ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರೇಶ್ವರನ ಹುಂಡಿಯಲ್ಲಿ ₹ 28 ಲಕ್ಷ

Last Updated 27 ಮಾರ್ಚ್ 2017, 9:08 IST
ಅಕ್ಷರ ಗಾತ್ರ
ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಹುಂಡಿಯನ್ನು ಶುಕ್ರವಾರ ಒಡೆದು ಎಣಿಕೆಮಾಡಲಾಗಿ ಒಟ್ಟು ₹ 28,91,685 ಸಂಗ್ರಹವಾಗಿದೆ. ಕಳೆದ ಡಿ.20 ರಿಂದ ಮೂರು ತಿಂಗಳ ಅವಧಿಯಲ್ಲಿ ಈ ಹಣ ಸಂಗ್ರಹವಾಗಿದೆ.
 
ಇದರಲ್ಲಿ ಅಮಾನ್ಯಗೊಂಡ ನೋಟುಗಳಲ್ಲಿ 1,000 ಮುಖಬೆಲೆಯ ಒಟ್ಟು 9 ನೋಟುಗಳು ಹಾಗೂ 500 ಮುಖಬೆಲೆಯ ಒಟ್ಟು 106 ನೋಟುಗಳು ಹುಂಡಿಯಲ್ಲಿರುವುದು ಕಂಡುಬಂದಿತು. 
 
ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ ಇವರ ನೇತೃತ್ವದಲ್ಲಿ ನಡೆದ ಏಣಿಕಾ ಕಾರ್ಯವು ಸಂಜೆಯ ವೇಳೆಗೆ ಪೂರ್ಣಗೊಂಡಿತು. ಕಟ್ಟೆಮನಿ ದೈವಸ್ಥರು ಹಾಗೂ ದೇವರಮನಿ ಕರಿಯಪ್ಪ, ಎಸ್.ಪ್ರೇಮಾನಂದಗೌಡ, ಕೆಂಪಳ್ಳಿ ಸಿದ್ದನಗೌಡ್ರು, ಸಕ್ರೀಗೌಡ್ರು, ಕೆ.ಎಸ್.ನಾಗರಾಜಗೌಡ್ರು, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಚ್.ಹಾಲಪ್ಪ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಎಸ್.ಮಲ್ಲಿನಾಥ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT