ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರಿಕ ದಾಖಲೆ ಉಳಿಸಲು ಮನವಿ

Last Updated 25 ಮಾರ್ಚ್ 2017, 8:21 IST
ಅಕ್ಷರ ಗಾತ್ರ

ಚನ್ನಪಟ್ಟಣ: ಇಂದು ಚಾರಿತ್ರಿಕ ದಾಖಲೆಗಳು ಅವನತಿಯ ಹಾದಿಯಲ್ಲಿದ್ದು, ಅವು ಉಳಿಸುವ ನಿಟ್ಟಿನಲ್ಲಿ ಯುವ ಸಮುದಾಯ ಕಾರ್ಯ ಪ್ರವೃತ್ತವಾಗಬೇಕು ಎಂದು ರಾಜ್ಯ ಪತ್ರಾಗಾರ ಇಲಾಖೆಯ ಸಹಾಯಕ ಪತ್ರಪಾಲಕ ಸದಾನಂದ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವೀರಗಲ್ಲು, ಮಾಸ್ತಿಗಲ್ಲು, ಶಾಸನಗಳು ಅವನತಿಯ ಅಂಚಿನಲ್ಲಿವೆ. ಇದರಿಂದ ಇತಿಹಾಸ ಅಳಿಸಿದಂತಾಗುತ್ತದೆ. ಅನೇಕ ವಿಚಾರ ಸಂಕಿರಣಗಳ, ಸಂಶೋಧನೆಗಳ, ಅರಿವಿನ ಮೂಲಕ ಇತಿಹಾಸವನ್ನು ಉಳಿಸಬೇಕಾಗಿದೆ ಎಂದು ಕರೆ ನೀಡಿದರು.

ಕೇವಲ ರಾಜ ಮಹಾರಾಜರು ಕಟ್ಟಿಸಿದ ದೇವಾಲಯ, ಮಂಟಪ, ಸ್ಮಾರಕಗಳೇ ಇತಿಹಾಸವಲ್ಲ. ನಿಮ್ಮ ಗ್ರಾಮಗಳ ವೀರಗಲ್ಲುಗಳು, ಮಾಸ್ತಿಗಲ್ಲುಗಳು, ಶಾಸನಗಳು, ಕೆರೆಗಳು, ಕಾಲುವೆಗಳು ಕೂಡ ಇತಿಹಾಸ. ಗೊತ್ತಿರುವ ಇತಿಹಾಸದ ಮೇಲೆ ಮತ್ತೆ ಮತ್ತೆ ಬೆಳಕು ಚೆಲ್ಲುವ ಬದಲಾಗಿ ಸ್ಥಳೀಯ ಇತಿಹಾಸಕ್ಕೆ ಮಹತ್ವ ನೀಡಿದಾಗ ಹೊಸ ಸಂಶೋಧನೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಮಹಾರಾಣಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರಸನ್ನಕುಮಾರ್ ಮಾತನಾಡಿ, ಇತಿಹಾಸ ಎಲ್ಲಾ ಶಾಸ್ತ್ರಗಳ ಮೂಲಬೇರು. ಹತ್ತು ಸಂಖ್ಯೆಗಳ ಮೊಬೈಲ್ ನಂಬರನ್ನು ನೆನೆಪಿಟ್ಟುಕೊಳ್ಳವ ವಿದ್ಯಾರ್ಥಿಗಳು ನಾಲ್ಕು ಸಂಖ್ಯೆಗಳ ಇತಿಹಾಸದ ಇಸವಿಗಳನ್ನು ಇಟ್ಟುಕೊಳ್ಳಲು ಏಕೆ ಸಾಧ್ಯವಿಲ್ಲ. ಅದಕ್ಕೆ ಆಸಕ್ತಿ ಇರಬೇಕು  ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಂ. ಮಾಯಿಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ ಪ್ರಕಾಶ್, ಕಾರ್ಯದರ್ಶಿ ಡಾ.ರಾಮಣ್ಣ, ವಲಯ ಉಪಾಧ್ಯಕ್ಷ ಮನು, ಕಾಂಗ್ರೆಸ್ ಮುಖಂಡ ಪುಟ್ಟರಾಜು ಮುಂತಾದವರು ಭಾಗವಹಿಸಿದ್ದರು. ಸಹ ಪ್ರಾಧ್ಯಾಪಕ ಡಾ.ಮುಜಾಹಿದ್ದೀನ್ ಖಾನ್ ಸ್ವಾಗತಿಸಿದರು. ಡಾ.ಅಣ್ಣಯ್ಯ ತೈಲೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT