ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಳಿತದ ವಹಿವಾಟು ನಿರೀಕ್ಷೆ!

Last Updated 26 ಮಾರ್ಚ್ 2017, 20:13 IST
ಅಕ್ಷರ ಗಾತ್ರ

ನವದೆಹಲಿ : ಮಾರ್ಚ್‌ ತಿಂಗಳ ವಾಯಿದಾ ಮತ್ತು ಆಯ್ಕೆ ವಹಿವಾಟು (ಡೆರಿವೇಟಿವ್ಸ್‌   ಎಕ್ಸ್‌ಪೈರಿ) ಅಂತ್ಯ ಮತ್ತು ಜಾಗತಿಕ  ವಿದ್ಯಮಾನ ಈ ವಾರದ ಷೇರುಪೇಟೆ ವಹಿವಾಟಿನ ಏರಿಳಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಇದೇ ವಾರ (ಮಾರ್ಚ್‌ 31ರಂದು) ಹಣಕಾಸು ವರ್ಷ ಕೊನೆಗೊಳ್ಳುತ್ತಿರುವ ಕಾರಣ ಸಾಕಷ್ಟು ಚಟುವಟಿಕೆಗಳಿಗೂ ಷೇರುಪೇಟೆ ಸಾಕ್ಷಿಯಾಗಲಿದೆ.  
ಏ.12ರವರೆಗೆ ನಡೆಯಲಿರುವ ಸಂಸತ್‌ ಬಜೆಟ್‌ ಅಧಿವೇಶನವನ್ನು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.  ‘ಒಬಾಮ ಕೇರ್‌’ ಯೋಜನೆಯನ್ನು ಬದಲಿಸುವ ಉದ್ದೇಶದಿಂದ ರಿಪಬ್ಲಿಕನ್‌ ಪಕ್ಷ ಮಂಡಿಸಿದ ಆರೋಗ್ಯಸೇವೆ ಮಸೂದೆ ಅಗತ್ಯ ಮತ ಪಡೆಯಲು ವಿಫಲವಾಗಿರುವುದು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಭಾರಿ ಹಿನ್ನಡೆಯಾಗಿದೆ. 

ಈ ಬೆಳವಣಿಗೆ ಕೂಡ ಜಾಗತಿಕ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿದೆ.

ದೇಶೀಯ ಷೇರುಪೇಟೆಗಳ ಮಧ್ಯಮಾವಧಿ ವಹಿವಾಟಿನ ಮೇಲೆ ಜಾಗತಿಕ ಷೇರುಪೇಟೆಗಳ ಪ್ರಭಾವ ಬೀರಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT