ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯತೆಯೇ ಈಕೆಗೆ ನೋವು!

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದಿನ ಕಳೆಯುವುದರೊಳಗೆ ಜನಪ್ರಿಯರಾಗಬೇಕು, ಎಲ್ಲರ ಬಾಯಲ್ಲಿ ನಮ್ಮ ಹೆಸರು ಕೇಳಬೇಕು ಎಂದು ಅನೇಕರು ಆಶಿಸುತ್ತಾರೆ. ಆದರೆ ಬ್ರಿಟನ್‌ನ ಗಾಯಕಿ ಲೇಡಿ ಗಾಗಾ ಮಾತ್ರ ‘ಜನಪ್ರಿಯತೆಯ ದಾರಿ ತೀರಾ ನೋವಿನ ಕ್ಷಣವಾಗಿತ್ತು‘ ಎಂದು ಹೇಳಿಕೊಂಡಿದ್ದಾರೆ.

‘ದಿನ ಬೆಳಗಾಗುವುದರೊಳಗೆ ಸ್ಟಾರ್‌ ಆಗಿಬಿಟ್ಟೆ. ಆದರೆ ಈ ಬೆಳವಣಿಗೆಯಿಂದ ನಾನು ಏಕಾಂಗಿತನವನ್ನು ಅನುಭವಿಸಿದೆ. ತುಂಬಾ ನೋವಿನಿಂದ ಆ ದಿನಗಳನ್ನು ಕಳೆದಿದ್ದೇನೆ. ನನ್ನ ಆಪ್ತ ಸ್ನೇಹಿತರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ಒಂದೇ ಬಾರಿಗೆ ನನ್ನ ಬದುಕು ಸಂಪೂರ್ಣ ಬದಲಾಗಿಬಿಟ್ಟಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

2008ರಲ್ಲಿ ಲೇಡಿ ಗಾಗಾ ಅವರ ‘ಜಸ್ಟ್‌ ಡಾನ್ಸ್‌’ ಭಾರಿ ಜನಪ್ರಿಯತೆ ತಂದುಕೊಟ್ಟಿತ್ತು. ‘ದಿಢೀರನೆ ಜನಪ್ರಿಯತೆಯ ಎತ್ತರಕ್ಕೆ ಏರಿದರೆ ಬದುಕೂ ಬದಲಾಗುತ್ತದೆ, ಸುತ್ತಲಿನ ವಾತಾವರಣ, ಜವಾಬ್ದಾರಿ ಹೀಗೆ ಎಲ್ಲವೂ ಬದಲಾಗಿಬಿಡುತ್ತದೆ.

ಒಮ್ಮೆಲೇ ರೋಲರ್‌ಕೋಸ್ಟರ್‌ನಲ್ಲಿ ಕೂರಿಸಿ ಆಡಿಸಿದಂತಾಗುತ್ತದೆ. ಏನಾಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಜನಪ್ರಿಯತೆಯ ಬದುಕಿಗಿಂತ ಸರಳ ಜೀವನವೇ ಖುಷಿ’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT