ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಬಾಳೆ ಪ್ರತಿಭಾರಂಗದ 22ನೇ ವರ್ಷಾಚರಣೆ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹೊಂಬಾಳೆ ಪ್ರತಿಭಾರಂಗದ 22ನೇ ವರ್ಷಾಚರಣೆ ಪ್ರಯುಕ್ತ  ಸುಗಮಸಂಗೀತ ಮೇಳವನ್ನು ಆಯೋಜಿಸಲಾಗಿತ್ತು. ಬಾನಂದೂರು ಕೆಂಪಯ್ಯ, ವೇಮಗಲ್ ಡಿ.ನಾರಾಯಣಸ್ವಾಮಿ, ಚಂದಾಪುರ ಸಿದ್ದರಾಜು, ಸಿ.ಎಂ. ನರಸಿಂಹಮೂರ್ತಿ, ಸ್ವಾಮಿ ಗಾಮನಹಳ್ಳಿ ಮುಂತಾದವರು ಜನಪದ ಗೀತೆಗಳನ್ನು ಹಾಡಿದರು. 

ಪಂಚಾಮೃತ, ಶ್ರೀಸಪ್ತಕ, ಸೃಜನ, ನಿನಾದ, ಇಂಚರ, ಸಮರಸ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸಮೂಹ ಗಾಯನ ನಡೆಸಿಕೊಟ್ಟರು.
ಹಿರಿಯ ರಂಗ ಕಲಾವಿದ ಆರ್. ಪರಮಶಿವನ್, ಹರಿಕಥಾ ವಿದ್ವಾನ್‌ ಲಕ್ಷ್ಮಣದಾಸ್, ಎಚ್.ಜೆ.ಸಿದ್ದರಾಜಯ್ಯ  ಪೌರಾಣಿಕ ನಾಟಕಗಳಿಂದ ಆಯ್ದ ಗೀತೆಗಳನ್ನು ಪ್ರಸ್ತುತಪಡಿಸಿದರು.

ಭಾವಗೀತೆಗಳ ಗಾಯನದಲ್ಲಿ ಶಶಿಧರ ಕೋಟೆ, ಟಿ.ರಾಜಾರಾಂ, ಟಿ.ಗೋಪಾಲಕೃಷ್ಣ, ಬಂಡ್ಲಹಳ್ಳಿ ವಿಜಯಕುಮಾರ್, ಆನಂದ ಮಾದಲಗೆರೆ, ನರಹರಿ ದೀಕ್ಷಿತ್, ರಾಘವೇಂದ್ರ ಬೀಜಾಡಿ, ಹರೀಶ್ ನರಸಿಂಹ, ದಿವಾಕರ ಕಶ್ಯಪ್, ಗಾಯತ್ರಿ ಕೇಶವ, ಸ್ಮಿತಾ ವಸಂತ್, ಇಂಚರ ಪ್ರವೀಣ್  ಭಾಗವಹಿಸಿದ್ದರು.

ಸಂಗೀತಮೇಳದ ಸಮಾರೋಪದಲ್ಲಿ  ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಗೀತೆಯೊಂದನ್ನು ಹಾಡಿದರು. ಕೆ.ಎಸ್.ಸುರೇಖಾ, ಎಚ್.ಫಲ್ಗುಣ, ಪಂಚಮ್ ಹಳಿಬಂಡಿ, ಶ್ರೀರಕ್ಷಾ ಪ್ರಿಯರಾಮ್, ಗಣೇಶ್ ದೇಸಾಯಿ, ವರ್ಷಾ ಸುರೇಶ್ ಭಾವಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT