ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆ ಬಗೆ ನೀರ ಕಾಯಕ...

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನೀರ ಮಿತ ಬಳಕೆ
ನೀರನ್ನು ಹಿತಮಿತವಾಗಿ ಬಳಸಿ ಉಳಿತಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ನಾನು ನೀರನ್ನು ಅನಗತ್ಯವಾಗಿ ಬಳಸುವುದಿಲ್ಲ. ತರಕಾರಿ ಸೊಪ್ಪು ತೊಳೆದ ನೀರನ್ನು ಪಾತ್ರೆ ತೊಳೆಯಲು ಬಳಸುತ್ತೇನೆ. ನನ್ನ ಮಗುವನ್ನು ಬಾತ್‌ಟಬ್‌ನಲ್ಲಿ ಕೂರಿಸಿ ಸ್ನಾನ ಮಾಡಿಸುತ್ತೇನೆ. ಈ ನೀರನ್ನು ಶೌಚಾಲಯ ತೊಳೆಯಲು ಬಳಸುತ್ತೇನೆ. ಮಳೆ ನೀರನ್ನೂ ವ್ಯರ್ಥ ಮಾಡದೆ ಬಳಸುತ್ತೇನೆ.
-ಭಾಗ್ಯಶ್ರೀ, ಜಲಗೇರಿ, ಎಲಕ್ಟ್ರಾನಿಕ್ ಸಿಟಿ

*
ಹಲವು ವಿಧದಲ್ಲಿ ನೀರು ಉಳಿತಾಯ
ಮನೆಯಿಂದ ಹೊರಗೆ ಹೋಗುವ, ರಾತ್ರಿ ಮಲಗುವ ಮುನ್ನ ನಲ್ಲಿಗಳನ್ನು ಸರಿಯಾಗಿ ನಿಲ್ಲಿಸುತ್ತೇನೆ. ಅಕ್ಕಿ, ಸೊಪ್ಪು, ತರಕಾರಿ, ಬೇಳೆ ತೊಳೆದ ನೀರನ್ನು ಗಿಡಗಳಿಗೆ ಹಾಕುತ್ತೇನೆ. ಪುಟ್ಟ ಮಕ್ಕಳಿಗೆ ಸ್ನಾನಕ್ಕೆ ಚಿಕ್ಕ ಮಗ್ ಕೊಡುತ್ತೇನೆ ಗಂಡಸರು ಕ್ಷೌರ ಮಾಡುವಾಗಲೂ ಬೇಕಾದಾಗ ಮಾತ್ರ ನಲ್ಲಿ ಬಳಸುತ್ತಾರೆ, ಅಡುಗೆ ಮನೆಯ ಸಿಂಕ್‌ ಬಳಿ ಒಂದು ಬಕೆಟ್ ನೀರು ಇಟ್ಟುಕೊಂಡು ಆ ನೀರು ಬಳಸುತ್ತೇನೆ. ವಾರಕ್ಕೆ ಒಂದು ದಿನ ಮಾತ್ರ ಬಾಗಿಲಿಗೆ ನೀರು ಹಾಕುವುದು ಮತ್ತು ಉಳಿದ ದಿನ ಚೆನ್ನಾಗಿ ಗುಡಿಸುತ್ತೇನೆ. ಶೌಚಾಲಯದಲ್ಲಿ ಮಿತವಾಗಿ ಫ್ಲಶ್ ಮಾಡುತ್ತೇವೆ.
-ಸರೋಜಾ ನಾರಾಯಣರಾವ್, ಬನಶಂಕರಿ

*
ನೀರಿನ ಮಿತ ಬಳಕೆಗೆ ವಿನಂತಿಸುತ್ತೇನೆ
ನಮ್ಮ ಮನೆಯಲ್ಲಿ ಯಾವ ಕೋಣೆಯಲ್ಲಿರುತ್ತೇವೊ ಅಲ್ಲಿ ಮಾತ್ರ ಸಂಜೆ ವಿದ್ಯುತ್ ದೀಪ ಹಾಕುವುದನ್ನು ರೂಢಿಸಿಕೊಂಡಿದ್ದೇವೆ. ಎರಡು ದಿನಗಳಿಗೊಮ್ಮೆ ವಾಶಿಂಗ್ ಮಷಿನ್‌ನಲ್ಲಿ ಕಡಿಮೆ ಟೈಮ್ ಸೆಟ್ ಮಾಡಿ ಬಟ್ಟೆಗಳನ್ನು ಒಗೆಯುತ್ತೇನೆ. ಅಕ್ಕಿ ತೊಳೆದ ನೀರನ್ನು ಶೋಧಿಸಿ ಅದನ್ನೇ ಅನ್ನ ಮಾಡಲು ಉಪಯೋಗಿಸುತ್ತೇನೆ. ಮನೆಗೆ ಯಾರೇ ನೆಂಟರು ಬಂದರೂ ಮುಲಾಜಿಲ್ಲದೆ ವಿನಯವಾಗಿ ನೀರಿನ ಮಿತ ಬಳಕೆಗೆ ವಿನಂತಿಸುತ್ತೇನೆ. ಬ್ರಶ್ ಮಾಡುವಾಗ ಮಗ್‌ನಿಂದ ನೀರು ತೆಗೆದುಕೊಂಡು ಉಪಯೋಗಿಸುತ್ತೇನೆ.
-ಲೀಲಾ ಚಂದ್ರಶೇಖರ, ಉತ್ತರಹಳ್ಳಿ

*
ಕುದಿಸಿ ಆರಿಸಿದ ನೀರು ಕುಡಿಯುತ್ತೇನೆ
ವಿದ್ಯುತ್ ಚಾಲಿತ ನೀರು ಶುದ್ಧೀಕರಣ ಯಂತ್ರದಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ಒಂದು ಲೀಟರ್ ಶುದ್ಧ ಕುಡಿಯುವ ನೀರು ಪಡೆಯಲು ಮೂರು ಲೀಟರ್ ನೀರನ್ನು ಅನುಪಯುಕ್ತ ಮಾಡಬೇಕಾದ ಪರಿಸ್ಥಿತಿ ಹೀಗಾಗಿ ನಾನು ಯಂತ್ರವನ್ನು ಬಳಸದೆ ನೀರನ್ನು ಕುದಿಸಿ ಆರಿಸಿ ಕುಡಿಯುವ ಪದ್ಧತಿ ರೂಡಿಸಿಕೊಂಡಿದ್ದೇನೆ. ಶುದ್ಧೀಕರಣ ಯಂತ್ರವನ್ನು ಆದಷ್ಟೂ ಕಡಿಮೆ ಬಳಸುತ್ತೇನೆ.
-ಎಚ್.ಬಿ.ಜ್ಯೋತಿಬಸವರಾಜ್, ನಂದಿನಿ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT