ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು:ಜಾನಪದ ಜಾತ್ರೆಗೆ ವೈಭವದ ತೆರೆ

ಮನ ಸೆಳೆದ ಬಾನಂದೂರು ಕೆಂಪಯ್ಯ, ಡಾ.ಅಪ್ಪಗೆರೆ ತಿಮ್ಮರಾಜು ಗಾಯನ
Last Updated 27 ಮಾರ್ಚ್ 2017, 6:10 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ನಗರದ ಜಿಲ್ಲಾ ಆಟದ ಮೈದಾನದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಜಾನಪದ ಜಾತ್ರೆ   ಜನರ ಮನ ಸೆಳೆಯು ವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
 
ರಾಜ್ಯದ 30 ಜಿಲ್ಲೆಗಳಿಂದ 40 ತಂಡಗಳಲ್ಲಿ ಬಂದಿದ್ದ 300ಕ್ಕೂ ಹೆಚ್ಚು ಯುವಕ ಯುವತಿಯರು ಜಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಜಾನ ಪದದ ವಿವಿಧ ಪ್ರಾಕಾರಗಳನ್ನು ಪ್ರದರ್ಶಿ ಸುವ ಮೂಲಕ  ಗ್ರಾಮೀಣ ಕಲೆಗಳ ಸೊಗಡನ್ನು  ನೋಡುಗರಿಗೆ ತೆರೆದಿಟ್ಟರು.
 
ಸಂಜೆಯಾಗುತ್ತಿದ್ದಂತೆ ಆಟದ ಮೈದಾನದಲ್ಲಿ ಕೊಂಬು, ಕಹಳೆ, ಕಂಸಾಳೆ ಸೇರಿದಂತೆ ಗ್ರಾಮೀಣ ವಾದ್ಯಗಳು ಮೇಳೈಸುವುದರೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತ ಕೋರುತ್ತಿದ್ದವು. ಬೃಹತ್ ವೇದಿಕೆಯ ಮೇಲೆ ವೀರಗಾಸೆ, ಡೊಳ್ಳುಕುಣಿತ, ನಂದಿಧ್ವಜ ಕುಣಿತ, ಪೂಜಾ ಕುಣಿತ, ತತ್ವಪದ, ಗೀಗೀ ಪದ ಸೇರಿದಂತೆ ಜಾನಪದದ ವಿವಿಧ ಕಲಾ ಪ್ರಕಾರಗಳು ಪ್ರೇಕ್ಷಕರ ಮನಸ್ಸನ್ನು ವೇದಿಕೆಯತ್ತ ಹಿಡಿದಿಡುವಲ್ಲಿ  ಯಶಸ್ವಿಯಾದವು.
 
ಭಾನುವಾರ ಸಂಜೆ ರಾಜ್ಯ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾನಂ ದೂರು ಕೆಂಪಯ್ಯ ಅವರ ಧ್ವನಿಯಲ್ಲಿ ಮೂಡಿಬಂದ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಮತ್ತು ಡಾ.ಅಪ್ಪಗೆರೆ ತಿಮ್ಮ ರಾಜು  ಅವರು ಹಾಡಿದ ‘ತಿಂಗಾಳು ಮುಳುಗಿದವು ರಂಗೋಲಿ ಬೆಳಗಿದವು ತಾಯಿ ಚಾಮುಂಡಿಯ ಪೂಜೆಗೆಂದು ಬಾಳೆ ಬಾಗಿದವು’ ಹಾಗೂ ಚೆಲ್ಲಿದರು ಮಲ್ಲಿಗೆಯ ಬಾನ ಸುರೇರಿ ಮೇಲೆ ಹಾಡುಗಳು ಕೇಳುಗರಿಗೆ ಮೋಡಿ ಮಾಡಿದವು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ್ ಮಾತನಾಡಿ, ಆಧುನೀಕರಣದ ಭರದಲ್ಲಿ ಮರೆಯಾ ಗುತ್ತಿರುವ ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಡಿನ ಜನರಲ್ಲಿ  ಅರಿವು ಮೂಡಿಸುವ ಉದ್ದೇಶದಿಂದ ಇಲಾಖೆ ವತಿಯಿಂದ ರಾಜ್ಯಾದ್ಯಂತ ಜಾನಪದ ಜಾತ್ರೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ರಮೇಶ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ.ಮಂಜುಳಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT