ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 26–3–1967

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕೇರಳಕ್ಕೆ ರಾಜ್ಯದಿಂದ ಸ್ವಲ್ಪ ಒರಟು ಧಾನ್ಯ
ಬೆಂಗಳೂರು, ಮಾ. 25–
ಅಕ್ಕಿಯಲ್ಲಿ ಎರಡೂ ರಾಜ್ಯಗಳೂ ಖೋತಾ ಇರುವ ರಾಜ್ಯಗಳಾದ ಕಾರಣ, ‘ಅಲ್ಪ ಪ್ರಮಾಣದಲ್ಲಿ ಒರಟು ಧಾನ್ಯ ಒದಗಿಸುವುದನ್ನು ಬಿಟ್ಟರೆ’ ಮೈಸೂರು ಕೇರಳಕ್ಕೆ ಹೆಚ್ಚು ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ.
ಕೇರಳದ ಮುಖ್ಯಮಂತ್ರಿ ಶ್ರೀ ನಂಬೂದಿರಿಪಾಡ್ ಹಾಗೂ ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರ ನಡುವೆ ಸುಮಾರು 70 ನಿಮಿಷಗಳ ಕಾಲ ಮಾತುಕತೆ ನಡೆದ ನಂತರ ಈ ಪರಿಸ್ಥಿತಿಯನ್ನು ಮೈಸೂರಿನ ಮುಖ್ಯಮಂತ್ರಿಗಳು ವರದಿಗಾರರಿಗೆ ತಿಳಿಸಿದರು.

ಕಾಸರಗೋಡು ಬಗ್ಗೆ ಪೂರ್ವಭಾವಿ ಚರ್ಚೆ
ಬೆಂಗಳೂರು, ಮಾ. 25–
ಕಾಸರಗೋಡು ಪ್ರಶ್ನೆ ಕುರಿತು ಕೇರಳ ಹಾಗೂ ಮೈಸೂರು ರಾಜ್ಯಗಳ ಮುಖ್ಯಮಂತ್ರಿಗಳು ಇಂದು ಇಲ್ಲಿ ಪೂರ್ವಭಾವಿ ಮಾತುಕತೆ ನಡೆಸಿದರು. ‘ಪೂರ್ವಭಾವಿ ಮಾತುಕತೆ ನಡೆಸಿದೆವು. ಇರುವ ಪರಿಸ್ಥಿತಿಯಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಶ್ರೀ ನಂಬೂದಿರಿಪಾಡ್ ಅವರು ಕೇರಳಕ್ಕೆ  ಹೋಗುತ್ತಾರೆ. ಅವರ ಸಹೋದ್ಯೋಗಿಗಳೊಡನೆ ಚರ್ಚಿಸುತ್ತಾರೆ. ಇನ್ನೂ ಚರ್ಚೆ ನಡೆಸುವುದಿದ್ದರೆ ಸಂತೋಷದಿಂದ ಕೇರಳಕ್ಕೆ ಹೋಗುತ್ತೇನೆ’ ಎಂದು ಶ್ರೀ ನಿಜಲಿಂಗಪ್ಪ ಅವರು ವರದಿಗಾರರಿಗೆ ತಿಳಿಸಿದರು.

ಮಸ್ತಕಾಭಿಷೇಕಕ್ಕೆ ಸಕಲ ಸಿದ್ಧತೆ
ಶ್ರವಣಬೆಳಗೊಳ, ಮಾ. 25–
ವಿಂಧ್ಯಗಿರಿಯ ಚೂಡಾಮಣಿ 1008ನೆ ಬಾಹುಬಲಿ ಸ್ವಾಮಿಯವರು 14 ವರ್ಷದ ನಂತರ ಮತ್ತೆ ಮಹಾಮಸ್ತಕಾಭಿಷೇಕಕ್ಕೆ ಸಿದ್ಧರಾಗುತ್ತಿದ್ದಾರೆ. 1008 ಕಳಶಗಳ ಮಹಾ ಮಸ್ತಕಾಭಿಷೇಕದಿಂದ ಸ್ವಾಮಿಯನ್ನು ತಣಿಸಿ ತಾವೂ ತಣಿಯಲು ಭಕ್ತಕೋಟಿ ಸಿದ್ಧವಾಗುತ್ತಿದೆ.
ಒಂದು ಸಾವಿರದ ಎಂಟು ಕಳಶಗಳ ಪೈಕಿ ಹರಾಜಾಗುವ ಐವತ್ತೊಂದು ಕಳಶಗಳನ್ನುಳಿದು ಇತರ 957 ಕಳಶಗಳ ಪೈಕಿ ಸುಮಾರು ಅರ್ಧಕ್ಕಿಂತ ಹೆಚ್ಚು ಕಳಶಗಳು ಈಗಾಗಲೇ ಮಾರಾಟವಾಗಿವೆ. ಉಳಿದ ಕಳಶಗಳು ಮಾರ್ಚ್ 29 ರೊಳಗೆ ಮಾರಾಟವಾಗುವ ನಿರೀಕ್ಷೆಯಿದೆ.
ಮೊದಲ 51 ಕಳಶಗಳನ್ನು 29ರಂದು ಹರಾಜು ಹಾಕಲಾಗುವುದು. 1953ರಲ್ಲಿ ಪ್ರಥಮ ಕಳಶಕ್ಕೆ ಹದಿನೆಂಟು ಸಾವಿರ ರೂ.ಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT