ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಹೊಟ್ಟೆಗೆ ಒಂದಿಷ್ಟು ‘ಮದ್ದು’

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಯಾವುದೇ ಕಾಯಿಲೆ ಇರಲಿ ಹೊಟ್ಟೆ ತುಂಬ ಊಟ ಮಾಡಿದ ನಂತರ ಔಷಧ ಸೇವಿಸಬೇಕು ಎನ್ನುವುದು ವಾಡಿಕೆ. ಆದರೆ ಕೆಲವು ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದೇ ಒಳಿತು.

* ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಿ ಕುಡಿದರೆ ಬೊಜ್ಜು ಕಡಿಮೆಯಾಗುತ್ತದೆ.

* ಜೇಷ್ಠಮದ್ದು, ಹಿಪ್ಪಲಿ, ಜಾಯಿಕಾಯಿ, ಗದಗನಕಾಯಿ, ಶುಂಠಿ, ಮೆಣಸಿನ ಕಾಳನ್ನು ತೇಯ್ದು ಮಗುವಿಗೆ  ಒಂದು ಚಮಚದಷ್ಟು ಮುಂಜಾನೆ ನೀಡಿದರೆ ಜಂತು ಹುಳುವಿನ ಸಮಸ್ಯೆ ಉಂಟಾಗದು.

* ಹಸಿದ ಹೊಟ್ಟೆಯಲ್ಲಿ ಮೂರು ಲೋಟ ನೀರು ಕುಡಿದು 45 ನಿಮಿಷಗಳ ನಂತರ ಆಹಾರ  ಸೇವಿಸಬೇಕು. ಉತ್ತಮ ಚಯಾಪಚಯ ಕ್ರಿಯೆಗೆ, ತ್ವಚೆಯ ಕಾಂತಿ ಹೆಚ್ಚಲು, ಬೊಜ್ಜಿನ ಸಮಸ್ಯೆ ನಿವಾರಿಸಲು, ಹೊಳೆಯುವ ಹಾಗೂ ಆರೋಗ್ಯಕರ ಕೂದಲ ಬೆಳವಣಿಗೆಗೆ ಇದು ಸಹಕಾರಿ.

* ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಮೂತ್ರಪಿಂಡದಲ್ಲಿ ಕಲ್ಲು  ಹಾಗೂ ಮೂತ್ರಕೋಶದ ಸೋಂಕಿಗೆ ಉತ್ತಮ ಮದ್ದು.

* ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಹೊಟ್ಟೆ ಮತ್ತು ಎದೆಯುರಿಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ವಿಷದ ಅಂಶವನ್ನು ಹೊರಹಾಕುತ್ತದೆ.

* ಹಲ್ಲುಜ್ಜಿದ ನಂತರ ಹಸಿದ ಹೊಟ್ಟೆಯಲ್ಲೇ 10–15 ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವ ರೂಢಿ ಮಾಡಿಕೊಂಡರೆ ಅನೇಕ ಲಾಭಗಳಿವೆ. ಕೂದಲು ಉದುರುವಿಕೆ ಕಡಿಮೆ ಆಗುತ್ತದೆ. ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡಬಲ್ಲುದು.

* ಖಾಲಿ ಹೊಟ್ಟೆಗೆ ಕರಿಬೇವು ಸೇವನೆ ಗ್ಯಾಸ್ಟ್ರಿಕ್‌ ಹಾಗೂ ಅಸಿಡಿಟಿಗೆ ರಾಮಬಾಣ, ಕೀಲುನೋವು ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.

* ಹಾಗೂ ಆ್ಯಸಿಡಿಟಿ ಸಮಸ್ಯೆಗೆ ರಾಮಬಾಣ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಧಿ ನೋವು ಮುಂತಾದ ಸಮಸ್ಯೆಗಳಿಗೆ  ಕರಿಬೇವು ಸೇವನೆ ಪರಿಹಾರ ನೀಡುತ್ತದೆ.

* ಕರಿಬೇವು ಸೇವನೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ. ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ನೀಡುತ್ತದೆ.

* ಕಹಿಬೇವನ್ನು ಅರೆದು ಮುಂಜಾನೆ ಕುಡಿದರೆ ದೊಡ್ಡವರಲ್ಲಿ ಜಂತು ಹುಳುವಿನ ಸಮಸ್ಯೆ ಉಂಟಾಗುವುದಿಲ್ಲ. ವಾಯು ಸಂಬಂಧಿ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಇದಕ್ಕಿದೆ.

* ಹಸಿದ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾದಿಂದ ಮುಕ್ತಗೊಳಿಸುತ್ತದೆ.  ಜೀರ್ಣಕ್ರಿಯೆ ಉತ್ತಮವಾಗುತ್ತದೆ.

* ಉದ್ವೇಗ ಹಾಗೂ ಆತಂಕದಿಂದ ಎದೆಬಡಿತ ಹೆಚ್ಚುವ ಸಮಸ್ಯೆ ನಿಮ್ಮಲ್ಲಿದ್ದರೆ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೀಬೆ ಹಣ್ಣು ಸೇವಿಸುವುದು ಅತ್ಯುತ್ತಮ.
(ಮಾಹಿತಿ: ಇಂಟರ್‌ನೆಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT