ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 47.30 ಲಕ್ಷ ಹಣ ಸಂಗ್ರಹ

Last Updated 25 ಮಾರ್ಚ್ 2017, 6:47 IST
ಅಕ್ಷರ ಗಾತ್ರ

ನಾಯಕನಹಟ್ಟಿ: ‘ ಗುರು ತಿಪ್ಪೇರುದ್ರ ಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ಕಾರ್ಯ ಕೈಗೊಳ್ಳಲಾಗಿದ್ದು, ಒಟ್ಟು ₹ 47.30 ಲಕ್ಷ ಸಂಗ್ರಹವಾಗಿದೆ.

ವಾರ್ಷಿಕ ಜಾತ್ರೆ ಹಾಗೂ ಮರಿಪರಿಷೆ ನಂತರ ಹುಂಡಿ ಹಣದ ಎಣಿಕೆ ಕಾರ್ಯವನ್ನು ಪ್ರತಿ ವರ್ಷ ಕೈಗೊಳ್ಳ ಲಾಗುತ್ತದೆ. ಅದರಂತೆ ಮೊದಲು ಹೊರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆ ತಹಶೀಲ್ದಾರ್ ಹಾಗೂ ಉಪತಹಶೀಲ್ದಾರ್ ನೇತೃತ್ವದಲ್ಲಿ ಬೆಳಿಗ್ಗೆ 9ಕ್ಕೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 1ಕ್ಕೆ ಪೂರ್ಣಗೊಂಡಿತು. ನಂತರ ಒಳಮಠದಲ್ಲಿ ಆರಂಭಗೊಂಡ ಎಣಿಕೆ ಕಾರ್ಯ ಸಂಜೆ 8ಕ್ಕೆ ಪೂರ್ಣಗೊಂಡಿತು.

ಹೊರಮಠದಲ್ಲಿ ₹ 10,55,013 ಹಾಗೂ ಒಳಮಠದಲ್ಲಿ ₹27,08,695 ಹಾಗೂ ಎರಡು ದೇವಾಲಯದ ಸೇವಾರ್ಥಗಳಿಂದ ₹ 6,90,885 ಮತ್ತು ದಾಸೋಹ ಭವನದ ಹುಂಡಿಯಲ್ಲಿ ₹ 51,710 ಮತ್ತು ದಾಸೋಹದ ಸೇವಾರ್ಥ ₹ 2,24,019 ಸಂಗ್ರಹವಾಗಿದೆ. ಕಳೆದ ವರ್ಷ ಜಾತ್ರೆ ಮುಗಿದ ನಂತರ ಎಣಿಕೆ ಕಾರ್ಯ ಮಾಡಿದಾಗ ಎರಡು ದೇವಾಲಯಗಳ ಹುಂಡಿ ಹಾಗೂ ವಿವಿಧ ಸೇವಾರ್ಥಿಗಳಿಂದ ₹ 39,24,135 ಸಂಗ್ರಹವಾಗಿತ್ತು.

ದೇವಾಲಯದಲ್ಲಿ ಸಂಗ್ರವಾದ ಹಣವನ್ನು ದೇವಾಲಯದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಹಣ ಎಣಿಕೆ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಟಿ.ರಾಘವೇಂದ್ರ, ತಹಶೀಲ್ದಾರ್ ಶ್ರೀಧರ್‌ಮೂರ್ತಿ ಎಸ್‌ ಪಂಡಿತ್, ಮುಜರಾಯಿ ತಹಶೀಲ್ದಾರ್‌ ಶಂಕ್ರಪ್ಪ, ಉಪ ತಹಶೀಲ್ದಾರ್‌ ಟಿ.ಜಗದೀಶ್, ಕಂದಾಯ ನಿರೀಕ್ಷಕ ಶಿವಕುಮಾರ್, ಪ್ರಕಾಶ್,

ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಬಿ.ಪಿ. ವಿಜಯಕುಮಾರ್, ಸಿಬ್ಬಂದಿ ಯಾದ ನಾಗರಾಜ, ಪ್ರವೀಣ್‌ಕುಮಾರ್, ರವಿಕುಮಾರ್, ರಾಕೇಶ್‌ಕಮಾರ್, ಮಂಜುನಾಥ, ಮಹಾಸ್ವಾಮಿ, ವೀರಭದ್ರಪ್ಪ, ದ್ವಿತೀಯ ದರ್ಜೆ ಸಹಾಯಕ ಸತೀಶ್ ಹಾಗೂ ದೇವಾಲಯ, ಕಂದಾಯ, ಬ್ಯಾಂಕ್, ಪೊಲೀಸ್‌ ಇಲಾಖೆಗಳ ಸಿಬ್ಬಂದಿ ಹಾಗೂ ಗ್ರಾಮಸ್ಥರಾದ ಜೆ.ಪಿ.ರವಿಶಂಕರ್, ತಿಪ್ಪೇಸ್ವಾಮಿ, ರುದ್ರಮುನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT