರಬೇತಿ, ಉದ್ಯಮ ಕ್ಷೇತ್ರಗಳ ಹೊಸ ಬೆಳವಣಿಗೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದರ ಮೂಲಕ ಉದ್ಯೋಗಸ್ನೇಹಿ ಶಿಕ್ಷಣವನ್ನು ಒದಗಿಸಬೇಕು’ ಎಂದು ಉದ್ಯಮಿಗಳು ಸಲಹೆ ನೀಡಿದರು.

ಮೂಡೀಸ್ ಅನಾಲಿಟಿಕ್ಸ್‌ ಸಂಸ್ಥೆಯ ಉಪಾಧ್ಯಕ್ಷ ಅಬೂಬಕರ್ ಸಿದ್ಧಿಕ್ ಮಾತನಾಡಿ, ‘ಕೈಗಾರಿಕೋದ್ಯಮದ ಕಾರ್ಯಚಟುವಟಿಕೆ ಬಗೆಗಿನ ಸಂಪೂರ್ಣ ಮಾಹಿತಿಯನ್ನು ವೃತ್ತಿಪರ ಕೋರ್ಸ್‌ಗಳ ಪಠ್ಯಕ್ರಮದಲ್ಲಿ ಸೇರಿಸಬೇಕು. ಕಾಲೇಜು ಮುಗಿದ ಕೂಡಲೇ ಉದ್ಯೋಗ ಪಡೆಯಲು ತುಡಿಯುವ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಸಹಕಾರಿ’ ಎಂದು ಹೇಳಿದರು.

‘ಕೈಗಾರಿಕೆ ಕ್ಷೇತ್ರದ ಹೊಸ ತಂತ್ರಜ್ಞಾನಗಳು, ಸಂವಹನದ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲೇ ತರಬೇತಿ ನೀಡಬೇಕು.  ಇದರಿಂದ ಸಂದರ್ಶನ ಎದುರಿಸಲು ವಿದ್ಯಾರ್ಥಿಗಳಿಗೆ ಧೈರ್ಯ ಬರುತ್ತದೆ. ಮತ್ತೆ ನಾವು ತರಬೇತಿ ನೀಡುವ ಅಗತ್ಯ ಇರುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT