ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್‌ ಮಂಡನೆ: ಕೆರೆ ಅಭಿವೃದ್ಧಿ, ಸ್ವಚ್ಛತೆ, ಇ ಆಡಳಿತಕ್ಕೆ ಒತ್ತು

Last Updated 25 ಮಾರ್ಚ್ 2017, 7:19 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) 2017-18ನೇ ಸಾಲಿನ ಆಯವ್ಯಯ(ಬಜೆಟ್‌)ವನ್ನು ಶನಿವಾರ ಮಂಡನೆ ಮಾಡಲಾಗಿದ್ದು, ನಗರ ಸ್ವಚ್ಛತೆ, ಬೇಕಾಬಿಟ್ಟಿ ರಸ್ತೆ ಅಗೆದರೆ ₹ 10ಲಕ್ಷದಿಂದ ₹25ಲಕ್ಷದ ವರೆಗೆ ದಂಡ, ಡಿಜಿಟಲ್‌ ಆಡಳಿತಕ್ಕೆ ಒತ್ತು ನೀಡಲಾಗಿದೆ.

ಬಜೆಟ್‌ ಮಂಡಿಸಿದ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಅವರು, ಜಾಗತಿಕ ಮಟ್ಟದಲ್ಲಿ ನಗರದ ಬೆಳವಣಿಗೆಗೆ ಪೂರಕವಾಗಿ ಆರ್ಥಿಕ ಶಿಸ್ತಿಗೆ ಚಿಂತನೆ ಮಾಡಲಾಗಿದೆ ಎಂದರು.

ಬಜೆಟ್‌ ಒಟ್ಟು ಗಾತ್ರ: ₹ 9243.41
ತೆರಿಗೆ ಸಂಗ್ರಹ ನಿರೀಕ್ಷೆ: ₹3726.5 ಕೋಟಿ

* ಪಾಲಿಕೆ ವ್ಯಾಪ್ತಿ ಕೆರೆಗಳ ಅಭಿವೃದ್ಧಿಗೆ ಒತ್ತು

* ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ಡಿಜಿಟಲ್ ಸಂಖ್ಯೆ

* ನೂತನ ಪಾರ್ಕಿಂಗ್‌ ನೀತಿ ಜಾರಿ; ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್‌ ಪಾರ್ಕಿಂಗ್‌ ವ್ಯವಸ್ಥೆ

* ಕಟ್ಟಡಗಳ ಪರಿಶೀಲನೆಗೆ ಆನ್‌ ಲೈನ್‌ ವ್ಯವಸ್ಥೆ

* ಪ್ರತಿ ಮನೆಗೆ ಉಚಿತ ಕಸದ ಬುಟ್ಟಿ ನೀಡಲು ನಿರ್ಧಾರ

* ನಗರದಲ್ಲಿ ಸ್ವಚ್ಛತೆ ಕಾಪಾಡಲು ಮೇಲ್ವಿಚಾರಣೆಗೆ ಮಾರ್ಷಲ್‌ಗಳ ನೇಮಕ

* ರಸ್ತೆ ಅಗಿಯಲು ಬಿಬಿಎಂಪಿ ಅನುಮತಿ ಕಡ್ಡಾಯ. ಅನುಮತಿ ಇಲ್ಲದೆ ರಸ್ತೆ ಅಗಿದರೆ ಖಾಸಗಿ ವ್ಯಕ್ತಿಗಳಿಗೆ ₹ 10 ಲಕ್ಷ ದಂಡ, ಸಂಸ್ಥೆಗಳಿಗೆ ₹ 25 ಲಕ್ಷ ದಂಡ

* ಪಾಲಿಕೆ ಸಭೆಯ ನಿರ್ಣಯಗಳ ಮೇಲೆ ನಿಗಾಕ್ಕೆ ‘ಪೌರವಾಹಿನಿ’ ತಂಡ ರಚನೆ

* ಬೃಹತ್‌ ಕಟ್ಟಡಗಳ ಡಿಜಿಟಲ್ ಸಮೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT