ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಪರ್ ಬೆಳೆ ನಿರೀಕ್ಷೆಯಲ್ಲಿ ಬೆಳೆಗಾರ

ವರದಾನವಾದ ಮಳೆ: ಮಲೆನಾಡಿನಲ್ಲಿ ಅರಳಿದ ಕಾಫಿ ಹೂವು
Last Updated 25 ಮಾರ್ಚ್ 2017, 7:28 IST
ಅಕ್ಷರ ಗಾತ್ರ

ಮೂಡಿಗೆರೆ: ಕಳೆದ ವಾರ ಸುರಿದ ಮಳೆ ಕಾಫಿ ಬೆಳೆಗಾರರಿಗೆ ವರದಾನವಾಗಿದ್ದು, ತಾಲ್ಲೂಕಿನಾದ್ಯಂತ ಬುಧವಾರದಿಂದ ಕಾಫಿ ಹೂವು ಅರಳತೊಡಗಿವೆ.
ಪ್ರತಿವರ್ಷ ಫೆಬ್ರುವರಿ ಅಂತ್ಯ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಕಾಫಿ ಹೂವಿನ ಮಳೆಯಾಗುತ್ತಿತ್ತು.

ಆದರೆ, ಈ ಬಾರಿ ಮಾರ್ಚ್‌ ಪ್ರಾರಂ ಭವಾದರೂ ಮಳೆಯ ಸೂಚನೆ ಕಾಣದ ಹಿನ್ನೆಲೆಯಲ್ಲಿ ಶೇ 40ರಷ್ಟು ಕಾಫಿ ಬೆಳೆಗಾ ರರು ನೀರು ಹಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಆದರೆ, ಕಳೆದ ವಾರದ ಬಿಡುವು ನೀಡಿ ಎರಡು ದಿನ ಸುರಿದ ಮಳೆ ಸಾಧಾರಣವಾಗಿ ತಾಲ್ಲೂಕಿನಾ ದ್ಯಂತ ಕಾಫಿ ಹೂವು ಅರಳಲು ಉತ್ತಮ ಹದ ತಂದು ಕೊಟ್ಟಿತು.

ಕಾಫಿ ತೋಟಗ ಳಲ್ಲಿನ ನೆರಳಿಗೆ ಅನುಗುಣವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬುಧವಾರದಿಂದ ಹೂವು ಅರಳ ತೊಡಗಿದ್ದು, ಶನಿವಾರ ದವರೆಗೂ ಹೂವಾಗುವ ನಿರೀಕ್ಷೆಯಿದೆ.

ಕಳೆದ ವರ್ಷ ಕಾಫಿ ಹೂವಿನ ಮಳೆ ಸಮರ್ಪಕವಾಗಿ ಸುರಿಯದ ಕಾರಣ ಇಳುವರಿ ಸಾಧಾರಣವಾಗಿತ್ತು. ಈ ಬಾರಿ ಮಳೆ ಉತ್ತಮವಾಗಿದ್ದು, ಹೂವರಳಿರು ವುದನ್ನು ಗಮನಿಸಿದರೆ ಬಂಪರ್‌ ಬೆಳೆ ಬರಬಹುದು ಎಂಬುದು ಕಾಫಿ ಬೆಳೆಗಾ ರರ ಲೆಕ್ಕಾಚಾರ. ಆದರೆ ಶನಿವಾರ ದವರೆಗೂ ಮಳೆಯಾಗದಿದ್ದರೆ ಹೂವಿಗೆ ಪರಾಗಸ್ಪರ್ಶ ನಡೆದು ಈಚಾಗಲು ಅನುಕೂಲವಾಗುತ್ತದೆ.

ಒಂದು ವೇಳೆ ಮಳೆ ಬಂದರೆ ಅರಳುವ ಹೂವಿಗೆ ಹಾನಿಯಾಗುವುದಲ್ಲದೇ, ಮಳೆಗೆ ಸಿಕ್ಕಿದ ಹೂವು ಕೂಡ ಪರಾಗಸ್ಪರ್ಶ ಕ್ರಿಯೆಗೆ ಒಳಗಾಗದೇ ಇಳುವರಿ ಕುಂಠಿತವಾ ಗುತ್ತದೆ. ಇದುವರೆಗೂ ಮಳೆಗಾಗಿ ಪ್ರಾರ್ಥಿಸುತ್ತಿದ್ದ ಕಾಫಿ ಬೆಳೆಗಾರರು ಇನ್ನೆರಡು ದಿನ ಮಳೆ ಬಾರದಿರಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

ಎರಡು ದಿನಗಳ ತರುವಾಯ ಮಳೆಯಾದರೆ ಕಾಫಿ ಬೆಳೆಗೆ ಅನುಕೂಲವಾಗುತ್ತದೆ. ಈಗ ಆಗಿರುವ ಮಳೆಯು ರೋಬಾಸ್ಟಾ ಕಾಫಿಗಿಂತಲೂ ಅರೇಬಿಕಾಕ್ಕೆ ಹೆಚ್ಚು ಉಪಯು ಕ್ತವಾಗಿದ್ದು, ಸೂಕ್ತ ಸಮಯದಲ್ಲಿ ಮಳೆ ಸುರಿದಿದ್ದರಿಂದ ರೋಬಾಸ್ಟಾ ಕಾಫಿಗಿಂ ತಲೂ ಹೆಚ್ಚು ಹೂವಾಗಿದೆ.

ಕಾಫಿ ತೋಟಗಳು ಹೂವಿನಿಂದ ಕಂಗೊಳಿಸುತ್ತಿದ್ದು, ಪರಾಗಸ್ಪರ್ಶ ಕ್ರಿಯೆಗೆ ಅಡ್ಡಿಯಾಗಬಾರದು ಎಂಬ ಕಾರಣ ದಿಂದ ಬಹುತೇಕ ಕಾಫಿ ತೋಟಗಳಲ್ಲಿ ಎರಡು ಮೂರು ದಿನಗಳಿಗೆ ರಜೆ ಘೋಷಿಸಲಾಗಿದೆ.

ಈಗಾಗಲೇ ಕಾಫಿಗೆ ಗರಿಷ್ಠವಲ್ಲ ದಿದ್ದರೂ ಉತ್ತಮ ಬೆಲೆಯಿದ್ದು, ಇದೇ ಬೆಲೆ ಮುಂದುವರೆದು ಈಗಾಗಿರುವ ಹೂವೆಲ್ಲವೂ ಕಾಫಿಯಾಗಿ ಬಂಪರ್‌ ಬೆಳೆ ಯಾದರೆ ಕಾಫಿ ಬೆಳೆಗಾರರ ಮುಖದಲ್ಲಿ ಹರ್ಷ ಮೂಡಲು ಸಾಧ್ಯವಾಗುತ್ತದೆ.
-ಕೆ. ವಾಸುದೇವ್‌

*
ಹಿಂದಿನ ವರ್ಷಕ್ಕಿಂತ ಈ ವರ್ಷ ಕಾಫಿ ಹೂವಿಗೆ ಉತ್ತಮ ಮಳೆಯಾಗಿದ್ದು, ಎಲ್ಲಾ ತೋಟಗಳಲ್ಲೂ ಉತ್ತಮ ಹೂವಾಗಿದೆ. ಒಳ್ಳೆ ಫಸಲಿನ ನಿರೀಕ್ಷೆ ಹುಟ್ಟಿದೆ.
-ರುದ್ರಯ್ಯ,
ಕಾಫಿ ಬೆಳೆಗಾರ, ಘಟ್ಟದಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT