ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮರಳು ಮಾಫಿಯಾ ತಡೆಗೆ ಆಗ್ರಹ

ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದಲ್ಲಿ ಹೆಚ್ಚು ಅಕ್ರಮ: ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ದೂರು
Last Updated 27 ಮಾರ್ಚ್ 2017, 7:59 IST
ಅಕ್ಷರ ಗಾತ್ರ
ಇಂಡಿ: ಜಿಲ್ಲೆಯಲ್ಲಿ ಮರಳು ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆಯತೊಡ ಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಭೀಮಾನದಿಯಲ್ಲಿ ಮರಳು ಮಾಫಿಯಾ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಡಾ, ಸಾರ್ವಭೌಮ ಬಗಲಿ ಆರೋಪಿಸಿದ್ದಾರೆ.
 
ತಾಲ್ಲೂಕಿನ ಭೀಮಾ ನದಿ ದಡದ ಪಡನೂರ, ಗುಬ್ಬೆವಾಡ, ಹಿಂಗಣಿ, ಬರ ಗುಡಿ ಗ್ರಾಮಗಳಲ್ಲಿ ಮರಳು ಪಾಯಿಂಟ್ ಮೂಲಕ ಸತತ ಮರಳನ್ನು ವಿಜಯ ಪುರ, ಬಾಗಲಕೋಟೆ, ಧಾರವಾಡ, ಬೆಳ ಗಾವಿ ಸೇರಿದಂತೆ ದೂರದ ಜಿಲ್ಲೆಗಳಿಗೂ ಮರಳು ಅಕ್ರಮವಾಗಿ ಸಾಗಾಣಿಕೆ ಮಾಡ ಲಾಗುತ್ತಿತ್ತು. ಆ ಕಾರಣದಿಂದ ರಾಷ್ಟ್ರೀಯ ಹಸಿರು ನ್ಯಾಯಪೀಠ ಮೆಟ್ಟಿಲು ಹತ್ತಬೇಕಾಗಿ ಬಂದಿತು ಎಂದು ಅವರು ತಿಳಿಸಿದ್ದಾರೆ.
 
ಆ ಹಿನ್ನೆಲೆಯಲ್ಲಿ ಇದೇ ಮಾರ್ಚ್ 10 ರಂದು ನ್ಯಾಯಾಲಯ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಭೀಮಾ ನದಿಯಿಂದ ಮರಳು ತೆಗೆಯ ದಂತೆ ಆದೇಶ ಮಾಡಿದ್ದಾರೆ.
 
2016ನೇ ಸಾಲಿನ ಬೇಸಿಗೆಯಲ್ಲಿ ಮಾಹಾರಾಷ್ಟ್ರದ ಸರಹದ್ದಿನ ನದಿ ಪಾತ್ರದಲ್ಲಿ ಮರಳು ಬ್ಲಾಕ್ ಗುರುತಿಸುವ ಮೂಲಕ ಸೋಲಾಪುರ ಜಿಲ್ಲಾ ಆಡಳಿತ ಮರಳುಗಾರಿಕೆಯ ಟೆಂಡರ್ ಅಂತಿಮ ಗೊಳಿಸಿತ್ತು.

ಟೆಂಡರ್ ಪಡೆದ ಗುತ್ತಿಗೆದಾ ರರು ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಆ ಮೂಲಕ ಸರ್ಕಾರಿ ಕೆಲಸಗಳಿಗೆ ಮರಳು ಅಗತ್ಯವೆಂದು ಅನುಮತಿ ಪಡೆದು ಸರ್ಕಾದ ಕೃಪಾ ಪೊಷಣೆಯಲ್ಲಿ ಗಡಿಯಲ್ಲಿರುವ ಮರಳು ಖಾಲಿ ಮಾಡಿದ್ದಾರೆ.
 
ದಿನಕ್ಕೆ ₹ 200ರಿಂದ  ₹ 250ಕ್ಕೂ ಹೆಚ್ಚು ಹೈವಾ ಲಾರಿ ಮೂಲಕ ಮರಳು ಸಾಗಿಸುತ್ತಿದ್ದು, ಒಂದು ದಿನಕ್ಕೆ ಒಂದು ಲಾರಿಗೆ ಮೂವತ್ತು ಸಾವಿರದಂತೆ ₹ 75 ಲಕ್ಷ ಪ್ರತಿ ನಿತ್ಯ ಪಡೆದಿದ್ದಾರೆ. ಈ ರೀತಿ 7ರಿಂದ 8 ತಿಂಗಳು ಕಾಲ ಸುಮಾರು ₹ 180 ಕೋಟಿ ಹಣ ಬಾಚಲಾಗಿದೆ ಎಂದು ಆರೋಪಿಸಿದ್ದಾರೆ.
 
ಈ ಭಾಗದ ಮರಳನ್ನು ಲೂಟಿ ಮಾಡಿ ಕ್ಷೇತ್ರದ ಜನತೆಗೆ, ರಾಜ್ಯಕ್ಕೆ ನೈಸರ್ಗಿಕ ಸಂಪನ್ಮೂಲಕ್ಕೆ ಘೋರ ಅನ್ಯಾಯವೆಸಗಿರುವವರ ವಿರುದ್ಧ ನಾನು ಸ್ವತಂತ್ರ ಹಾಗೂ ಸಂವಿಧಾನಾತ್ಮಕ ವಿಚಾರಣಾ ಸಂಸ್ಥೆಗಳಾದ ಕರ್ನಾಟಕ ಲೋಕಾಯುಕ್ತ ಹಾಗೂ ಸಿಬಿಐಗಳಿಗೆ ದೂರು ಸಲ್ಲಿಸಿ ಅಕ್ರಮಗಳ ಅಸಲಿ ಬಣ್ಣವನ್ನು ಸಾರ್ವಜನಿಕರಿಗೆ ಪ್ರಸ್ತುತ ಪಡಿಸುತ್ತೇನೆ ಎಂದು ಹೇಳಿದರು.
 
ಕರ್ನಾಟಕ ಸರ್ಕಾರದಲ್ಲಿ ನನಗೆ ನ್ಯಾಯ ಸಿಗದೇ ಇದ್ದರೆ ಮಹಾರಾಷ್ಟ್ರ ಸರ್ಕಾರದ ಮೂಲಕ ಹೋರಾಟ ಮಾಡಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ. ಈ ಕುರಿತು ಈಗಾಗಲೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಂದ ಸೂಕ್ತ ದಾಖಲೆ ಸಂಗ್ರಹಿಸಿ, ಅವುಗಳನ್ನು ಹಸಿರು ಪೀಠಕ್ಕೆ ನೀಡಿದ್ದು ಇನ್ನೂ ಕೆಲವು ಮಹತ್ವದ ದಾಖಲೆಗಳನ್ನು ತನಿಖಾ ಸಂಸ್ಥೆಗೆ ನೀಡಲು ಸಿದ್ದತೆ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT