ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿಗೆ ಶರಣಾದ ‘ಗುರು’

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ತೆಲುಗು ಚಿತ್ರರಂಗದ ಜನಪ್ರಿಯ ನಟ ವೆಂಕಟೇಶ್‌ ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರ ಮನಸ್ಸು ಗೆದ್ದವರು. ಇದೀಗ ‘ಗುರು’ ಸಿನಿಮಾ ಮೂಲಕ ಬಾಕ್ಸಿಂಗ್‌ ಕೋಚ್‌ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದೇ 31ರಂದು ಚಿತ್ರ ತೆರೆಕಾಣಲಿದೆ.

ಚಿತ್ರದಲ್ಲಿನ ತಮ್ಮ ಪಾತ್ರದ ಬಗೆಗೆ ಖುಷಿ ವ್ಯಕ್ತಪಡಿಸಿರುವ ವೆಂಕಟೇಶ್‌ ‘ಚಿತ್ರದ ನಿರ್ದೇಶಕಿ ಸುಧಾ ನನ್ನನ್ನು ನಟನನ್ನಾಗಿ ಪರಿವರ್ತಿಸಿದ್ದಾರೆ. ಮೂರು ವರ್ಷದ ಹಿಂದೆ ಈ ಚಿತ್ರಕಥೆಯನ್ನು ನನಗೆ ಹೇಳಿದ್ದರು. ಆದರೆ ನನ್ನ ಆರೋಗ್ಯಸ್ಥಿತಿ ಸರಿ ಇಲ್ಲದ ಕಾರಣ ಚಿತ್ರ ಮಾಡಲು ಸಾಧ್ಯವಾಗಿರಲಿಲ್ಲ. ಮಾಧವನ್‌ ಅವರಿಂದ ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಚಿತ್ರ ಮಾಡಿಸಿದರು.

ಚಿತ್ರ ತುಂಬಾ ಚೆನ್ನಾಗಿ ಬಂದಿತ್ತು. ಹೀಗಾಗಿ ‘ಗುರು’ ಚಿತ್ರದಲ್ಲಿ ಅಭಿನಯಿಸಲು ತಕ್ಷಣ ಒಪ್ಪಿಕೊಂಡೆ. ಈ ಚಿತ್ರ ವ್ಯಕ್ತಿಯಾಗಿ ಹಾಗೂ ನಟನಾಗಿ ನನ್ನನ್ನು ತುಂಬಾ ಬದಲಿಸಿದೆ. ಸಾಕಷ್ಟು ಕಲಿತೆ.

ಸಿನಿಮಾ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಚಿತ್ರೀಕರಣಕ್ಕೂ ಮುಂಚೆ ಸ್ಕ್ರಿಪ್ಟ್‌ ಓದಿದ್ದು. ಇದರಿಂದ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುವುದು ಸುಲಭವಾಯಿತು’ ಎಂದೆಲ್ಲಾ ಹೇಳಿಕೊಂಡಿದ್ದಾರೆ ವೆಂಕಟೇಶ್‌.

ಅಂದಹಾಗೆ ವೆಂಕಟೇಶ್‌ ತೆರೆಯ ಮೇಲೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ‘ಸುಧಾ ನನ್ನ ಹೆಚ್ಚಿನ ಎಲ್ಲಾ ಸಿನಿಮಾಗಳನ್ನು ನೋಡಿ, ಅವುಗಳಿಗಿಂತ ವಿಭಿನ್ನ ನೋಟವನ್ನು ನನಗೆ ಈ ಚಿತ್ರದಲ್ಲಿ ನೀಡಿದರು.

ಚಿತ್ರದಲ್ಲಿ ನನ್ನದು ಗುರುವಿನ ಪಾತ್ರವಾದರೂ ಸುಧಾ ಅವರಿಗೆ ನಾನು ಶರಣಾದೆ. ಚಿತ್ರಯಾನದಲ್ಲಿ ಅವರೇ ಗುರುವಾದರು. ಪಾತ್ರಗಳನ್ನು ನಾನು ನೋಡುವ ಪರಿಕಲ್ಪನೆ ಬದಲಾಯಿಸಿದರು’ ಎಂದು ಅವರು ಹೇಳಿಕೊಂಡಿದ್ದಾರೆ.

ಕ್ರೀಡೆಗೆ ಸಂಬಂಧಿಸಿದ ಚಿತ್ರದಲ್ಲಿ ಅಭಿನಯಿಸುವ ಕನಸು ವೆಂಕಟೇಶ್‌ ಅವರಲ್ಲಿ ಮೊದಲಿನಿಂದಲೂ ಇತ್ತಂತೆ. ಹೀಗಾಗಿ ಖುಷಿಯಿಂದ ನಟನೆಯಲ್ಲಿ ತೊಡಗಿಕೊಂಡ ಅವರಿಗೆ ನಿರೀಕ್ಷೆಯೂ ಸಾಕಷ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT